ಸ್ಪೇನ್ ನಲ್ಲಿ ಬಿಸಿಲ ಝಳಕ್ಕೆ 4,600 ಬಲಿ

4 years ago

ಸ್ಪೇನ್ ನಲ್ಲಿ ಬಿಸಿಲ ಝಳಕ್ಕೆ 4,600 ಬಲಿ

ಮ್ಯಾಡ್ರಿಡ್: ಅತಿಯಾದ ಬಿಸಿಲಿಗೆ ಸ್ಪೇನ್‌ನಲ್ಲಿ 4,600 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎಂದು ಕಾರ್ಲೋಸ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮಾಹಿತಿ ನೀಡಿದೆ.

ಇನ್‌ಸ್ಟಿಟ್ಯೂಟ್‌ನ ದೈನಂದಿನ ಮರಣ ನಿಗಾ ವ್ಯವಸ್ಥೆಯ ದಾಖಲೆಗಳ ಪ್ರಕಾರ, ಜೂನ್ 1ರಿಂದ ಆಗಸ್ಟ್ 30ರವರೆಗೆ ಒಟ್ಟು 4,655 ನಾಗರಿಕರು ಬಿಸಿಲಿನ ಬೇಗೆಗೆ ಬಲಿಯಾಗಿದ್ದಾರೆ. ಜುಲೈನಲ್ಲಿ  2,223, ಆಗಸ್ಟ್‌ನಲ್ಲಿ  1,602  ಸಾವುಗಳು ಸಂಭವಿಸಿವೆ..

ಜುಲೈ ಮತ್ತು ಆಗಸ್ಟ್ ಆರಂಭದಲ್ಲಿ ವಾತಾವರಣದಲ್ಲಿ 38-40 ಡಿಗ್ರಿ ಸೆಲ್ಸಿಯಸ್ (100.4-104 ಡಿಗ್ರಿ ಫ್ಯಾರನ್‌ಹೀಟ್) ವರೆಗೆ ಬಿಸಿ ಕಂಡುಬಂದಿದೆ.

Leave a Reply