ಬಿಜೆಪಿ ಮತ್ತು ಆ ಪಕ್ಷದ ಬೆಂಬಲಿಗ ವ್ಯಕ್ತಿಗಳು ಸದಾ ಕಾಲ ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಧರ್ಮದ ಜನರ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಅಸಹನಯ ಭಾವನೆಯನ್ನ ವ್ಯಕ್ತಪಡಿಸುತ್ತದೆ ಬಂದಿರುತ್ತಾರೆ. ಪ್ರತಿದಿನವೂ ವಾಟ್ಸಾಪ್ ಮತ್ತು ಫೇಸ್ಬುಕ್ ಗಳಲ್ಲಿ ಇವರ ವಿರುದ್ಧ ಕಲ್ಪಿಸಿಕೊಂಡ ಕಥೆಗಳು ಮತ್ತು ಇತರೆ ಸುದ್ದಿಗಳನ್ನು ಪ್ರಸಾರ ಮಾಡುತ್ತಲೇ ಇರುತ್ತಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮುಸ್ಲಿಮರ ಬಗ್ಗೆ ಮಾತನಾಡುವ ಜನರು ಒಂದು ವಿಚಾರವನ್ನು ಅರ್ಥಮಾಡಿಕೊಳ್ಳಬೇಕು, ಬದುಕನ್ನ ಕಟ್ಟಿಕೊಳ್ಳಲು ಲಕ್ಷಾಂತರ ಮಂದಿ ಅರಬ್ ದೇಶಗಳಲ್ಲಿ ದುಡಿಯುತ್ತಿದ್ದಾರೆ. ಅಲ್ಲಿ ವಿವಿಧ ರೀತಿಯ ಉದ್ಯೋಗವನ್ನು ಮಾಡುತ್ತಿದ್ದಾರೆ. ಅಲ್ಲಿಯೇ ಸಂಸಾರವನ್ನು ನಡೆಸುತ್ತಿದ್ದಾರೆ. ಅಲ್ಲಿ ದುಡಿದ ಹಣದ ಸ್ವಲ್ಪ ಭಾಗವನ್ನ ಭಾರತದಲ್ಲಿರುವ ತಮ್ಮ ಕುಟುಂಬದವರಿಗೆ ಕಳುಹಿಸಿಕೊಡುತ್ತಿದ್ದಾರೆ. ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ಅಸಹನೆ ವ್ಯಕ್ತಪಡಿಸುವ ಮಂದಿ ಅರಬ್ ದೇಶಗಳಲ್ಲಿರುವ ಹಿಂದುಗಳನ್ನು ಭಾರತ ದೇಶಕ್ಕೆ ಮರಳಿ ಬರುವಂತೆ ಕರೆ ಕೊಡಲು ಸಿದ್ದರಿದ್ದಾರೆಯೇ?
ಮುಸ್ಲಿಂ ಜನಾಂಗದ ಒಂದಷ್ಟು ಮಂದಿ ಹೀನ ಕೃತ್ಯಗಳನ್ನ ಮಾಡಿದ ಕಾರಣಕ್ಕೆ ದೇಶ ವಿರೋಧಿ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರಣಕ್ಕೆ ಸಮಸ್ತ ಮುಸ್ಲಿಂ ಜನಾಂಗವನ್ನು ದ್ವೇಷಿಸುವುದು ಅವಶ್ಯಕತೆ ಇಲ್ಲ. ಆದುದರಿಂದ ಮುಸ್ಲಿಮರನ್ನ ಅಸಹನೆಯಿಂದ ನೋಡುವ ಮಂದಿ ಅರಬ್ ದೇಶದಲ್ಲಿರುವ ಜನರನ್ನು ಭಾರತಕ್ಕೆ ಮರಳಿ ಬನ್ನಿ ಎಂದು ಕರೆಯನ್ನ ಕೊಟ್ಟು ಅವರನ್ನು ಭಾರತಕ್ಕೆ ಕರೆಸಿಕೊಂಡು ಅವರಿಗೆ ಬದುಕನ್ನು ಕಟ್ಟಿಕೊಡಲು ಸಿದ್ದರಿದ್ದಾರೆಯೇ?
