ಸರ್ಕಾರ ಬಾಬಾ ಸಾಹೇಬರು ಹೇಳಿದ ಶೈಕ್ಷಣಿಕ ಮಾರ್ಗಕ್ಕೆ ಅನುಸಾರವಾಗಿ ನಡೆಯುತ್ತಿದೆ: ಎಚ್ ಸಿ ಮಹದೇವಪ್ಪ

1 year ago

ಒಂದು ಬಜೆಟ್ ಇರಬೇಕಾದ್ದು ಹೀಗೆಯೇ

2025-26 ನೇ ಬಜೆಟ್ ಘೋಷಣೆಯು ಪೂರ್ಣಗೊಂಡಿದೆ. ಬಹುತೇಕ ಎಲ್ಲ ಇಲಾಖೆಗಳು ಮತ್ತು ಎಲ್ಲ ಸಮುದಾಯಗಳ ಜನರ ಬದುಕನ್ನು ಗಮನದಲ್ಲಿ ಇಟ್ಟುಕೊಂಡು ನೀಡಲಾಗಿರುವ ಈ ಬಜೆಟ್ ನೀರಾವರಿ, ಶಿಕ್ಷಣ, ಲೋಕೋಪಯೋಗಿ ಗ್ರಾಮೀಣ ಅಭಿವೃದ್ಧಿ, ಕೃಷಿ ಸಹಕಾರ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ಎಲ್ಲ ಇಲಾಖೆಗಳಿಗೂ ಬಹಳ ಪ್ರಬುದ್ಧ ನೆಲೆಯಲ್ಲಿ ನಿಂತು ಕಾರ್ಯಕ್ರಮಗಳನ್ನು ನೀಡಿದೆ.

4 ಲಕ್ಷ ಕೋಟಿ ಗಾತ್ರದ ಈ ಬಜೆಟ್ ನಲ್ಲಿ ಶ್ರಮಿಕ ವರ್ಗಕ್ಕೆ ಹೆಚ್ಚಿನ ಕೊಡುಗೆ ಇದ್ದು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಮಹತ್ವ ನೀಡಿದೆ.

ಸಹಕಾರಿ ಸಾಲದ ಬಡ್ಡಿ ಮನ್ನಾದಿಂದಾಗಿ ಬಹಳಷ್ಟು ರೈತರಿಗೆ ಅನುಕೂಲ ಆಗಲಿದ್ದು, ಕೃಷಿ ಯಾಂತ್ರೀಕರಣದ ನೀಡಲಾಗುವ ಸಹಾಯ ಧನವು ರೈತರ ದುಡಿಮೆಯ ನೈತಿಕ ಬಲವನ್ನು ಹೆಚ್ಚಿಸಲಿದೆ.

ನೀರಾವರಿ ಯೋಜನೆಯಲ್ಲಿ ಆಗಿರುವ ಹಲವು ಮಹತ್ವದ ಘೋಷಣೆಗಳೂ ಕೂಡಾ ರೈತಪರವಾಗಿದ್ದು ಇದು ಜನ ಬದುಕಿಗೆ ದೊಡ್ಡ ಅನುಕೂಲ ಮಾಡಲಿದೆ.

ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಆಗಿರುವ ಹೆಚ್ಚಳವೂ ಕೂಡಾ ಪರಿಶಿಷ್ಟರ ಏಳಿಗೆಗೆ ಪೂರಕವಾಗಿದ್ದು ಗ್ಯಾರಂಟಿಗಳೊಂದಿಗೆ ಈ ಬಾರಿ ಅವರಿಗೆ ಹೆಚ್ಚಿನ ಅನುಕೂಲ ದೊರಕಲಿದೆ.

ಶೈಕ್ಷಣಿಕವಾಗಿ ಶಾಲಾ ಕಾಲೇಜುಗಳು ಮತ್ತು ವಸತಿ ನಿಲಯಗಳ ನಿರ್ಮಾಣಕ್ಕೆ ಅನುದಾನ ಘೋಷಿಸಿರುವ ಸರ್ಕಾರವು ಬಾಬಾ ಸಾಹೇಬರು ಹೇಳಿದ ಶೈಕ್ಷಣಿಕ ಮಾರ್ಗಕ್ಕೆ ಅನುಸಾರವಾಗಿ ನಡೆಯುತ್ತಿದೆ.

ಇನ್ನು ಬೌದ್ಧ, ಜೈನ, ಸಿಖ್ ಮತ್ತು ಮುಸ್ಲಿ ಸಮುದಾಯದ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ನೀಡಿರುವ ನಮ್ಮ ಸರ್ಕಾರವು ಈ ನೆಲದ ಧರ್ಮವಾದ ಬೌದ್ಧ ಧರ್ಮದ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ ಆಗಿದೆ.

