ವೈದ್ಯಕೀಯ ನೆರವು ಕೋರಿದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ

4 years ago

ದೆಹಲಿ: ನನ್ನ ಆರೋಗ್ಯದಲ್ಲಿ ಏರುಪೇರಾಗಿದೆ. ನನಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯ ಇದೆ ಎಂದು ಸ್ವಯಂ ಘೋಷಿತ ದೇವಮಾನವ ಹಾಗೂ ಅತ್ಯಾಚಾರ ಆರೋಪ ಹೊತ್ತು ದೇಶ ತೊರೆದ ಈಕ್ವೆಡಾರ್ ನ ದ್ವೀಪದಲ್ಲಿ ನೆಲೆಸಿರುವ ನಿತ್ಯಾನಂದ ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದು ನೆರವು ಕೋರಿದ್ದಾರೆ.

ತನಗೆ ಆರೋಗ್ಯ ಕ್ಷೀಣಿಸುತ್ತಿದೆ. ವೈದ್ಯಕೀಯ ಆರೈಕೆಯ ‘ತುರ್ತು’ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.‌ ತನಗೆ ಜೀವ ಬೆದರಿಕೆ ಇದ್ದು, ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡಿ ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರಿಗೆ ಪತ್ರ ಮುಖೇನ ಕೋರಿದ್ದಾರೆ.

ಪತ್ರದಲ್ಲಿ ತಾವು ಸ್ಥಾಪಿಸಿರುವ ದ್ವೀಪರಾಷ್ಟ್ರ ‘ಶ್ರೀಕೈಲಾಸ’ದಲ್ಲಿನ ವೈದ್ಯಕೀಯ ಮೂಲಸೌಕರ್ಯಗಳ ಕೊರತೆ ಇದೆ ಎಂದಿದ್ದಾರೆ.

Leave a Reply