ಅದೇ ರೀತಿಯಲ್ಲಿ ಪದೇ ಪದೇ ಕ್ರಿಶ್ಚಿಯನ್ ಜನಾಂಗದವರನ್ನು ಹೀಯಾಳಿಸುವ ಮತಾಂತರ ಮಾಡುತ್ತಾರೆ ಎಂದು ಅವರ ಮೇಲೆ ದ್ವೇಷದ ಭಾವನೆಯನ್ನು ಬಿತ್ತುವ ರೀತಿಯಲ್ಲಿ ವಿಚಾರಗಳನ್ನ ಮಂಡಿಸುವ ಜನರಿಗೂ ನಮ್ಮದೊಂದು ಪ್ರಶ್ನೆ ಇದೆ. ಕ್ರಿಶ್ಚಿಯನ್ ಸಮುದಾಯವೇ ಹೆಚ್ಚು ಇರುವ ಅವರೇ ದೇಶವನ್ನು ಆಳುತ್ತಿರುವ ವಿದೇಶಗಳಲ್ಲಿ ಅಮೆರಿಕ ಇಂಗ್ಲೆಂಡ್ ಮುಂತಾದಂತಹ ದೇಶಗಳಲ್ಲಿ ಇರುವಂತಹ ನಮ್ಮ ಭಾರತದ ಹಿಂದುಗಳನ್ನ ಭಾರತಕ್ಕೆ ಮರಳಿ ಕರೆಸಿಕೊಂಡು ಆ ಎಲ್ಲ ಜನರಿಗೆ ನಾವು ಬದುಕನ್ನ ಕಟ್ಟಿಕೊಡಲು ಸಿದ್ದರಿದ್ದೇವೆ ಎಂದು ಹೇಳಬಲ್ಲಿರಾ?
ಬದುಕಲು ಅರಬ್ಬಾದರೂ ಪರವಾಗಿಲ್ಲ ಹಣ ಸಂಪಾದನೆಗೆ ಯಾವ ಕ್ರಿಶ್ಚಿಯನ್ ದೇಶವಾದರೂ ಪರವಾಗಿಲ್ಲ. ಆದರೆ ಇಲ್ಲಿ ಮಾತ್ರ ಅವರನ್ನು ನಾವು ದ್ವೇಷಿಸುತ್ತಲೇ ಇರಬೇಕು. ಇಂಥವರ ಮನೆಯ ಮಂದಿ ಅಮೇರಿಕಾ ಇಂಗ್ಲೆಂಡ್ ಜರ್ಮನ್ ಕೆನಡಾ ಫ್ರಾನ್ಸ್ ಮುಂತಾದಂತಹ ದೇಶಗಳಲ್ಲಿ ಡಾಕ್ಟರ್ ಆಗಿ ಇಂಜಿನಿಯರ್ ಗಳಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಲಕ್ಷಾಂತರ ರೂಪಾಯಿಗಳನ್ನು ಸಂಪಾದನೆ ಮಾಡಿ ಅವರ ಕುಟುಂಬವನ್ನು ಅಲ್ಲೇ ಶಾಶ್ವತವಾಗಿ ಕಟ್ಟಿಕೊಂಡು ಆಗೊಮ್ಮೆ ಈಗೊಮ್ಮೆ ಭಾರತದಲ್ಲಿರುವ ತಮ್ಮ ಹೆತ್ತವರಿಗೆ ಮತ್ತು ಬಂದು ಬಾಂಧವರಿಗೆ ಒಂದಷ್ಟು ಹಣವನ್ನ ಕಳುಹಿಸಿ ಹೆಣಗಳು ಬಿದ್ದಾಗ ಬಂದು ನೋಡಿಕೊಂಡು ಮರುಕ್ಷಣವೇ ಓಡಿ ಹೋಗುವ ಮಂದಿಯ ಸಂಖ್ಯೆ ಏನು ಕಡಿಮೆ ಇಲ್ಲ. ಆದರೂ ಸಹ ಅನ್ಯ ಧರ್ಮದವರನ್ನು ನಿಂದಿಸುವುದನ್ನ ಬಿಡುವುದಿಲ್ಲ.
