ಶಿವಮೊಗ್ಗ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಆಲಿಂಕೋ ಸಂಸ್ಥೆಯ ವತಿಯಿಂದ ಕೇಂದ್ರ ಸರ್ಕಾರದ ಅಡಿಪ್ ಮತ್ತು ವಯೋಶ್ರೀ ಯೋಜನೆಯಡಿ ಶಿಬಿರಗಳನ್ನು ನಿಗದಿತ ದಿನಾಂಕಗಳಂದು ಆಯೋಜಿಸಿದ್ದು, ಈ ಸಂಸ್ಥೆಯು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅವಶ್ಯಕ ಸಾಧನ ಸಲಕರಣೆಗಳನ್ನು ವಿತರಿಸಲು ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ.
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
ಜೂನ್ 21 ರಂದು ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ, ಜೂ. 22 ರಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆ, ಜೂ. 23 ಸಾಗರ ಸಾರ್ವಜನಿಕ ಆಸ್ಪತ್ರೆ, ಜೂ. 24 ಸೊರಬ ಸಾರ್ವಜನಿಕ ಆಸ್ಪತ್ರೆ, ಜೂ. 25 ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆ, ಜೂ. 26 ಹೊಸನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಜೂ. 27 ಮತ್ತು 28 ರಂದು ಶಿವಮೊಗ್ಗ ಜಿಲ್ಲಾ ಮೆಗ್ಗಾನ ಭೋದನಾ ಆಸ್ಪತ್ರೆಗಳಲ್ಲಿ ಶಿಬಿರಗಳು ನಡೆಯಲಿವೆ.
ಈ ಶಿಬಿರದಲ್ಲಿ ಭಾಗವಹಿಸಲು ವಿಕಲಚೇತನರು ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ), ಆಧಾರ್ ಕಾರ್ಡ್, ಬಿ.ಪಿ.ಎಲ್ ಕಾರ್ಡ್ ಅಥವಾ ವಾರ್ಷಿಕ ಆಧಾಯ ರೂ. 2.70 ಲಕ್ಷ ಮೀರದಿರುವ ಆದಾಯ ಪ್ರಮಾಣ ಪತ್ರ. ಹಿರಿಯ ನಾಗರಿಕರು ಗುರುತಿನ ಚೀಟಿ ಅಥವಾ ವಯೋಮಿ ಸೂಚಿಸು ದಾಖಲಾತಿ, ಆಧಾರ್ ಕಾರ್ಡ್, ಬಿ.ಪಿ.ಎಲ್ ಕಾರ್ಡ್ ಅಥವಾ ವಾರ್ಷಿಕ ಆಧಾಯ ರೂ. 2.70 ಲಕ್ಷ ಮೀರದಿರುವ ಆದಾಯ ಪ್ರಮಾಣ ಪತ್ರ ಗಳನ್ನು ಹಾಜರುಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ – ಹುಚ್ಚುರಾಯಪ್ಪ- 9741161346, ಭದ್ರಾವತಿ-ದಿನೇಶ್-7899137243, ಸಾಗರ ಶ್ಯಾಮ್ಸುಂದರ್-9535247757, ಸೊರಬ- ಭರತ್ಕುಮಾರ್-9110493122, ತೀರ್ಥಹಳ್ಳಿ -ದಿವಾಕರ್ ಬಿ.ಆರ್.-9480767638, ಹೊಸನಗರ-ರವಿಕುಮಾರ್- 9731922693, ಮೆಗ್ಗಾನ್ ಆಸ್ಪತ್ರೆ – ಮಲ್ಲಿಕಾರ್ಜುನ-9980150110 ಗಳನ್ನು ಸಂಪರ್ಕಿಸಬಹುದು.




