ನಾವೇ ಎಲ್ಲೋ ತಪ್ಪು ಮಾಡ್ತಾ ಇದೀವಾ? ನಾವು ಉದ್ವೇಗಗೊಂಡು ಬರೆಯೋದು, ಬೈಯ್ಯೋದು, ನಿಷ್ಠುರ ಆಗೋದು, ಟಾರ್ಗೆಟ್ ಆಗೋದು, ಒಂದಷ್ಟು ಜನರ ವಿರೋಧ ಕಟ್ಕೊಳೋದು, ನೋಟೆಡ್ ಆಗೋದು, ನಿಷ್ಠೆ ಬದ್ಧತೆ ಇಟ್ಕೊಂಡು ಇವರುಗಳಿಗಾಗಿ ನಮ್ಮ ಸಮಯ ನಮ್ಮ ವೈಯಕ್ತಿಕ ಜೀವನ ನಮ್ಮ ನೆಮ್ಮದಿ ಖುಷಿ ಎಲ್ಲವನ್ನೂ ತ್ಯಾಗ ಮಾಡೋದು. ಇಲ್ಲಿಗೆ ಇದೆಲ್ಲಾ ಸಾಕಪ್ಪ ಅನಿಸಿದೆ. ದೊಡ್ಡವರೆಲ್ಲಾ ಒಂದೇ. ನಾವೇಕೆ ಇವರುಗಳ ಅಧಿಕಾರಕ್ಕಾಗಿ ಕಾಲುಚಪ್ಪಡಿಗಳಾಗಬೇಕು? ಒಂದಷ್ಟು ಓದು ಒಂದಷ್ಟು ದುಡಿಮೆ, ಒಂದಷ್ಟು ಒಳ್ಳೆಯ ಗೆಳೆಯರು, ಒಂದಷ್ಟು ಒಳ್ಳೆಯ ವಿಚಾರ, ಬರೆಹ, ಪ್ರವಾಸ ಅನ್ಕೊಂಡು, ನಮ್ಮ ಕುಟುಂಬ ನಮ್ಮ ಸ್ನೇಹಿತರು, ನಮ್ಮ ನೆರೆಹೊರೆ ಪರಿಸರ ಅನ್ಕೊಂಡು ಇದ್ದುಬಿಡಬೇಕು. ಈಗಿನ ಪರಿಸ್ಥಿತಿಯಲ್ಲಿ ಯಾರದ್ದಾದರೂ ಪರ ಮಾತನಾಡುವುದು ಪ್ರಮಾದ ಯಾರನ್ನಾದರೂ ವಿಮರ್ಶಿಸುವುದೂ ಅಪರಾಧ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಇಲ್ಲಿಯ ತನಕ ಕಾಂಗ್ರೆಸ್ ಪಕ್ಷದಿಂದಲಾಗಲೀ ಅಲ್ಲಿಯ ಯಾವುದೇ ನಾಯಕರಿಂದಲಾಗಲೀ ವೈಯಕ್ತಿಕವಾಗಿ ಅನುಕೂಲ ಅವಕಾಶ ಪಡೆಯದ ನನ್ನಂತವರು ಹೆಚ್ಚುಕಡಿಮೆ ಪ್ರೌಢಶಾಲೆಯಿಂದಲೇ ಕಾರ್ಯಕರ್ತರಾಗಿ ನಂಬಿದ ತತ್ವ ಸಿದ್ಧಾಂತಗಳನ್ನು ಬಿಟ್ಟುಕೊಡದೆ ಇಲ್ಲಿಯವರೆಗೆ ಬಡಿದಾಡುತ್ತಾ ಬಂದಿದ್ದೇವೆ. ನಾಲಕ್ಕಾಣೆ ಕಾಸಿನ ಆಸೆಯನ್ನೂ ಪಟ್ಟಿಲ್ಲ. ನಾವು ದುಡಿದ ಹಣ, ಒಂದಿಷ್ಟು ಕೂಡಿಟ್ಟುಕೊಂಡ ಕಾಸು ಎಲ್ಲವನ್ನೂ ಖಾಲಿ ಮಾಡಿಕೊಂಡು ಅರ್ಹತೆ ಇಲ್ಲದವರೆಲ್ಲಾ ಲೀಡರುಗಳಾಗಿ ಮೆರೆಯುವುದ ನೋಡಿಕೊಂಡು ಬಂದಿದ್ದೇವೆ. ಅಧಿಕಾರ ಅವಕಾಶ ಯಾರು ಯಾರಿಗೋ. ನಿಷ್ಠುರ ತೊಂದರೆ ಸಂಕಷ್ಟಗಳು ನನ್ನಂತವರಿಗೆ.