1971ರ ನಂತರ ಪಾಕಿಸ್ತಾನದ ವಿರುದ್ಧ ಭಾರತ ದೇಶ ಅಂದು ಅಧಿಕಾರದಲ್ಲಿದ್ದಂತಹ ಕೇಂದ್ರ ಸರ್ಕಾರ ಯಾವುದೇ ರೀತಿಯ ರಾಜತಾಂತ್ರಿಕ ಬಾಂಧವ್ಯವನ್ನು ಹೊಂದಿರಲಿಲ್ಲ. ಆದರೆ 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಮೇಲೆ ಪಾಕಿಸ್ತಾನದ ಜೊತೆಯಲ್ಲಿ ಕ್ರಿಕೆಟ್ ಆಟವನ್ನು ಆಡುವ ಪದ್ಧತಿಯನ್ನು ಮತ್ತೆ ಆರಂಭಿಸಿದರು. ಅಟಲ್ ಬಿಹಾರಿ ವಾಜಪೇಯಿರವರು ಪ್ರಧಾನಿ ಆದಾಗ ಲಾಹೋರ್ ಗೆ ಬಸ್ ಸಂಪರ್ಕವನ್ನು ಕಲ್ಪಿಸಿದರು. ಪ್ರಧಾನಿ ಮೋದಿ ಅವರು ಪಾಕಿಸ್ತಾನದ ಜೊತೆಯಲ್ಲಿ ಬಾಂಧವ್ಯವನ್ನು ಬೆಸೆಯುವ ಕಾರಣದಿಂದ ಒಂದೆರಡು ಬಾರಿ ಆದೇಶಕ್ಕೆ ಭೇಟಿಕೊಟ್ಟು ಅಲ್ಲಿನ ಅಧ್ಯಕ್ಷರನ್ನು ಭಾರತಕ್ಕೆ ಕರೆಸಿ ಆತಿಥ್ಯವನ್ನು ನೀಡಿದ್ದರು. ಆದರೂ ಸಹ ಕಾಂಗ್ರೆಸ್ ಪಕ್ಷವನ್ನೇ ಪಾಕಿಸ್ತಾನದ ಬಂಧುಗಳು ಎನ್ನುವ ರೀತಿಯಲ್ಲಿ ಮಾತನಾಡುತ್ತಲೇ ಇರುತ್ತೀರಿ.
ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ವಿಚಾರದಲ್ಲಿ 1948, 1965 ಮತ್ತು 1971ರಲ್ಲಿ ಸರಿಯಾದಂತಹ ಪಾಠವನ್ನು ಕಲಿಸಿದೆ ಎಂದು ಸಹ ಅವರ ಭಾರತ ವಿರೋಧಿ ನಿಲುವುಗಳಿಗೆ ಸೊಪ್ಪು ಹಾಕಿರಲಿಲ್ಲ. ಅವರನ್ನು ಲೆಕ್ಕಕ್ಕೆ ಇಟ್ಟಿರಲಿಲ್ಲ. ಆದರೂ ಸಹ ಮತಗಳನ್ನು ಗಳಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮೃದುತ್ವವನ್ನು ಹೊಂದಿದೆ ಎನ್ನುವ ರೀತಿಯಲ್ಲಿ ಮಾತನಾಡುತ್ತೀರಿ.
ಸಾವಿರದ ಒಂಬೈನೂರ ಎಪ್ಪತ್ತೊಂದರಲ್ಲಿ ಶ್ರೀಮತಿ ಇಂದಿರಾ ಗಾಂಧಿ ರವರು ಪಾಕಿಸ್ತಾನದ ಮೇಲೆ ಮಾಡಿದಂತಹ ಯುದ್ಧದ ವೈಖರಿ ಪಾಕಿಸ್ತಾನದ ಮೇಲೆ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಎಷ್ಟರ ಪ್ರಮಾಣದಲ್ಲಿ ಆಕ್ರೋಶವಿತ್ತು ಎನ್ನುವುದನ್ನು ತೋರಿಸುತ್ತದೆ.
