ಸರ್ಕಾರ ದತ್ತಾಂಶ ನೀಡದೆ ವಂಚಿಸುತ್ತಿದೆ: ಕೆ.ಸಿ.ರಘು

4 years ago

ಚಿತ್ರದುರ್ಗ: ಜಿಡಿಪಿ ಬೆಳೆಯುತ್ತಿದೆಯಲ್ಲ ನಿಮಗೇನು ಸಮಸ್ಯೆ ಎಂದು ಹೇಳಲಾಗುತ್ತಿದೆ. ಆದರೆ 65,000 ಕೋಟಿ ಚಿನ್ನವನ್ನು ಅಡವಿಡಲಾಗಿದೆ. ಸರ್ಕಾರ ದತ್ತಾಂಶಗಳನ್ನು ಕೊಡದೆ ವಂಚಿಸಲಾಗುತ್ತಿದೆ ಎಂದು ಆಹಾರ ತಜ್ಞ ಕೆ.ಸಿ.ರಘು ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಪ್ರಸಕ್ತ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ದಾಳಿಗಳು ಮತ್ತು ಪ್ರತಿರೋಧ ವಿಷಯದ ಕುರಿತು ಮಾತಾಡಿದ ಅವರು, ಕಳೆದ ವರ್ಷ 50 ಲಕ್ಷ ಬೈಕ್ ವ್ಯಾಪಾರ ಕಡಿಮೆಯಾಗಿದೆ. ಇದು ಆರ್ಥಿಕವಾಗಿ ಅಪನಂಬಿಕೆ ಎಂದು ಹೇಳುತ್ತಿದೆ ಎಂದರು.
ಹದಿನೈದು ವರ್ಷದಿಂದ 20 ವರ್ಷದವರು ಕಲಿಕೆ, ಉದ್ಯೋಗದಲ್ಲಿಲ್ಲದವರನ್ನು ಮೀಟ್ ಎಂದು ಕರೆಯುತ್ತಾರೆ. ಇಂತಹ 12 ಕೋಟಿ ಯುವಕರು ಇದರಡಿಯಲ್ಲಿದ್ದಾರೆ. ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ, ಡ್ರೈವಿಂಗ್ ಕಲಿಸಲು ಇತ್ತೀಚೆಗೆ ಅವಕಾಶ ಕೊಟ್ಟರು ಎನ್ನುತ್ತಾರೆ. ಆದರೆ, ಅಲ್ಲಿ ಎಷ್ಟು ಮಹಿಳೆಯರು ದುಡಿದು ಹಣಗಳಿಸುತ್ತಾರೆ ಎಂಬ ಲೆಕ್ಕಹಾಕಲಾಗಿದೆ. ಶೇ. 28, ಚೀನಾಲ್ಲಿ ಶೇ. 55ರಷ್ಟಿದೆ. ಭಾರತದಲ್ಲಿ 21ರಷ್ಟಿದೆ. ಇದು ಪ್ರಜಾಪ್ರಭುತ್ವದ ದುರಂತ ಎಂದರು.
ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎನ್ನುತ್ತಾರೆ. ರೈತರ ತಲಾದಾಯ 28 ರೂ. ಇಡೀ ಜಗತ್ತಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದುಬಾರಿ ದೇಶ ಭಾರತ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಪೆಟ್ರೋಲ್ ದರ 3, ಡೀಸೆಲ್ ನಲ್ಲಿ 6ನೇ ಸ್ಥಾನದಲ್ಲಿ ಭಾರತವಿದೆ ಎಂದರು.
ಪೆಟ್ರೋಲ್, ಡೀಸೆಲ್ ನಲ್ಲಿ ಸರ್ಕಾರ ಪ್ರತಿ ವರ್ಷ 4.5 ಲಕ್ಷ ಕೋಟಿ ಗಳಿಸುತ್ತಿದೆ. 2.5 ರಷ್ಟು ಸೆಸ್ ಹಾಕುತ್ತಿದೆ. ಇದನ್ನು ರಾಜ್ಯ ಸರ್ಕಾರಗಳಿಗೆ ಕೊಡುವುದಿಲ್ಲ. ಯಾವಾಗಲೂ ದೇಶದಲ್ಲಿ ಚುನಾವಣೆ ನಡೆಯುತ್ತಿದ್ದರೆ ಇಂಧನ ಬೆಲೆ ಏರುವುದಿಲ್ಲ. 2014ರಲ್ಲಿ 1 ರೂ.ನಲ್ಲಿ 33 ಪೈಸೆ ಬರುತ್ತಿತ್ತು. ಅದು ಈಗ 20 ಪೈಸೆಯಾಗಿದೆ. ಇದರ ಕುರಿತು ಜನಸಮಾನ್ಯರು ಯೋಚಿಸುತ್ತಿಲ್ಲ. ಇಂತಹ ಗಂಭೀರ ಸಮಸ್ಯೆಗಳು ಜನರ ಮೇಲೆ ಪರಿಣಾಮ ಬೀರುತ್ತವೆ ಎಂದರು.
ಶ್ರೀಮಂತ ರಾಜಕೀಯ ಪಕ್ಷಗಳು ಬಡ ಮತದಾರರು ಪರಿಸ್ಥಿತಿ ನಿರ್ಮಾಣವಾಗಿದೆ. ಅವರು ನಮ್ಮ ಫಲಾನುಭವಿಗಳು ಎಂದು ಪಕ್ಷ ಹೇಳುತ್ತಿದೆ. ಶೇ.67ರಷ್ಟು ಜನರಿಗೆ ಆಹಾರ ನೀಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 3 ಮಿಲಿಯನ್ ಟನ್ ಗೋದಾಮುಗಳಲ್ಲಿದೆ. ಇದರ ಬೆಲೆ 6 ಲಕ್ಷ ಕೋಟಿ ಇದೆ. ಗೋದಾಮಿನಲ್ಲಿ ಆಹಾರ ತುಂಬಿತುಳುಕುತ್ತಿರುವ ದೇಶದ ಜನರ ಹೊಟ್ಟೆ ಖಾಲಿ ಇರುತ್ತದೆ. ಭಾರತ ಹಸಿವಿನಲ್ಲಿ 102ನೇ ಸ್ಥಾನದಲ್ಲಿದೆ ಎಂದರು.
ಕೋವಿಡ್ ಬರುವ ಮೊದಲೆ -4 ಆಗಿತ್ತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳುತ್ತಾರೆ. ಇಂಧನ, ಪರೋಕ್ಷ ತೆರಿಗೆಯನ್ನು ಸುಲಿಯಲಾಗಿದೆ. 80% ಹಣವನ್ನು ಪ್ರಚಾರಕ್ಕೆ ಕರ್ಚು ಮಾಡಲಾಗಿದೆ. 3 % ಜನರನ್ನು ಮುಠ್ಠಾಳರನ್ನಾಗಿಸುವುದು ಚುನಾವಣೆ ಎಂದು ಅವರು ಹೇಳಿದರು.

Leave a Reply