ಎಸ್.ಎಸ್.ಎಲ್.ಸಿ. ಪಾಸ್ ಆದವರಿಗೆ ಶುಭ ಸುದ್ದಿ

5 years ago

ಬೆಂಗಳೂರು: 2021-22ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದೆ. ಪ್ರವೇಶಕ್ಕೆ ನಿಗದಿ ಮಾಡಲಾಗಿದ್ದ ಸಮಯಾವಕಾಶವನ್ನು ಸೆಪ್ಟಂಬರ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ರಾಜ್ಯದ 62 ಸರ್ಕಾರಿ, 34 ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶಕ್ಕೆ ನಿಗದಿ ಮಾಡಲಾಗಿದ್ದ ಸಮಯವನ್ನು ವಿಸ್ತರಿಸಲಾಗಿದ್ದು, ಸೆಪ್ಟಂಬರ್ 20ರ ಸಂಜೆ 5ರವರೆಗೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Leave a Reply