ಪೊಲೀಸರಿಗೆ ತನಿಖಾ ಶ್ರೇಷ್ಠತೆಯ ಪದಕ

5 years ago

ದೆಹಲಿ: ಕರ್ನಾಟಕದ 6 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ತನಿಖಾ ಶ್ರೇಷ್ಠತೆಯ ಪದಕ ದೊರೆತಿದೆ. ಕೇಂದ್ರ ಗೃಹ ಸಚಿವಾಲಯದಿಂದ ಉತ್ತಮ ತನಿಖಾ ಶ್ರೇಷ್ಠ ಪ್ರಶಸ್ತಿ ಪ್ರಕಟವಾಗಿದ್ದು, 2021ನೇ ಸಾಲಿನಲ್ಲಿ 152 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪದಕ ವಿಜೇತ ಪೊಲೀಸ್ ಅಧಿಕಾರಿಗಳ ಪಟ್ಟಿ

  1. ಪರಮೇಶ್ ಅನಂತ್ ಹೆಗ್ಡೆ, ಡಿವೈಎಸ್ಪಿ, ಮಂಗಳೂರು ವಿಭಾಗ
  2. ಹೆಚ್.ಎನ್.ಧರ್ಮೇಂದ್ರ, ಎಸಿಪಿ, ಸಿಸಿಬಿ, ಬೆಂಗಳೂರು
  3. ಬಾಲಕೃಷ್ಣ.ಸಿ, ಡಿವೈಎಸ್ಪಿ, ಎಸ್.ಟಿ.ಎಫ್, ಬಿಡಿಎ, ಬೆಂಗಳೂರು
  4. ಮನೋಜ್ ಎನ್ ಹೊವಳೆ, ಪೊಲೀಸ್ ಇನ್ಸ್ ಪೆಕ್ಟರ್, ಬೆಂಗಳೂರು
  5. ದೇವರಾಜ್ ಟಿ.ವಿ., ಸರ್ಕಲ್ ಇನ್ಸ್ ಪೆಕ್ಟರ್, ದಾವಣಗೆರೆ
  6. ಶಿವಪ್ಪ ಸಟ್ಟೆಪ್ಪ ಕಮಟಗಿ, ಪೊಲೀಸ್ ಇನ್ಸ್ ಪೆಕ್ಟರ್, ಹುಬ್ಬಳ್ಳಿ

ಈ ಪ್ರಶಸ್ತಿಯನ್ನು ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ ಉತ್ತೇಜಿಸುವ ಸಲುವಾಗಿ ನೀಡಲಾಗುತ್ತಿದೆ. 2018ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು, ಶ್ರೇಷ್ಠ ವೃತ್ತಿಪರತೆ ಹೊಂದಿರುವ ಅಧಿಕಾರಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಕೊಡಮಾಡಲಾಗುತ್ತಿದೆ.

Leave a Reply