ಬಿಜೆಪಿ ನಾಯಕರ ಮನೆಯಲ್ಲಿ ಜೀತ ಮಾಡುತ್ತೇನೆ: ಗೂಳಿಹಟ್ಟಿ

2 years ago

#GulihattiShekhar #challenge #bjp #rss #untouchability

ಬೆಂಗಳೂರು: ಮಹಾರಾಷ್ಟ್ರದ ನಾಗಪುರದಲ್ಲಿನ ಸಂಘ ಪರಿವಾರ ಕಚೇರಿಯ ಹೆಡ್ಗೆವಾರ್ ವಸ್ತು ಸಂಗ್ರಹಾಲಯ ಪ್ರವೇಶಿಸಲು ಪರಿಶಿಷ್ಟ ಜಾತಿ ಜನರಿಗೆ ಅವಕಾಶವಿಲ್ಲ ಎಂದು ಆರೋಪಿಸಿ ವಿವಾದದ ಕಿಡಿ ಹೊತ್ತಿಸಿರುವ ಮಾಜಿ ಮಂತ್ರಿ ಹಾಗೂ ಬಿಜೆಪಿ ನಾಯಕ ಗೂಳಿಹಟ್ಟಿ ಶೇಖರ್ ಇದೀಗ ಬಿಜೆಪಿ ನಾಯಕರಿಗೆ ಹೊಸ ಸವಾಲೊಡ್ಡಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಶಾಸಕ ಪಿ ರಾಜೀವ್, ಛಲವಾದಿ ನಾರಾಯಣಸ್ವಾಮಿ ಮತ್ತು ಸುರೇಶ್ ಕುಮಾರ್ ಸೇರಿದಂತೆ ಹಲವರನ್ನು ಉಲ್ಲೇಖಿಸಿ ವಾಟ್ಸಾಪ್ ಆಡಿಯೋ ಮೂಲಕ ಮತ್ತೊಂದು ಸವಾಲೆಸೆದಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ನಾನು ಕುಡಿಯುತ್ತೇನೆ. ಹಾಗೆಂದು ಅಮಲಿನಲ್ಲಿ ಆರೋಪ ಮಾಡಿಲ್ಲ. ನಾನು ಮಾಡಿರುವ ಆರೋಪಕ್ಕೆ ಬದ್ಧನಾಗಿದ್ದೇನೆ. ಇದನ್ನು ಸುಳ್ಳು ಎಂದು ಸಾಬೀತುಪಡಿಸಿದಲ್ಲಿ ಬಿಜೆಪಿ ನಾಯಕರ ಮನೆಯಲ್ಲಿ ಜೀತ ಮಾಡುತ್ತೇನೆ ಎಂದು ಪಂಥಾವ್ವಾನ ನೀಡಿದ್ದಾರೆ.

ನಾಗಪುರದ ಆರ್ ಎಸ್ ಎಸ್ ಕಚೇರಿಯಲ್ಲಿ ‘ಸಿಸಿ ಕ್ಯಾಮರಾ ದೃಶ್ಯ ಇರುತ್ತೆ ಅಲ್ವಾ? ಅದರ ದೃಶ್ಯಗಳನ್ನು ರಿಲೀಸ್ ಮಾಡಿ. ರಿಲೀಸ್ ಮಾಡಿದ್ರೆ ಸತ್ಯ ಸಂಗತಿ ಬೆಳಕಿಗೆ ಬರಲಿದೆ. ಕೆಲವು ತಿಂಗಳ ಹಿಂದೆ ನಾನು ಈ ವಿಷಯವನ್ನು ಹೇಳಿದ್ದರೆ ಚುನಾವಣೆಯಲ್ಲಿ ಇನ್ನಷ್ಟು ಸೀಟ್ ಕಳೆದುಕೊಳ್ತಿದ್ದರು ಎಂದು ಹೇಳಲಿಲ್ಲ. ಈಗ ಹೇಳಿದ್ದೇನೆ ನಾನು ಸುಳ್ಳು ಹೇಳಿದ್ದೇನೆ ಎಂದು ಸಾಬೀತುಪಡಿಸಿದರೆ, ನಿಮ್ಮ ಮನೆ ಗೇಟ್ಕೀಪರ್ ಆಗಿ ಕೆಲಸ ಮಾಡ್ತೇನೆ’ ಎಂದು ಆಡಿಯೋ ಸಂದೇಶ ಮೂಲಕ ತಿರುಗೇಟು ನೀಡಿದ್ದಾರೆ.

Leave a Reply