ಕಲ್ಬುರ್ಗಿಯ ಮಹಾಬೋಧಿ ಗ್ರಂಥಾಲಯದ ಡಿಜಿಟಲೀಕರಣ, ಚಿತ್ತಾಪುರದಲ್ಲಿ ಸನ್ನತಿ ಪ್ರಾಧಿಕಾರದ ಸ್ಥಾಪನೆಯು ಈ ನಿಟ್ಟಿನಲ್ಲಿ ಸರ್ಕಾರದ ಇಟ್ಟಿರುವ ಮಹತ್ವದ ಹೆಜ್ಜೆಗಳಲ್ಲಿ ಒಂದು.

ಈ ಬಜೆಟ್ ನಲ್ಲಿ ಪರಿಶಿಷ್ಟರಿಗೆ ನೀಡಲಾಗಿದೆ, ಹಿಂದುಳಿದ ವರ್ಗಗಳ ಏಳಿಗೆಯ ಬಗ್ಗೆ ಚಿಂತಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, ಅಲ್ಪಸಂಖ್ಯಾತರ ಏಳಿಗೆಗಾಗಿ ಅನುದಾನ ನಿಗದಿ ಮಾಡಿದೆ, ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿಗಳ ಏಳಿಗೆಗೆ ದೂರದೃಷ್ಟಿಯ ಕಾರ್ಯಕ್ರಮಗಳನ್ನು ನೀಡಿದೆ.

ನಗರಾಭಿವೃದ್ಧಿಯ ಜೊತೆಗೆ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರವನ್ನೂ ಪರಿಗಣಿಸಿರುವ ಈ ಬಜೆಟ್, ಮೀನುಗಾರರ ಬದುಕಿನ ಬಗ್ಗೆ ಚಿಂತಿಸಿದೆ, ಹಸು, ಕುರಿ, ದನ ಸಾಕಾಣೆ ಮಾಡುವ ಬಡ ರೈತರಿಗೆ ಅನುಕೂಲ ಮಾಡುವ ಸಂಕಲ್ಪ ತೋರಿದೆ.

ಮಾಧ್ಯಮದ ವಲಯದ ಸ್ನೇಹಿತರಿಗೂ ಪ್ಯಾಕೇಜ್ ನೀಡಿರುವ ಸರ್ಕಾರ, ಮೂಲಸೌಕರ್ಯ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿಸಿಕೊಂಡಿದೆ.

ಇನ್ನು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗೆ ಅನುಗುಣವಾಗಿ ಆರ್ಥಿಕತೆಯ ಶಿಸ್ತಿನ ಚೌಕಟ್ಟಿನಲ್ಲಿ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನ ಸಾಮಾನ್ಯರ ಬದುಕಿನ ಕನ್ನಡಿಯೇ ಆಗಿದ್ದಾರೆ.

ಯಾವ ಕಾಲಕ್ಕೂ ಸಹ ನುಡಿದಂತೆ ನಡೆಯುವ ಕೆಲಸ ಮಾಡಿಕೊಂಡು ಬಂದಿರುವ ನಮ್ಮ ಸರ್ಕಾರದ ಘೋಷಣೆಗಳು ಜಾರಿಯಾಗುತ್ತವೆ ಎಂಬುದು ಹೆಚ್ಚು ವಾಸ್ತವ ಆಗಿದ್ದು, ಇಂತಹ ಜನಪರ ಸರ್ಕಾರದ ಭಾಗ ಆಗಿರುವುದಕ್ಕೆ ನನಗೆ ಹೆಚ್ಚಿನ ಹೆಮ್ಮೆಯಿದೆ.

ಇನ್ನು ಜನರನ್ನು ಧರ್ಮದ ಆಧಾರದಲ್ಲಿ ಪರಿಗಣಿಸಬೇಕೆಂದು ಯೋಚಿಸುತ್ತಾ ಕುಳಿತಿರುವ ಮತ್ತು ಕೇಂದ್ರ ಸರ್ಕಾರದಿಂದ ಈ ರಾಜ್ಯದ ನೆಲ, ಜಲ, ಭಾಷೆ ಮತ್ತು ಜನದ ಬದುಕಿಗೆ ಯಾವ ಹಂತದಲ್ಲೂ ನೆರವಾಗದ ಬಿಜೆಪಿಗರ ರಾಜಕೀಯ ಪ್ರೇರಿತ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳದಿದ್ದರೆ  ಉಳಿದದ್ದೆಲ್ಲವೂ ಚೆನ್ನಾಗಿದೆ.

ಜನರ ಬದುಕಿನ ದೃಷ್ಟಿಯಲ್ಲಿ ಕೆಲವು ಪೂರಕ ಸಲಹೆಗಳು ಇದ್ದಿರಬಹುದು.

ಆದರೆ ಜನರಿಗಾಗಿ ರೂಪಿಸಬೇಕಿರುವ ಒಂದು ಬಜೆಟ್ ಇರಬೇಕಾದ್ದು ಹೀಗೆಯೇ..!

ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply