ಭಾರತದ ಪ್ರಜಾಪ್ರಭುತ್ವದ ವ್ಯಸ್ಥೆಯಲ್ಲಿ ಓರ್ವ ಜನಪ್ರತಿನಿಧಿ ಹೇಗಿರಬೇಕೆಂದು ಚಿಂತಿಸಿದವರು ಲೋಹಿಯಾ. ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದವರು ನಮ್ಮ ಕರ್ಣಾಟಕದ ಶಾಂತವೇರಿ ಗೋಪಾಲಗೌಡರು.
ನನಗೆ ಮತ ಹಾಕದೆ ಇರುವ ನನ್ನ ಕ್ಷೇತ್ರದ ಜನರ ಯೋಗಕ್ಷೇಮ ನೋಡಿಕೊಳ್ಳುವುದು ಓರ್ವ ಜನಪ್ರತಿನಿಧಿಯಾಗಿ ನನ್ನ ನೈತಿಕ ಜವಾಬ್ದಾರಿ ಎಂದು ಭಾವಿಸಿದ್ದ ಗೋಪಾಲಗೌಡರು ಅದರಂತೆ ನಡೆದುಕೊಂಡರು.
ಇಂದಿನ ಬಿ.ಜೆ.ಪಿ. ಅಭ್ಯರ್ಥಿಗಳಿಗೆ ಇಂತಹ ಪ್ರಜ್ಞೆ ಇದೆಯಾ? ಕೇಳಿನೋಡಿ. ನಮಗೆ ಮುಸ್ಲಿಮರ ಮತ ಬೇಡ ಎಂದು ಹೇಳುವ ಈ ದುರಹಂಕಾರಿಗಳಿಗೆ ಮುಸ್ಲಿಮರು ನೀಡುವ ತೆರಿಗೆ ಹಣ ಬೇಕು. ಆ ಹಣದಿಂದ ದೊರೆಯುವ ಪ್ರತಿಯೊಂದು ಸವಲತ್ತುಗಳು ಮಾತ್ರ ಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿಗಳಿಗೆ ಮತ ಹಾಕುವುದು ಪಾಪದ ಕೃತ್ಯ. ಹಾಗಾಗಿ ನಾನಾ ಬಿ.ಜೆ.ಪಿ. ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲ. ನನ್ನ ಮತ ಲೋಹಿಯಾ ಮತ್ತು ಶಾಂತವೇರಿ ಅವರ ಚಿಂತನೆಗಳಿಗೆ ಬದ್ಧರಾಗಿರುವ ಅನುಯಾಯಿಗಳಿಗೆ ಮಾತ್ರ.
-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




