ಭಾರತ ಗೆದ್ದಿತ್ತು. ಇತಿಹಾಸ ಮತ್ತೊಮ್ಮೆ ರಚಿಸಲಾಗಿತ್ತು

2 years ago

ಸೋತು ಗೆದ್ದವರು

೨೦ನೆಯ ಓವರ್ ನಲ್ಲಿ ಭಾರತ ಗೆದ್ದಿತು. ೧೫ ನೆಯ ಓವರಿನಲ್ಲಿ ಸೌತ್ ಆಫ್ರಿಕಾ ಗೆದ್ದಿತ್ತು. ಜಯಲಕ್ಷೀ  ಮಾಲೆ ಯಾರಿಗೆ ಹಾಕಲಿ? ಎಂದು ಕೇಳುತ್ತಿದ್ದಳು. ೩೦ ಬಾಲುಗಳಲ್ಲಿ ಮೂವತ್ತು ರನ್ನು ಬೇಕಾಗಿದ್ದವು. ಆಗ ಸೌತ್ ಆಫ್ರಿಕಾ ಆಲ್ ಮೋಸ್ಟ್ ಗೆದ್ದಿತ್ತು.

ಮ್ಯಾಚ್ ವಿನ್ನರ್ ಕುಲ್ದೀಪ ಯಾದವ ‘ಮ್ಯಾಚ ಲೂಜರ’ ಆಗಿ ಬದಲಾಗಿದ್ದ. ಅಕ್ಷರನ ಅಕ್ಷರಗಳು ಪಿಚ್ ಮೇಲೆ ಮೂಡುತ್ತಿರಲಿಲ್ಲ. ಕ್ಲಾಸಿಕ್ ಕ್ಲಾಸನ್ನನ ಬ್ಯಾಟಿಗೆ ಬಡಿದ ಬಾಲುಗಳೆಲ್ಲ ಬೌಂಡರಿ ಆಚೆಗೆ ಬೀಳುತ್ತಿದ್ದವು.

ಭಾರತ ಅಸ್ಮಿತೆಯಾದ ಕೊಹ್ಲಿಯನ್ನು ಇಂಗ್ಲಿಷ್ರ ನಾಸಿರ್ ಕುಟುಕುತ್ತಿದ್ದ. ಮುವತ್ತನಾಲ್ಕು ಬೌಲಗಳಲ್ಲಿ ಒಂದೆ ಒಂದು ಬೌಂಡರಿ ಬಾರಿಸಿರಲಿಲ್ಲ ಎಂದು ಗಾಯದ ಮೇಲೆ ಬರೆ ಎಳೆಯುತ್ತಿದ್ದ. ಭಾರತವನ್ನು  ಸೋಲಿಸುವ ನುಡಿಗಳಿಗೆ ಶಕ್ತಿ ತುಂಬಲಾರಂಭಿಸಿದ್ದ ನಾಸಿರ್.

ನಾನು ಎದ್ದು ಕುರ್ಚಿ ಬದಲಿಸಿ ಬೆರೊಂದು ಕುರ್ಚಿಯಲ್ಲಿ ಕುಕ್ಕರು ಬಡಿದೆ. ಹೆಂಡತಿ ಉಟದ ತಟ್ಟೆಯನ್ನು ತಂದಿಟ್ಟಳು ಅನಾವಶ್ಯಕ ರೇಗಾಡಲಾರಂಭಿಸಿದೆ. ಎಲ್ಲವೂ ಮುಗಿದಿತ್ತು.

ಹಾರ್ದಿಕ ಬಂದ ಅವನ ಮೊದಲೊಂದು  ಓವರ್ ಎಕ್ಸಪೇನ್ಸಿವ್ಹ ಆಗಿತ್ತು. ‘ಇವನೇನು? ನನಗಾವ ಲೆಕ್ಕ’ ಎಂದಿದ್ದ ಕ್ಲಾಸನ್. ಅನಾವಶ್ಯಕ ಪ್ರಯತ್ನ ಮಾಡಿದ್ದ. ಬ್ಯಾಟ್ ಬೀಸಿದ, ಚಂಡು ಬ್ಯಾಟ್ ತುದಿಗೆ ತಗುಲಿತ್ತು. ಆಪರೇಷನ್ ಆದ ಹುಡುಗ ಮಾಡಿದ್ದ ಸೌತ ಆಫ್ರಿಕಾ ತಂಡಕ್ಕೆ ಆಪರೇಶನ್.

ಭುಮ್ರಾಗೆ ಬಾಲ್ ನೀಡಲಿ ಎಂದು ಮನಸ್ಸು ಹೇಳುತ್ತಿತ್ತು. ಇರುವದೊಂದು ಓವರು ಅದನ್ನೊಂದು ಕಳೆದುಕೊಂಡರೆ? ಮುಂದಿನ ಗತಿ? ನಾನೂ ರೋಹಿತ್ನಾಗಿದ್ದೆ. ಮಾಡು ಇಲ್ಲವೆ ಮಡಿ. ಈಗಲೇ ಅವನಿಗೆ ಕೊಡಬೇಕು ಎಂದಿತ್ತು ಗಟ್ಟಿ ಮನಸ್ಸು.

