ಎಡ್ವರ್ಡ್ ಸೈದ್ ವಸ್ತುನಿಷ್ಠ ಲೋಕಚಿಂತಕನಾಗಿದ್ದ. ಪ್ಯಾಲೆಸ್ತೀನ್ ಹಿತಾಸಕ್ತಿಗಾಗಿ, ಅಸ್ತಿತ್ವಕ್ಕಾಗಿ ನಿರಂತರವಾಗಿ ಬರೆದ, ಬೀದಿ ಬದಿಯ ಹೋರಾಟ ಮಾಡಿದ. ಬಿಕ್ಕಟ್ಟಿನ ಕಾಲದಲ್ಲಿ ಮೌನವಾಗಿರಲಿಲ್ಲ.
ಕಗ್ಗತ್ತಲ ಕಾಲದಲ್ಲಿ ಕಗ್ಗತ್ತಲ ಕುರಿತು ದಿಟ್ಟತನದಿಂದ ಬರೆದ. ತನ್ನ ಅನೇಕ ಬರಹ, ಚಿಂತನೆಗಳು ನಿಕಷಕ್ಕೆ ಒಳಪಡುತ್ತವೆ, ಮುಂದಿನ ದಿನಗಳಲ್ಲಿ ಟೀಕೆಗೂ ಒಳಪಡಬಹುದು ಎಂದು ಗೊತ್ತಿದ್ದರೂ ‘ಈ ಕ್ಷಣದ ಪ್ಯಾಲೆಸ್ತೀನ್ ಪರ ನ್ಯಾಯಪ್ರಜ್ಞೆ ಮುಖ್ಯ, ನನ್ನ ಬರಹದ ಆಯಸ್ಸು ಅಲ್ಲ’ ಎಂಬಂತೆ ಬರೆದ, ಚಿಂತಿಸಿದ.
ಎಪ್ಪತ್ತು, ಎಂಬತ್ತರ ದಶಕದಲ್ಲಿ ಜನಪ್ರಿಯವಾಗಿದ್ದ, ತುಂಬಾ ಚರ್ಚೆಗೊಳಪಟ್ಟ ಈತನ ‘ಪೌರ್ವಾತ್ಯವಾದ’ ಚಿಂತನೆ ಪ್ರಸ್ತುತ ಸಂದರ್ಭದಲ್ಲಿ ಹಳತಾಗುತ್ತಿದೆ, ಸವಾಲುಗಳನ್ನು ಎದುರಿಸುತ್ತಿದೆ. ವೈರುಧ್ಯವೆಂದರೆ ಬಲಪಂಥೀಯರು ತಮ್ಮ ಮತಾಂಧತೆಯ ಸಿದ್ಧಾಂತದ ಸಮರ್ಥನೆಯಾಗಿ ‘ಪೌರ್ವಾತ್ಯವಾದ’ವನ್ನು (ಪಶ್ಚಿಮ ವರ್ಸಸ್ ಪೂರ್ವ ಜಗಳಕ್ಕೆ, ಪ್ರಾಚೀನ ಭಾರತದ ವೈಭವೀಕರಣಕ್ಕೆ) ದುರ್ಬಳಕೆ ಮಾಡುತ್ತಿದ್ದಾರೆ.
ಇದರ ಮುಂದಾಲೋಚನೆ ಸೈದ್ ಗೆ ಇತ್ತೋ, ಇಲ್ಲವೋ? ಆದರೆ ಸೈದ್ ಗೆ ಕಡೆಗೂ ಪಶ್ಚಿಮದ ಸಾಮ್ರಾಜ್ಯಶಾಹಿ ದಬ್ಬಾಳಿಕೆಗೆ ಮುಖಾಮುಖಿಯಾಗಿ ತನ್ನ ಪ್ಯಾಲೆಸ್ತೀನ್ ಹೋರಾಟ ಮತ್ತು ಆಸ್ತಿತ್ವಕ್ಕಾಗಿ ‘ಪೌರ್ವಾತ್ಯವಾದ’ವನ್ನು ನೀರೆರೆದು ಬೆಳೆಸಬೇಕಾದ ಅಗತ್ಯವಿತ್ತು. ಒಬ್ಬ ಮಾದರಿ ಆದರೆ ವಿರಳವಾದ ಲೋಕ ಚಿಂತಕ – ಆಕ್ಟಿವಿಸ್ಟ್ ಗೆ ಎಡ್ವರ್ಡ್ ಸೈದ್ ಉತ್ತಮ ಉದಾಹರಣೆ.
ಅದೇ ರೀತಿ ಕಗ್ಗತ್ತಲ ಕಾಲದಲ್ಲಿ ಮೌನವಾಗಿರುವ ಸೋಗಲಾಡಿ ಚಿಂತಕರು ನಮ್ಮಲ್ಲಿ ಹೇರಳವಾಗಿ ಸಿಗುತ್ತಾರೆ. ಇದು ಅವರಿಗೆ ಜನಪ್ರಿಯತೆ ತಂದು ಕೊಡುತ್ತದೆ ಎಂಬುದೇ ಇಲ್ಲಿನ ವ್ಯಂಗ್ಯ.
- ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು
ಇಂಥ ಲೇಖಕ ಎಡ್ವರ್ಡ್ ಸೈದ್ ಒಂದು ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇತಿಹಾಸ, ಆಧುನಿಕೋತ್ತರ ವಾದ ಮತ್ತು ಎಡ್ವರ್ಡ್ ಸೈದ್.. ಡಾ. ರಾಮಲಿಂಗಪ್ಪ ಬೇಗೂರ ಅವರಿಂದ ರಚಿಸಲ್ಪಟ್ಟ ಈ ಪುಸ್ತಕ ಓದಿಗೆ ಲಭ್ಯ ಇದೆ.
ಆಸಕ್ತರು ಗಮನಿಸಬಹುದು
ಬೆಲೆ: 90+20(ಅಂಚೆವೆಚ್ಚ)=110/-
ಪುಸ್ತಕಕ್ಕಾಗಿ ಸಂಪರ್ಕಿಸಿ: ಲಡಾಯಿ ಪ್ರಕಾಶನ, 9480286844




