ದೆಹಲಿ: ಫೆಬ್ರವರಿ 2023 ರಲ್ಲಿ ಬ್ಯಾಂಕುಗಳು 10 ದಿನಗಳವರೆಗೆ ರಜೆಯಲ್ಲಿರಲಿವೆ. ಇವುಗಳ ಪೈಕಿ ಶನಿವಾರ ಮತ್ತು ಭಾನುವಾರ ಸೇರಿವೆ. ಕೆಲವು ರಜಾದಿನಗಳು ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿವೆ. ಫೆಬ್ರವರಿ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು RBI ಬಿಡುಗಡೆ ಮಾಡಿದೆ ಮತ್ತು ಮಾರ್ಗಸೂಚಿಗಳ ಪ್ರಕಾರ, ನಿರ್ದಿಷ್ಟ ರಾಜ್ಯವನ್ನು ಅವಲಂಬಿಸಿ ಕೆಲವು ಪ್ರಾದೇಶಿಕ ರಜಾದಿನಗಳೊಂದಿಗೆ ಎಲ್ಲಾ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳು ರಜೆಯಾಗಲಿದೆ.
ಫೆಬ್ರವರಿ 2023 ರಲ್ಲಿ ಬ್ಯಾಂಕ್ ರಜಾದಿನಗಳು
ಫೆಬ್ರವರಿ 5 – ಭಾನುವಾರ
ಫೆಬ್ರವರಿ 11 – ಎರಡನೇ ಶನಿವಾರ
ಫೆಬ್ರವರಿ 12 – ಭಾನುವಾರ
ಫೆಬ್ರವರಿ 15 – ಇಂಫಾಲ್ನಲ್ಲಿ ಬ್ಯಾಂಕ್ ರಜೆ
ಫೆಬ್ರವರಿ 18 – ಮಹಾಶಿವರಾತ್ರಿ ಕಾರಣ ಮುಂಬೈ (ಮಹಾರಾಷ್ಟ್ರ), ಬೆಂಗಳೂರು(ಕರ್ನಾಟಕ), ಹೈದರಾಬಾದ್(ಆಂದ್ರ, ತೆಲಂಗಾಣ), ಅಹಮದಾಬಾದ್(ಗುಜರಾತ್), ಬೇಲಾಪುರ್, ಭೋಪಾಲ್(ಮಧ್ಯಪ್ರದೇಶ), ಭುವನೇಶ್ವರ್(ಒಡಿಶಾ), ರಾಯ್ಪುರ, ರಾಂಚಿ(ಛತ್ತೀಸ್ ಗಡ), ಡೆಹ್ರಾಡೂನ್(ಉತ್ತರಾಖಂಡ), ಜಮ್ಮು, ಕಾನ್ಪುರ್, ತಿರುವನಂತಪುರಂ, ಕೊಚ್ಚಿ(ಕೇರಳ), ಲಕ್ನೋ(ಉತ್ತರಪ್ರದೇಶ), ನಾಗ್ಪುರ, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ಗಳಿಗೆ ರಜೆ ಗೋಷಿಸಲಾಗಿದೆ.
ಫೆಬ್ರವರಿ 19 – ಭಾನುವಾರ
ಫೆಬ್ರವರಿ 20 – ಮಿಜೋರಾಂನಲ್ಲಿ ರಜೆ
ಫೆಬ್ರವರಿ 21 – ಸಿಕ್ಕಿಂನಲ್ಲಿ ರಜೆ
ಫೆಬ್ರವರಿ 25 – ನಾಲ್ಕನೇ ಶನಿವಾರ
ಫೆಬ್ರವರಿ 26 – ಭಾನುವಾರ
ದೇಶಾದ್ಯಂತ ಬ್ಯಾಂಕ್ಗಳಿಗೆ 10 ದಿನಗಳ ಕಾಲ ರಜೆ. ಆದರೂ ಆನ್ಲೈನ್, ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಯಾವುದೇ ಅನಾನುಕೂಲವಾಗದಂತೆ ಇಂಟರ್ನೆಟ್ ಸೇವೆಗಳನ್ನು ಪಡೆಯಬಹುದು. ಗ್ರಾಹಕರು ಭೌತಿಕವಾಗಿ ಬ್ಯಾಂಕ್ನಿಂದ ಹಣವನ್ನು ಠೇವಣಿ ಮಾಡಲು ಮತ್ತು ಹಿಂಪಡೆಯಲು ಸಾಧ್ಯವಾಗದು.