ಬುಂ ಬುಂ ಭುಮ್ರಾ ಬಂದ. ಕಿಲ್ಲರ್ ಮಿಲ್ಲರ್ ಎದುರಿಗಿದ್ದ, ಒಂದು ರನ್ ಹೊಡೆದ. ಆರುವರೆ ಫುಟಿನ ಎತ್ತರದ ಹುಡುಗ ಸ್ಟಂಪ  ಎದುರಿಗೆ. ಭುಮ್ರಾ ಭಜಾಯಿಸಿದ, ಆರುವರೆ ಪುಟಿನ ಸ್ಟಂಪ್ ಎಗರಿ ಬಿತ್ತು.

ಇನ್ನೂ ಆಟ ಮುಗಿದಿಲ್ಲ, ಭೂಮ್ರಾ ಓವರ್ ಗಳು ಮುಗಿದು ಹೋಗಿವೆ. ಮುಂದೆ? ಮುಂದೆ??   ಫೌಜ ಇರಲಿ ಆಟದ ಮೈದಾನ ಇರಲಿ ಜುಟ್ಟ ಕಟ್ಟಿ ಕೊಂಡ ಸಿಂಹ ಬಂದರೆ ಬಂದರೆ ನಡುಕ ಶುರುವಾಗುವುದು ಎದುರಾಳಿಗಳಿಗೆ. ಅನುಭವ ಸಾಲದ ಸಿಂಹದಮರಿ ಅದು. ಎದುರಿಗೆ  ಮಹಾರಾಜನಿದ್ದ, ಅವನಿಗೆ ಗಾಳಿ ಹಾಕುತ್ತಿದ್ದ ಕಿಲ್ಲರ ಮಿಲ್ಲರ.

ಮಹಾರಾಜಗೆ ಬೇಕಾಗಿತ್ತು  ಪಟಿಯಾಲ ಪೆಗ್, ‘ನಿಮ್ಮಂತವರಿಗೇಕೆ ಅಷ್ಟೊಂದು’, ಹಾಕಿದಷ್ಟು ಕುಡಿ ಎಂದು  ಮೂರು ಹನಿ ಹಾಕಿ ‘ನಡೆ ಆಚೆ’ ಎಂದು ಬಿಟ್ಟ ಕಂಜೂಸ್ ಅರ್ಶದ್.

ಆಟ ರಂಗೇರಿತ್ತು, ಜಯಲಕ್ಷಿ ಚಂಚಲೆಯಾಗಿದ್ದಳು.

ಕೊನೆಯ ೬ ಬಾಲುಗಳು, ಬೇಕಾಗಿದ್ದವು ೧೫ ರನ್ನು. ಎಂತಹ ಬಾಲನ್ನು ಬೌಂಡರಿಗಟ್ಟುವ ತಾಕತ್ತಿನ ಕಿಲ್ಲರ್ ಮಿಲ್ಲರ್ ಎದುರಿನಲ್ಲಿ. ಹಾರ್ಧಿಕ ವಿಲನ್ ಆಗುತ್ತಾನೋ ಹೀರೋ ಆಗುತ್ತಾನೋ ಎಂದು ಗಾಭರಿಗೆ ಬಿದ್ದಿದ್ದವು ನೂರಾರು ಕೋಟಿ ಜೀವಗಳು. ಮಿಲ್ಲರನ ಗಿರಣಿಯಲ್ಲಿ ಕಿಲ್ ಆಗಲಿಲ್ಲ ಹಾರ್ಧಿಕ್ ಹಾಕಿದ ಬಾಲುಗಳು. ಹಾರ್ಧಿಕ ಬಾಜಿಗರ್ ಆಗಿ ಬದಲಾದ. ಬಾಜಿಗರ್ ಗೆ ಹಣ ಕಟ್ಟಿದ್ದ, ಆಗಲೆ ಮೊಡದ ಮರೆಯಿಂದ ಆಚೆ ಬಂದಿದ್ದ ಸೂರ್ಯ.

ಭಾರತ ಗೆಲ್ಲ ಬಹುದೆಂದು ಆಸೆ ಬಂತು ಕೊನೆಯ ಎರಡು ಬಾಲು ಹಾರ್ಧಿಕನ ಹಾರೈಕೆ ಕೂಡಿತ್ತು. ಭಾರತ ಗೆದ್ದಿತ್ತು. ಇತಿಹಾಸ ಮತ್ತೊಮ್ಮೆ ರಚಿಸಲಾಗಿತ್ತು.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply