ಬಸವ ಸಭಾಂಗಣ ನಾಮಕರಣ ಸಮಾರಂಭ
ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ನವಿಕೃತಗೊಂಡಿರುವ ಕಛೇರಿ ಉದ್ಘಾಟನೆ ಹಾಗೂ ಕೆಳಮಹಡಿ ಬಸವ ಸಭಾಂಗಣ ಎಂದು ನಾಮಕರಣ ಹಾಗೂ ಶ್ರೀ ಗೌರಿ ಗಣಪತಿ ಉತ್ಸವ ಆಚರಣೆ ಮಾಡಲಾಯಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಆರ್.ದೇವದಾಸ್, ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಡಾ.ಅವಿನಾಶ್ ಮೆನನ್, ವಲಯ ಆಯುಕ್ತರಾದ ಸ್ನೇಹಲ್, ಉಪ ಆಯುಕ್ತ ಮಂಜುನಾಥ್ ಸ್ವಾಮಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಉದ್ಘಾಟನೆ ನೆರವೇರಿಸಿದರು.
ನ್ಯಾ. ಆರ್.ದೇವದಾಸ್ ಮಾತನಾಡಿ, ಬಿಬಿಎಂಪಿ ಆವರಣದಲ್ಲಿ ನೌಕರರ ಸಂಘದ ಕಟ್ಟಡದ ಉದ್ಘಾಟನೆಯಿಂದ ಅಧಿಕಾರಿ ನೌಕರರ ಸಂಘಟನೆ ಮತ್ತು ಬೆಂಗಳೂರು ನಗರ ಅಭಿವೃದ್ದಿ ನಿಮ್ಮಿಂದ ನೆರವೇರಲಿ ಎಂದರು.
ಸಾರ್ವಜನಿಕರ ಸಹಕಾರವಿದ್ದಾಗ ಸಮಸ್ಯೆಗಳು ಪರಿಹಾರವಾಗುತ್ತದೆ, ಜನರು ಅಧಿಕಾರಿ, ನೌಕರರ ಜೊತೆಯಲ್ಲಿ ಸಾಮರಸ್ಯದಿಂದ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಿ ಎಂದರು.
ಉಪ ಲೋಕಾಯುಕ್ತ ಬಿ.ವೀರಪ್ಪ ಮಾತನಾಡಿ, ಅಧಿಕಾರಿ ಮತ್ತು ನೌಕರರಿಗೆ ಗೌರವ ಕೊಡಬೇಕು. ನೌಕರರು ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ಬಿಬಿಎಂಪಿ ಕಸ ವಿಲೇವಾರಿ ಸಮರ್ಪಕವಾಗಿ ಮಾಡಬೇಕು, ಅಧಿಕಾರಿಗಳು ಮನಸ್ಸು ಮಾಡಿದರೆ ಗಾರ್ಡನ್ ಸಿಟಿ ನಿರ್ಮಾಣ ಮಾಡಬಹುದು ಎಂದರು.
ಗುಂಡಿಯಲ್ಲಿ ಬಿದ್ದು ಹಲವಾರು ಸಾವಿನಪ್ಪಿದರು, ತಲೆಗೆ ಹೆಲ್ಮೆಟ್ ಹಾಕದೇ ಇರುವುದು ಒಂದು ಕಾರಣವಾಗಿದೆ. ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ಸಮವಸ್ತ್ರ ಕೊಟ್ಟಿಲ್ಲ. ಇದು ಶೋಚನಿಯ ವಿಷಯವಾಗಿದೆ, ಪೌರ ಕಾರ್ಮಿಕರು ಸ್ವಚ್ಚತಾ ವಾರಿಯರ್ಸ್ ಗಳು. ಅವರ ಆರೋಗ್ಯದ ಕಡೆ ಗಮನಹರಿಸದೇ ನಗರ ಸ್ವಚ್ಚತೆ ಮಾಡುತ್ತಿದ್ದಾರೆ ಎಂದರು.
ತಂದೆ, ತಾಯಿ ಮತ್ತು ಹಳೆಯ ನೆನಪುಗಳು ನಾವು ಉನ್ನತ ಸ್ಥಾನಕ್ಕೆ ಹೋದರು ಮರೆಯಬಾರದು. ಆಸೆ ಪಡದೇ ನಿಸ್ವಾರ್ಥವಾಗಿ ಕೆಲಸ ಮಾಡಬೇಕು, ಗಿಡ, ಮರ ಪ್ರಕೃತಿಯಲ್ಲಿ ಬೆಳಯುತ್ತದೆ ಮತ್ತು ಹುಲಿ, ಸಿಂಹ ಪ್ರಾಣಿಗಳು ಬೇಟೆಯಾಡಿ ತಿನ್ನುವೆ. ಆದರೆ ಮನುಷ್ಯ ಪರಿಸರ ಹಾಳು ಮಾಡುತ್ತಾನೆ, ತನ್ನ ಆಸೆಯಿಂದ ಸಮಾಜದಲ್ಲಿ ಭ್ರಷ್ಟಾಚಾರ ಮಾಡುತ್ತಾನೆ. ಆಸೆಗೆ ಮಿತಿಯೆ ಇಲ್ಲ ಎಂದು ಬದುಕುತ್ತಾನೆ ಎಂದರು.
ನಾವು ಸೇವಾಮನೋಭಾವನೆಯಿಂದ ಕೆಲಸ ಮಾಡಬೇಕು, ಸಮಾಜದಲ್ಲಿ ಉತ್ತಮ ಅಧಿಕಾರಿಗಳು, ನೌಕರರು ಇದ್ದಾರೆ, ನಿಷ್ಟಾವಂತರಾಗಿ ಬಾಳಿ, ಬಸವ ತತ್ವದಲ್ಲಿ ಎಲ್ಲರಿಗೂ ಸಾಗಿದಾಗ ಸಮಾಜದ ಅಭಿವೃದ್ದಿ ಸಾಧ್ಯ ಎಂದರು.
ತುಷಾರ್ ಗಿರಿನಾಥ್ ಮಾತನಾಡಿ, ಅಧಿಕಾರಿ ಮತ್ತು ನೌಕರರು ಸಂಘಟನೆ ಮತ್ತು ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ ಎಂದರು.
ಬೆಂಗಳೂರು ನಗರ ಬೆಳಯುತ್ತಿರುವ ನಗರ. ಸಮಸ್ಯೆಗಳು ನಿತ್ಯನಿರಂತರ, ಸಮಸ್ಯೆಗಳ ನಿವಾರಣೆಗಾಗಿ ಬಿಬಿಎಂಪಿ ಅಧಿಕಾರಿ, ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ, ಸಾರ್ವಜನಿಕರ ಜನಸ್ನೇಹಿ ಆಡಳಿತ ನೀಡುವುದು ನಮ್ಮ ಗುರಿ ಎಂದರು.
ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಎ.ಜಿ.ಬಾಬಣ್ಣ, ಎಸ್.ಜಿ.ಸುರೇಶ್, ಕೆ.ಜಿ.ರವಿ, ಡಿ.ರಾಮಚಂದ್ರ, ಡಾಶೋಭ, ರೇಣುಕಾಂಬ, ಮಂಜೇಗೌಡ, ಬಿ.ರುದ್ರೇಶ್, ಮಂಜುನಾಥ್ ಎನ್,ಸಂತೋಷ್ ಕುಮಾರ್ ನಾಯ್, ಹೆಚ್.ಬಿ.ಹರೀಶ್, ಉಮೇಶ್, ಸಂತೋಷ್, ನರಸಿಂಹರವರು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಹಾಜರಿದ್ದರು.