ಇದನ್ನೆಲ್ಲಾ ನೋಡಿದಾಗ ಇಂತಹ ವಿಚಾರಗಳ ಸಹವಾಸವೇ ಬೇಡ ಅನಿಸಿದೆ. ಯಾರದ್ದೊ ಲಾಭ ಅನುಕೂಲಕ್ಕೆ ನಾವು ಬಲಿಯಾಗುವುದಾದಕ್ಕೆ ಯಾವ ಅರ್ಥವೂ ಇಲ್ಲ. ನಮ್ಮ ಪ್ರತಿಭೆ ನಮ್ಮ ಸಮಯ ಎಲ್ಲವನ್ನೂ ನಮಗಾಗಿ ಇನ್ವೆಸ್ಟ್ ಮಾಡಿಕೊಂಡರೆ ನಾಳಿನ ಜೀವನ ಸಹನೀಯವಾಗುತ್ತದೆ…
ಯಾವ ಪಕ್ಷವೂ ಬೇಡ ಯಾವ ನಾಯಕರೂ ಬೇಡ ಯಾವ ಪಂಥವೂ ಬೇಡ. ನನ್ನದೊಂದು ಸಮಾನ ಮನಸ್ಕರ ದೊಡ್ಡ ಬಳಗವಿದೆ. ಕವಿಗಳು, ಕಲಾವಿದರು, ವಿದ್ಯಾರ್ಥಿಗಳು, ರೈತರು, ಗೆಳೆಯರು ಅಭಿಮಾನಿಗಳ ವೃಂದವಿದೆ. ತುಂಬು ಕುಟುಂಬವಿದೆ. ಅವರ ಜೊತೆಗೆ ಬದುಕಿದರೆ ಸಾಕು. ನಾವೆಲ್ಲಾ ಯುದ್ಧ ಮಾಡುವ ಸೈನಿಕರು. ಯುದ್ಧ ಮಾಡಿಸುವ ದೊಡ್ಡವರು ಅಂತಿಮವಾಗಿ ಒಂದೇ ವೇದಿಕೆಯಲ್ಲಿ ಕುಳಿತು ಹಾಲು ಕುಡಿದು ರಾಜಿ ಆಗುತ್ತಾರೆ. ಹೋರಾಡಿ ಸತ್ತ ಸೈನಿಕ ನಾಲ್ಕು ದಿನ ಬಿಟ್ಟು ಎಲ್ಲರ ಸ್ಮೃತಿಯಿಂದ ಮರೆಯಾಗುತ್ತಾನೆ. ನಾವು ಇವರುಗಳ ಸೈನಿಕರಾಗಬೇಕೆ? ಪ್ರಸ್ತುತ ಸನ್ನಿವೇಶ ಹೇಗಿದೆ ಎಂದರೆ ನಮ್ಮ ಸೈದ್ಧಾಂತಿಕ ವಿರೋಧಿಗಳಿಗೆ ಇರುವ ರಕ್ಷಣೆ ನಮಗಿಲ್ಲ. ತಮ್ಮ ನಾಯಕರಾದವರ ತಪ್ಪನ್ನೂ ಎಲ್ಲವನ್ನೂ ಸಮರ್ಥಿಸುವ ಪ್ರಗತಿಪರರ ಗುಂಪೂ ಇದೆ. ಯಾರಿಗೆ ಅವಕಾಶಗಳು ಬೇಕೊ ಅವರು ಹಾಗಿರುತ್ತಾರೆ. ನಮಗೆ ಅಂತದ್ದೆಲ್ಲಾ ಒಗ್ಗಲ್ಲ. ಇದು ಕಟು ವಾಸ್ತವ.
“ನಮ್ಮಷ್ಟಕ್ ನಾವಾಗಿ ಇದ್ದಿದ್ರಲ್ ಹಾಯಾಗಿ ಬಾಳೋದು ರತ್ನನ್ ಪರ್ಪಂಚ” ಅನ್ಕೊಂಡು ಉಳಿದ ಜೀವನಾನ ನಮಗಾಗಿ ಬದುಕೋದು ಸೂಕ್ತ ಅನಿಸಿದೆ. ಓದದೇ ಉಳಿದ ಬರೆಯದೇ ಉಳಿದ ನೂರಾರು ವಿಷಯಗಳಿವೆ. ಅತ್ತ ಗಮನ ಕೊಡುವ ಅನಿಸಿದೆ.
– ಸುರೇಶ ಎನ್ ಶಿಕಾರಿಪುರ, ಸಾಂಸ್ಕೃತಿಕ ಚಿಂತಕರು




