ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಟೆನ್ಸಿಸ್ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ 26ನೇ ಸೀನಿಯರ್ ಮತ್ತು ಹಿರಿಯರ ಟೆನ್ನಿಸ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಲಾಗಿತ್ತು.
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
- ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?
ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್.ಉಗ್ರಪ್ಪ , ಮಾಜಿ ಬಿಬಿಎಂಪಿ ಸದಸ್ಯ ಮೋಹನ್ ಕುಮಾರ್, ಯುವ ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ, ಕೆ.ಟಿ.ಎಸ್.ವಿ ಅಧ್ಯಕ್ಷರಾದ ತುಳಸಿರಾಮ್, ಪ್ರಧಾನ ಕಾರ್ಯದರ್ಶಿ ವಿ.ನಾಗೇಶ್ವರ್ ರಾವ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಲತಾಗೌಡ ಮತ್ತು ಚಂದ್ರಶೇಖರ್, ಅಂತಾರಾಷ್ಟ್ರೀಯ ಮಾಜಿ ಓಲಂಪಿಕ್ ಕ್ರೀಡಾಪಟು ಸತ್ಯನಾರಾಯಣ್ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು.
ವಿ.ಎಸ್.ಉಗ್ರಪ್ಪ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕವಾಗಿ ಸಂತೋಷ ಮತ್ತು ಆರೋಗ್ಯ ಲಭಿಸುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಹಕಾರ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಮನುಷ್ಯ ಆರೋಗ್ಯವಂತರಾಗಿ ಮತ್ತು ಮಾನಸಿಕವಾಗಿ ಸಧೃಡವಾಗಿ ಇರಬೇಕು ಎಂದರೆ ಯೋಗ, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲ ರಾಜ್ಯದ ಕ್ರೀಡಾಪಟುಗಳು ದೇಶಕ್ಕಾಗಿ ಆಡಬೇಕು, ಜಾತಿ, ಧರ್ಮ ಮುಖ್ಯವಲ್ಲ ಮಾನವೀಯತೆಯ ಧರ್ಮ ಮುಖ್ಯ. ಯುವಕರ ಕೈಯಲ್ಲಿ ದೇಶ ಇದೆ. ಅದರಿಂದ ಯುವ ಸಮುದಾಯ ಮಾನಸಿಕ, ದೈಹಿಕ ಸಧೃಢವಾದ ದೇಶ ಕಟ್ಟಬಹುದು ಎಂದರು.
ಎರಡು ದಿನಗಳ ಕಾಲ ನಡೆಯುವ ಟೆನ್ಸಿಲ್ ವಾಲಿಬಾಲ್ ಪಂದ್ಯದಲ್ಲಿ ಕರ್ನಾಟಕ, ಹರಿಯಾಣ, ದೆಹಲಿ, ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಹಿಮಾಚಲಪ್ರದೇಶ, ಛತ್ತಿಸ್ ಗಡ್ ರಾಜ್ಯದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.




