ಶ್ರೀ ವಾಲ್ಮೀಕಿ ಜಾತ್ರೆ -2022: ನಂಜನಗೂಡು ತಾಲೂಕು ಜನಜಾಗೃತಿ  ಪೂರ್ವಭಾವಿ ಸಭೆ

4 years ago

ಮೈಸೂರು: ಮೈಸೂರಿನ ವಾಲ್ಮೀಕಿ ಸಮುದಾಯ ಭವನದಲ್ಲಿ ಶ್ರೀ ವಾಲ್ಮೀಕಿ ಜಾತ್ರೆ -2022  ಪೂರ್ವಭಾವಿ ಸಭೆ ನಡೆಯಿತು. ಸಭೆಯ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರು, ರಾಜ್ಯದಲ್ಲಿ ಬೇಡ, ವಾಲ್ಮೀಕಿ, ನಾಯಕ ಸಮುದಾಯವೂ ಸಹ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕೆನ್ನುವ ಉದ್ದೇಶದಿಂದ ಚಳ್ಳಕೆರೆ ತಿಪ್ಪೇಸ್ವಾಮಿಯವರು ಹರಿಹರ ತಾಲೂಕಿನ ರಾಜನಹಳ್ಳಿಯ 25 ಎಕರೆ ಕೃಷಿ ಭೂಮಿಯನ್ನು ಋಷಿ ಭೂಮಿಯನ್ನಾಗಿ ಮಾಡಿ ಮಠ ಸ್ಥಾಪನೆ ಮಾಡಿದರು. ಶ್ರೀ ಮಠದ ಮೊದಲನೇ ಜಗದ್ಗುರುಗಳಾಗಿ ಶ್ರೀ ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮೀಜಿಯವರು ಈ ಸಮುದಾಯವನ್ನು ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ಸಂಘಟಿಸಿದ್ದರು ಎಂದರು.

ನಂತರ ಸನ್ಮಾನ್ಯ ಸತೀಶ್ ಜಾರಕಿಹೊಳಿ ಮತ್ತು ಸಮಾಜದ ಹಿರಿಯ ಮುಖಂಡರ ನೇತೃತ್ವದಲ್ಲಿ ಎರಡನೇ ಜಗದ್ಗುರುಗಳಾಗಿ ನಾವು ಪಟ್ಟಾಧಿಕಾರ ವಹಿಸಿಕೊಂಡು ಗ್ರಾಮದರ್ಶನ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಈ ಸಮುದಾಯವನ್ನು ಸಂಘಟಿಸಲು ಮುಂದಾದಾಗ ಸಮಾಜದ ಹಿರಿಯರು ಮುಖಂಡರುಗಳು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯದಂತೆ ಈ ಸಮುದಾಯ ಪಕ್ಷಾತೀತವಾಗಿ ಒಂದೇ ವೇದಿಕೆಗೆ ಸೇರಿದಾಗ ಮಾತ್ರ ಸಮುದಾಯ ಜಾಗೃತವಾಗಿದೆ ಎಂಬ ಸಂದೇಶ ನೀಡುವ ನಿಧಾ೯ರ ಕೈಗೊಂಡಾಗ ಶ್ರೀ ಮಠದಲ್ಲಿ ಜಾತ್ರೆ ಆಯೋಜಿಸಿ, ಸಮಾಜವನ್ನು ಜಾತ್ರೆ ಮೂಲಕ ಜಾಗೃತಿಗೊಳಿಸಿ ಸಮುದಾಯದ ಹತ್ತು ಹಲವು ಬೇಡಿಕೆಗಳನ್ನು ಸಕಾ೯ರಕ್ಕೆ ಆಗ್ರಹಿಸಬೇಕು ಆ ಮೂಲಕ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಬೇಕು ಎಂದರು.

ಜನಸಮುದಾಯದ ಜಾತ್ರೆ ಯಾವುದೇ ಒಬ್ಬ ವ್ಯಕ್ತಿಯನ್ನು ವೈಭವೀಕರಿಸುವ ಜಾತ್ರೆಯಲ್ಲ.  ಸಮುದಾಯದ ಕಟ್ಟ ಕಡೆಯ ವ್ಯಕ್ತಿಯೂ ಸಹ ತನ್ನ ದುಡಿಮೆಯಲ್ಲಿ ಭಕ್ತಿಯಿಂದ ನೀಡಿದ ದೇಣಿಗೆಯಿಂದ ಇಂದು ಗುರುಪೀಠ ನಿಮ್ಮೆಲ್ಲರ ಈ ಸಮಾಜದ ಆಸ್ತಿಯಾಗಿದೆ. ನೂರಾರು ವರ್ಷ ಪರಂಪರೆ ಹೊಂದಿರುವ ಮಠಗಳಂತೆ, ಸಮಾಜಗಳಂತೆ, ನಮ್ಮ ಸಮಾಜವೂ ಕೂಡಾ ಒಂದು ಶಕ್ತಿಯಾಗಬೇಕು. ಅದೇ ಕಾರಣಕ್ಕೆ ಶ್ರೀಮಠ ಶಕ್ತಿ ಮತ್ತು ಭಕ್ತಿ ಕೇಂದ್ರವಾಗಿ, ಸಮಾಜದ ಹತ್ತು ಹಲವು ಬೇಡಿಕೆಗಳಿಗೆ ಧ್ವನಿಯಾಗಿ ಕೆಲಸ ನಿವ೯ಹಿಸುತ್ತಿದ್ದೇವೆ ಎಂದರು.

ಈಗಾಗಲೇ ಸಮುದಾಯ ಸಂಘಟಿತವಾಗಿದೆ, ಜಾಗೃತವಾಗಿದೆ. ಜಾಗೃತ ಸಮಾಜದ ಸಂಘಟನೆಯನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಇವುಗಳೆಲ್ಲವುಗಳಿಂದ ಬೇಡ ವಾಲ್ಮೀಕಿ ನಾಯಕ  ಸಮಾಜ ಜಾಗೃತವಾಗಿರಬೇಕೆಂದು ಕರೆನೀಡಿದರು.

ಸಭೆಯಲ್ಲಿ ವಿ ಎಸ್ ಎಸ್ ಪದಾಧಿಕಾರಿಗಳು, ತಾ ಅಧ್ಯಕ್ಷರು, ಸಮಾಜದ ಮುಖಂಡರು, ಹಿರಿಯರು, ಯುವಕರು, ನಂಜನಗೂಡು ತಾಲೂಕಿನ ಪ್ರತಿನಿಧಿಗಳು ಹಾಜರಿದ್ದರು.

Leave a Reply