ಭುವನಂ ಗಗನಂ 25 ದಿನದ ಸಂಭ್ರಮದಲ್ಲಿ ಕ್ರೇಜಿಸ್ಟಾರ್
ಬೆಂಗಳೂರು: ರತ್ನನ್ ಪ್ರಪಂಚ ಸಿನಿಮಾ ಖ್ಯಾತಿಯ ಪ್ರಮೋದ್ ಹಾಗೂ ದಿಯಾ ಖ್ಯಾತಿ ಪೃಥ್ವಿ ಅಂಬರ್ ನಟನೆಯ ಭುವನಂ ಗಗನಂ ಚಿತ್ರ 25 ದಿನ ಪೂರೈಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ರೇಮಿಗಳ ದಿನದಂದು ತೆರೆಕಂಡ ಈ ಸಿನಿಮಾಗೆ ಆಫ್ ಸೆಂಚೂರಿಯತ್ತ ಸಾಗುತ್ತಿದೆ. ಕನ್ನಡ ಚಿತ್ರರಂಗ ಸದ್ಯದ ಪರಿಸ್ಥಿತಿ ನಡುವೆಯೂ ಭುವನಂ ಗಗನಂ ಚಿತ್ರ ಇಪ್ಪತ್ತೈದು ದಿನ ಪೂರೈಸಿದೆ.
ಈ ಸಂತಸದ ಕ್ಷಣಗಳನ್ನು ಚಿತ್ರತಂಡ ಸೆಲೆಬ್ರೇಟ್ ಮಾಡಿದೆ. ಇತ್ತೀಚೆಗೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಭುವನಂ ಗಗನಂ ಚಿತ್ರದ 25 ದಿನದ ಸಂಭ್ರಮಾಚರಣೆಗೆ ಹಮ್ಮಿಕೊಳ್ಳಲಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್, ನಿರ್ದೇಶಕ ಸಿಂಪಲ್ ಸುನಿ, ಚೇತನ್ ಕುಮಾರ್, ನೆನಪಿರಲಿ ಪ್ರೇಮ್ ಹಾಗೂ ಇಡೀ ಚಿತ್ರತಂಡ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದೇ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ಸಿನಿಮಾ ಇಂಡಸ್ಟ್ರೀಯಲ್ಲಿ ಸದ್ಯಕ್ಕೆ ನಗುನೇ ಇಲ್ಲ. ಆದರೆ ಇಲ್ಲಿ ನಗುತ್ತಿದ್ದೇವೆ. ಆ ನಗು ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಜನ ಥಿಯೇಟರ್ ಗೆ ಬರ್ತಿಲ್ಲ ಅಂತಿದ್ದಾರೆ. ಸಿನಿಮಾ ಚೆನ್ನಾಗಿದೆ ಎಂದರೆ ಜನ ಥಿಯೇಟರ್ ಒಳಗೆ ಬರುತ್ತಾರೆ. ಆ ಮುಖ ಬೇಕು, ಈ ಬೇಕು ಅನ್ನೋದು ಏನೂ ಬೇಡ. ಚೆನ್ನಾಗಿದ್ದರೆ ನುಗುತ್ತಾರೆ ಎನ್ನುವುದಕ್ಕೆ ಪ್ರೇಮಲೋಕನೇ ಸಾಕ್ಷಿ ಎಂದರು.
ವಾರಕ್ಕೆ 40 ಸಿನಿಮಾ ಬಂದರೆ ಟ್ರಾಫಿಕ್ ಜಾಮ್ ಆಗುತ್ತದೆ. ಚಿತ್ರರಂಗದಲ್ಲಿ ನಗುವಿನ ವಾತಾವರಣ ಬೇಕು. ನಾವು ಶೀಲ್ಡ್ ನೋಡುವುದನ್ನೇ ಮರೆತುಬಿಟ್ಟಿದ್ದೇವೆ. ಈಗ 25 ದಿನಕ್ಕೆ ಶೀಲ್ಡ್ ಶುರುವಾಗಿದೆ. ಆಗ 24 ವಾರಕ್ಕೆ ಶೀಲ್ಡ್ ಇತ್ತು. ನಿಮ್ಮ ಪಯಣ ಹೀಗೆ ಸಾಗಲಿ ಎಂದು ಚಿತ್ರತಂಡ ಶುಭಕೋರಿದರು.
ಈ ಚಿತ್ರದಲ್ಲಿ ರೆಚೆಲ್ ಡೇವಿಡ್ ಮತ್ತು ಅಶ್ವಥಿ ನಾಯಕಿಯರಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗಿರೀಶ್ ಮೂಲಿಮನಿ ಈ ಸಿನಿಮಾ ನಿರ್ದೇಶನ ಮಾಡಿದ್ದು ಎಂ. ಮುನೇಗೌಡ ನಿರ್ಮಾಣ ಮಾಡಿದ್ದಾರೆ.







