ಬಿ.ಬಿ.ಎಂ.ಪಿ. ಕೇಂದ್ರ ಕಛೇರಿಯಲ್ಲಿ ನೈಸರ್ಗಿಕ ಬಣ್ಣದ ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬದ ಅಚರಣೆ

4 years ago

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕೇಂದ್ರ ಕಛೇರಿ ಅವರಣದ ನೌಕರರ ಭವನದಲ್ಲಿ ನೈಸರ್ಗಿಕ ಬಣ್ಣದ ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬವನ್ನು ಅಚರಿಸಿದರು.

ಗಣೇಶ ಹಬ್ಬದ ಪ್ರಯುಕ್ತ ಮಹಿಳಾ ಅಧಿಕಾರಿ ಮತ್ತು ನೌಕರರಿಗೆ ರಂಗೋಲೆ ಸ್ಪರ್ಧೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ನೇತೃತ್ವದಲ್ಲಿ  ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ವಿಶೇಷ ಪೂಜೆ ಸಲ್ಲಿಸಿದರು ಗಣೇಶ ಹಬ್ಬಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಮೃತ್ ರಾಜ್, ಬಿ.ಬಿ.ಎಂ.ಪಿ. ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ನೌಕರರ ಹಿತರಕ್ಷಣೆ ಜೊತೆಯಲ್ಲಿ ಸಮಾಜದ ಒಡನಾಡಿಯಾಗಿ ಸಾಮಾಜಿಕ ಸೇವಾ ಕಾರ್ಯಗಳು ಮಾಡುತ್ತಾ ಬಂದಿದೆ. ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ದಿನಸಿ ಕಿಟ್ ವಿತರಣೆ, ಕೊಡಗು, ಉತ್ತರ ಕರ್ನಾಟಕ ನೆರೆ ಸಂತ್ರತ್ಥರಿಗೆ ಸಹಾಯಹಸ್ತ ಮತ್ತು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ 1ಲಕ್ಷ ಲೀಟರ್ ಕುಡಿಯುವ ನೀಡಲಾಯಿತು ಎಂದರು.

ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಿಸಲು ಜನಜಾಗೃತಿ ಅಭಿಯಾನ ಮತ್ತು ಉಚಿತವಾಗಿ ಮಣ್ಣಿನ ಗೌರಿ ಗಣೇಶ ವಿತರಣೆ, ಅಪಘಾತವಾಗಿ ಮೃತಪಟ್ಟು ಕುಟುಂಬಕ್ಕೆ 1ಲಕ್ಷ ರೂಪಾಯಿ ಸಹಾಯಹಸ್ತ ಹಾಗೂ ಅಸಿಡ್ ದಾಳಿಗೆ ಒಳಗಾದ ಯುವತಿ ಹೆಚ್ಚಿನ ವೈದ್ಯಕೀಯ ಚಿಕಿತ್ಯೆಗಾಗಿ 5 ಲಕ್ಷ ಸಹಾಯ ಹಸ್ತ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಉಚಿತವಾಗಿ ಅಂಬುಲೆನ್ಸ್ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಘವು ಅಧಿಕಾರಿ, ನೌಕರರ ರಕ್ಷಣೆ ಜೊತೆಯಲ್ಲಿ ಸಮಾಜದಲ್ಲಿರುವ ಜನರ ಸಂಕಷ್ಟಗಳಿಗೆ ನೆರವು ನೀಡುವ ಸಾಮಾಜಿಕ ಸೇವಾ ಸಂಘಟನೆಯಾಗಿದೆ ಎಂದು ಶ್ಲಾಘಿಸಿದರು.

ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಕೆ.ಜಿ.ರವಿ, ಎಸ್.ಜಿ.ಸುರೇಶ್, ಸಂತೋಷ್ ಕುಮಾರ್ ನಾಯಕ್, ರಾಮಚಂದ್ರ, ಬಾಬಣ್ಣ, ರುದ್ರೇಶ್, ಎಂ.ಎಲ್.ಎ.ಮಂಜು, ನರಸಿಂಹ, ರೇಣುಕಾಂಬ ಮೊದಲಾದವರು ಹಾಜರಿದ್ದರು.

Leave a Reply