ದೆಹಲಿ: ತೀವ್ರಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ (58) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಾಲವಶರಾಗಿದ್ದಾರೆ.
ಹೃದಯಾಘಾತವಾಗಿದ್ದರಿಂದ ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 10 ರಂದು ಏಮ್ಸ್ ಗೆ ದಾಖಲಾದ ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ.
ವರ್ಕೌಟ್ ಮಾಡುವ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ವೇಳೆ ಅವರಿಗೆ ಹೃದಯಾಘತವಾಗಿತ್ತು. ಅವರ ಮೆದುಳಿನ ಮೇಲೂ ಪರಿಣಾಮ ಬೀರಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ.
ಅವರ ಸಾವಿಗೆ ದೇಶಾದ್ಯಂತ ರಾಜಕಾರಣಿಗಳು ಮತ್ತು ನಟನಟಿಯರು ಕಂಬನಿ ಮಿಡಿದಿದ್ದಾರೆ.



