ಸಮನ್ವಯ ‌ಸಮಿತಿ ನಿಯೋಗದೊಂದಿಗೆ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸಭೆ

5 years ago

ಬೆಂಗಳೂರು: ಸೆಪ್ಟೆಂಬರ್ 20ರಂದು ಮುಖ್ಯಮಂತ್ರಿ ಮನೆ ಚಲೋ ನಡೆಸಿ ಸರ್ಕಾರಕ್ಕೆ ಸಲ್ಲಿಸಲಾದ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಾರ್ಮಿಕ ಇಲಾಖೆ) ಡಾ.ಕಲ್ಪನಾ ಬೆಳಿಗ್ಗೆ 11.30 ರಿಂದ 2 ಗಂಟೆಯವರೆಗೆ ಸುದೀರ್ಘ ‌ಮಾತುಕತೆ ನಡೆಸಿ ಬೇಡಿಕೆಗಳನ್ನು ನಿರ್ದಿಷ್ಟ ಸಮಯದೊಳಗೆ ಬಗೆಹರಿಸಲು ಬೇಕಾದ‌ ಕ್ರಮಗಳನ್ನು ಕೈಗೊಳ್ಳಲು ಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಮನ್ವಯ ‌ಸಮಿತಿ ಪರವಾಗಿ ಸಭೆಯಲ್ಲಿ ಹಾಜರಿದ್ದ ಮುಖಂಡರು ಮನವಿಯಲ್ಲಿನ ಪ್ರತಿಯೊಂದು ಅಂಶಗಳನ್ನು ಎ.ಸಿ.ಎಸ್ ಅವರ ಗಮನಕ್ಕೆ‌ ಪ್ರತ್ಯೇಕವಾಗಿ ತಂದರು ಮತ್ತು ಪ್ರತಿ ಬೇಡಿಕೆಗಳ‌‌ ಈಡೇರಿಕೆಗೆ ಬೇಕಾದ ಸಾಧ್ಯತೆಗಳನ್ನು ಆನ್‌ಲೈನ್ ನಲ್ಲಿ ಹಾಜರಿದ್ದ ಮಂಡಳಿ ಅಧಿಕಾರಿಗಳ ಜತೆ ಚರ್ಚಿಸಿ ಜಾರಿಗೊಳಿಸಲು ಬೇಕಾದ ಸೂಚನೆಗಳನ್ನು ನೀಡಿದರು.

ಸಮನ್ವಯ ‌ಸಮಿತಿ‌ ಪರವಾಗಿ ಕೆ.ಮಹಾಂತೇಶ, ಶಾಮಣ್ಣ ‌ರೆಡ್ಡಿ, ಶಿವಣ್ಣ, ಉಮೇಶ್ ಹೆಚ್.ಜಿ., ಬಿ ಉಮೇಶ, ಧನಶೇಖರ್, ನಾಗನಾಥ್, ‌ಲೀಲಾವತಿ, ಶ್ರೀನಿವಾಸ್, ಷಣ್ಮುಗಂ ಹಾಗೂ ಮಹಾದೇವಿ  ಹಾಜರಿದ್ದರು.

ಇವರು, ಸಾಕಷ್ಟು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯಲ್ಲಿ ಗಮನ ಸೆಳೆದರು. ಹಲವು‌ ದಿನಗಳಿಂದ ನೆನಗುದಿಗೆ ಬಿದ್ದಿರುವ ಕಟ್ಟಡ ಕಾರ್ಮಿಕರ‌ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ‌  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗಳು  ವಹಿಸಿದ ಕ್ರಮಕ್ಕೆ ಸಮನ್ವಯ ‌ಸಮಿತಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದೆ. ಮಂಡಳಿ ಹಿರಿಯ ಅಧಿಕಾರಿ ಬಾಬುರಾವ್ ಆನ್‌ಲೈನ್ ನಲ್ಲಿ ಹಾಜರಿದ್ದರು.

Leave a Reply