ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ @BJP4India ಪಕ್ಷದ ಅಭ್ಯರ್ಥಿಯಾದ @BSBommai ವರು ಚುನಾವಣಾ ಪ್ರಚಾರ ಸಮ್ಮೇಳನದಲ್ಲಿ ಕೋಮು ದ್ವೇಷ ಹರಡುವ ರೀತಿಯಲ್ಲಿ ಭಾಷಣ ಮಾಡಿದ ವಿರುದ್ಧ ಕ್ರಮ ಕೈಗೊಳ್ಳುವಂತೆ SDPI Karnataka ಪಕ್ಷದ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷ Khasim Rabbani ನೇತೃತ್ವದಲ್ಲಿ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಯಿತು.
- ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?
- ಮೊದಲ ಸಿನಿಮಾ ಚಿತ್ರ ಬಿಡುಗಡೆ ನೆನಪು ಮಾಡಿಕೊಂಡ ಅನಿರುದ್ಧ
- ಮಲೆನಾಡ ಶೈಲಿಯ ಬಿಸಿಬಿಸಿ ‘ನೀರುಪ್ಪಿಟ್ಟು’ ಮಾಡುವ ವಿಧಾನ
- ದಸರಾ ಪುಸ್ತಕ ಮೇಳದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅರ್ಜಿ ಆಹ್ವಾನ
- ಎಸ್ಐಆರ್ ರಾಜಕೀಯಕ್ಕೆ ಬಳಕೆ ಸರಿಯಲ್ಲ: ಡಿ ಕೆ ಶಿವಕುಮಾರ್
ದೂರಿನ ಸಾರಾಂಶ: ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಮಧ್ಯೆ ಹಾವೇರಿ ಜಿಲ್ಲೆಯ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿಯಾದ ಬಸವರಾಜ ಬೊಮ್ಮಾಯಿ ರವರು ದಿನಾಂಕ 4/4/2024 ರಂದು ಹಾವೇರಿ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ ಸಮ್ಮೇಳನದಲ್ಲಿ ಜಾತಿ ಜಾತಿಗಳ ಮಧ್ಯೆ ಮತ್ತು ಧರ್ಮಗಳ ಮಧ್ಯೆ ಬಿರುಕುಂಟು ಮಾಡುವ ರೀತಿಯಲ್ಲಿ ಕೋಮು ದ್ವೇಷ ಬಿತ್ತುವ ಭಾಷಣವನ್ನು ಮಾಡಿರುತ್ತಾರೆ.
ಪಕ್ಷ ಪಕ್ಷಗಳ ಮಧ್ಯೆ ಜನರನ್ನು ಎತ್ತಿ ಕಟ್ಟಿ ತನ್ನ ಚುನಾವಣಾ ಲಾಭವನ್ನು ಗಳಿಸುವ ಪ್ರಯತ್ನದಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಸವರಾಜ ಬೊಮ್ಮಾಯಿ ಅವರು “ಪಾಕಿಸ್ತಾನದಿಂದ ಬೆಂಬಲ ಪಡೆದ ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಜೊತೆ ಕಾಂಗ್ರೆಸ್ ಸೇರಿದೆ” “ಪಾಕ್ ಜಿಂದಾಬಾದ್, ಮತ್ತು ಹಿಂದುಸ್ತಾನ್ ಮುರ್ದಾಬಾದ್” ಅಂತ ಕರೆಯೋರ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ ಎಂದು ತನ್ನ ಭಾಷಣದಲ್ಲಿ ಹೇಳಿರುತ್ತಾರೆ.
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಬಸವರಾಜ ಬೊಮ್ಮಾಯಿರವರ ಆಡಳಿತದಲ್ಲಿ #PFI ಯನ್ನು ಬ್ಯಾನ್ ಮಾಡಲಾಗಿದೆ. ಪಿಎಫ್ ಐ ಒಂದು ನಿಷೇಧಿತ ಸಂಘಟನೆಯಾಗಿದ್ದು, ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಪಕ್ಷವು ಚುನಾವಣಾ ಆಯೋಗದಲ್ಲಿ ನೊಂದಾಯಿಸಲ್ಪಟ್ಟ ರಾಷ್ಟ್ರೀಯ ರಾಜಕೀಯ ಪಕ್ಷವಾಗಿದೆ. ತನ್ನ ಚುನಾವಣಾ ಲಾಭಕ್ಕಾಗಿ ಇವರೇ ಬ್ಯಾನ್ ಮಾಡಿದ ಸಂಘಟನೆಯನ್ನು ಎಸ್ ಡಿ ಪಿ ಐ ಯೊಂದಿಗೆ ತಳುಕು ಹಾಕಿಕೊಂಡು ತನ್ನ ತೆವಲಿನ ನಾಲಗೆಯನ್ನು ಹರಿಯ ಬಿಟ್ಟು ಪಕ್ಷದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆ ಮಾಡಿಕೊಡುವ ರೀತಿ ಮಾತನಾಡಿರುವ ಇವರ ಈ ಚುನಾವಣಾ ಪ್ರಚಾರ ಭಾಷಣವು ಸಂಪೂರ್ಣವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಇದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಶತ್ರು ದೇಶವಾದ ಪಾಕಿಸ್ತಾನವನ್ನು ಇವರ ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣಾ ಲಾಭಗಳಿಸುವ ಇವರ ಈ ಹುನ್ನಾರವು ದ್ವೇಷ ಭಾಷಣದ ಅಜೆಂಡವಾಗಿರುತ್ತದೆ.
ಆದ್ದರಿಂದ ಮಾನ್ಯ ಚುನಾವಣಾಧಿಕಾರಿಗಳಾದ ತಾವು ಈ ಕೂಡಲೇ ಬಿಜೆಪಿ ಪಕ್ಷದ ಹಾವೇರಿ ಜಿಲ್ಲೆಯ ಲೋಕಸಭಾ ಅಭ್ಯರ್ಥಿಯಾದ ಬಸವರಾಜ ಬೊಮ್ಮಾಯಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರ ನಾಮಪತ್ರವನ್ನು ತಿರಸ್ಕರಿಸಿ ನಿರ್ಭಿತ, ನ್ಯಾಯ ಸಮ್ಮತ ಚುನಾವಣೆ ನಡೆಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.




