ಡಾ. ಲಕ್ಷ್ಮಿನರಸಮ್ಮ ಅವರಿಗೆ ಗುರುಕುಲ ಕಲಾ ಕೌಸ್ತುಭ ಗೌರವ ಪ್ರಶಸ್ತಿ

5 years ago

ತುಮಕೂರು: ಕುಣಿಗಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಡಾ. ಲಕ್ಷ್ಮಿನರಸಮ್ಮ ಅವರಿಗೆ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ ಗುರುಕುಲ ಕಲಾ ಕೌಸ್ತುಭ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದೆ.

ಡಾ. ಲಕ್ಷ್ಮಿನರಸಮ್ಮ ಅವರು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್, 6 ಚಿನ್ನದ ಪದಕಗಳನ್ನು ಗಳಿಸಿಕೊಂಡಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಪ್ರತಿನಿಧಿಯಾಗಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಹಂಪಿ ವಿಶ್ವವಿದ್ಯಾಲಯದಲ್ಲಿ ಪಿಹೆಚ್.ಡಿ., ಬಾಹ್ಯ ಮಾರ್ಗದರ್ಶಕಿಯಾಗಿದ್ದಾರೆ. 5 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ವಚನ ಕಮ್ಮಟ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಗುರು ಕುಲಾ ಕಲಾ ಕೌಸ್ತುಭ ಪ್ರಶಸ್ತಿಯನ್ನು ಮುಂದೆ ನಡೆಯಲಿರುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಗುರುಕುಲ ಕಲಾ ಪ್ರತಿಷ್ಠಾನ (ರಿ)ರಾಜ್ಯ ಘಟಕ – ತುಮಕೂರು ವತಿಯಿಂದ ಈ ಸಾಲಿನಲ್ಲಿ ನೀಡಲಾಗಿರುವ ಪ್ರಶಸ್ತಿಗಳು.

ಗುರುಕುಲ ಕಲಾ ಸಾಹಿತ್ಯ ಸಮ್ಮೇಳನ -೧

ಸಮಾರಂಭ ನಡೆಯುವ ಸ್ಥಳ :ತುಮಕೂರು

ಪ್ರಶಸ್ತಿ ಆಯ್ಕೆ ಪಟ್ಟಿ

ಕ್ಷೇತ್ರ:   ಸೃಜನಶೀಲತೆ ಮತ್ತು ಕಲೆ

ಪ್ರಶಸ್ತಿ ಹೆಸರು: ಗುರುಕುಲ ಕಲಾ ಕೌಸ್ತುಭ

  1. ರವೀಶ್, ಚಿಕ್ಕಮಗಳೂರು ಜಿಲ್ಲೆ
  2. ಯಶಸ್ವಿನಿ ಶ್ರೀಧರಮೂರ್ತಿ, ಉ. ಕ. ಜಿಲ್ಲೆ
  3. ಕು. ಮೇಘನಾ ಎಂ., ಮಂಡ್ಯ ಜಿಲ್ಲೆ
  4. ಲಕ್ಷ್ಮೀನರಸಮ್ಮ, ಬೆಂಗಳೂರು
  5. ಕುಂಬಾರ ಮುರುಗೇಶಪ್ಪ, ಬಳ್ಳಾರಿ ಜಿಲ್ಲೆ
  6. ರಾಕೇಶ ವೀ. ಹಿರೇಮನಿ, ಗದಗ ಜಿಲ್ಲೆ
  7. ಸುಸ್ಮಿತ ಕೆ., ಬೆಂಗಳೂರು
  8. ಟಿ. ನರೇಂದ್ರ ಬಾಬು, ತುಮಕೂರು ಜಿಲ್ಲೆ
  9. ಆನಂದ ಎಂ., ಚಿಕ್ಕಬಳ್ಳಾಪುರ ಜಿಲ್ಲೆ
  10. ಕು. ಸುಮನಾ ನಾಯ್ಕ, ಉ. ಕ. ಜಿಲ್ಲೆ
  11. ಕು.ಬಿಂದು ಆರ್. ಡಿ., ದಾವಣಗೆರೆ ಜಿಲ್ಲೆ
  12. ದೀಕ್ಷಿತ್ ಕುಮಾರ್ ಕೆ. ಎಂ., ಮಂಡ್ಯ ಜಿಲ್ಲೆ
  13. ಕು. ಪೂರ್ವಿಕ ಡಿ. ವೆರ್ಣೇಕರ್, ಬೆಂಗಳೂರು
  14. .ಕು. ಪ್ರತೀಕ್ಷ ಡಿ. ವೆರ್ಣೇಕರ್, ಬೆಂಗಳೂರು

Leave a Reply