ಸಾಮಾನ್ಯವಾಗಿ ಕೆಲವು ಬಿಜೆಪಿ ಬೆಂಬಲಿತ ನಾಯಕರುಗಳು ಅವರುಗಳನ್ನ ಮಾತನಾಡಿಸಿದ ಸಂದರ್ಭದಲ್ಲಿ ಮೊದಲು ಮುಸ್ಲಿಮರನ್ನು ಬೈಯುತ್ತಾರೆ. ನಂತರ ಕ್ರಿಶ್ಚಿಯನ್ ಜನರನ್ನು ಹೀಯಾಳಿಸುತ್ತಾರೆ. ತದನಂತರ ಮೀಸಲಾತಿಯ ವಿಚಾರದಲ್ಲಿ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ. ಹಿಂದುಳಿದ ವರ್ಗದವರ ಅಭಿವೃದ್ಧಿ ವಿಚಾರದಲ್ಲಿ ಕುಚೇಷ್ಟೆಯ ಮಾತುಗಳನ್ನಾಡುತ್ತಾರೆ. ಬುದ್ದಿವಂತಿಕೆ ಮತ್ತು ಪಾಂಡಿತ್ಯ, ದಕ್ಷತೆ ಎಲ್ಲವೂ ಕೆಲವೇ ಕೆಲವು ಜಾತಿಯ ಜನರಲ್ಲಿ ರಕ್ತಗತವಾಗಿದೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಆಗ ನಿಮಗೆ ಅರ್ಥವಾಗುತ್ತದೆ ಇವರು ಕೇವಲ ಮುಸ್ಲಿಮರ ವಿರೋಧಿಗಳಲ್ಲ; ಇವರು ಕೇವಲ ಕ್ರಿಶ್ಚಿಯನ್ ವಿರೋಧಿಗಳಲ್ಲ; ಇವರು ದಲಿತರ ವಿರೋಧಿಯೂ ಹೌದು ಎನ್ನುವುದು ಮನದಟ್ಟಾಗುತ್ತದೆ.
ಬಹಳಷ್ಟು ಮಂದಿಗೆ ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಸಂಸ್ಥೆಯವರು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿಯೇ ಶಿಕ್ಷಣವನ್ನು ಕೊಡಿಸಬೇಕು. ಆ ಧರ್ಮದವರು ನಡೆಸುವ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆಯೂ ಆಗಬೇಕು. ಆದರೆ ಅವರ ಬಗ್ಗೆ ಮಾತ್ರ ಇವರಿಗೆ ಸದಾ ಕಾಲ ಆಕ್ರೋಶ ಮುಂದುವರಿಯುತ್ತಲೇ ಇರುತ್ತದೆ.
ಇಲ್ಲಿ ಇರುವುದು ಎರಡು ಧರ್ಮ. ಒಂದು ಮಾನವ ಧರ್ಮ, ಇನ್ನೊಂದು ರಾಕ್ಷಸಧರ್ಮ. ಮಾನವೀಯ ನೆಲೆಯಲ್ಲಿ ಬದುಕುವವರು ಎಲ್ಲ ಧರ್ಮದಲ್ಲವೂ ಇದ್ದಾರೆ. ರಾಕ್ಷಸಿ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಹೀನ ಮನಸ್ಸುಗಳು ಎಲ್ಲ ಧರ್ಮದವಲ್ಲು ಇದ್ದಾರೆ. ಒಳ್ಳೆಯವರು ಮತ್ತು ಕೆಟ್ಟವರು ಎಲ್ಲ ಧರ್ಮದಲ್ಲೂ ಇದ್ದಾರೆ ಎಂದ ಮೇಲೆ ಕೆಟ್ಟತನವನ್ನು ಒಂದು ಧರ್ಮದಲ್ಲಿ ಹುಡುಕುವುದು ಒಂದು ರೀತಿಯಲ್ಲಿ ಸಂಕುಚಿತ ಆಲೋಚನೆಗಳಾಗುತ್ತದೆ.
- ಕೆ ಎಸ್ ನಾಗರಾಜ್, ಬೆಂಗಳೂರು




