ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಗೋಬಿ ಮಂಚೂರಿ ಸೇರಿದಂತೆ ಯಾವುದೇ ರೀತಿಯ ಮಂಚೂರಿಗಳು ತಿನ್ನಲು ಸಿಗುವುದಿಲ್ಲ.ಅಷ್ಟೇ ಅಲ್ಲ ಮಂಚೂರಿ ಮಸಾಲೆ ಬಳಸಿ ಮಾಡುವ ಕಬಾಬ್ ಕೂಡ ಸಿಗುವುದಿಲ್ಲ.
ನೆರೆಯ ತಮಿಳುನಾಡು, ಪುದುಚೆರಿಯಲ್ಲಿ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಇವುಗಳ ಮಾರಾಟ ನಿಷೇಧಿಸಿದ ನಂತರ ರಾಜ್ಯದಲ್ಲಿ ಆರೋಗ್ಯ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಕಾಟನ್ ಕ್ಯಾಂಡಿ, ಮಂಚೂರಿ ಮಸಾಲ ಬಳಸಿ ತಯಾರಿಸಿದ ಕಬಾಬ್, ಗೋಬಿ ಮಂಚೂರಿಯನ್ನು ಗುಣಮಟ್ಟ ಪರೀಕ್ಷೆಗೆ ರವಾನಿಸಲಾಗಿತ್ತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮಜೂನ್ 14 ರಂದು ‘ಗಜಲ್ ಸಂಚಿಕೆ-35’ ಸಾಂಸ್ಕೃತಿಕ ಹಬ್ಬ! ಬೆಂಗಳೂರು: ರಾಜಧಾನಿಯ ಗಜಲ್ ಪ್ರೇಮಿಗಳಿಗೊಂದು ಸಿಹಿ ಸುದ್ದಿ! ರಂಗಮಂಡಲ ಮತ್ತು ಶುಭದ ಟ್ರಸ್ಟ್ (ಬೆಂಗಳೂರು) ಜಂಟಿ ಆಶ್ರಯದಲ್ಲಿ “ಕನ್ನಡ ಗಜಲ್ ಯಾತ್ರೆ 100 –… Read more: ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್ಕಾಂಗ್ರೆಸ್ ಪಕ್ಷದಲ್ಲಿ ಪೇಮೆಂಟ್ ಕೊಟ್ಟು ಅಧ್ಯಕ್ಷರಾಗುವುದು ರೂಢಿಯೂ ಇಲ್ಲ, ಕೊಲೆ ಕೇಸಿನಲ್ಲಿ ಗಡಿಪಾರಾದವರು, ಪೋಕ್ಸೋ ಆರೋಪಿಗಳು, ಕ್ರಿಮಿನಲ್ಸ್ ಹಾಗೂ ಜೈಲುವಾಸಿಗಳನ್ನು ಅಧ್ಯಕ್ಷರನ್ನಾಗಿ ಮಾಡುವ ಕೆಟ್ಟ ಪರಂಪರೆಯೂ ಇಲ್ಲ. ಪಂಚಾಯ್ತಿ ಚುನಾವಣೆಯಲ್ಲೂ ಸ್ಪರ್ದಿಸದೇ ಇದ್ದ Narendra… Read more: ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್ಸಿಎಂ DK Shivakumar ಸರ್ಕಾರದ ಖಾತೆ ಹಂಚಿಕೆ ಪ್ರಹಸನ, ಕಾಂಗ್ರೆಸ್ ಪಕ್ಷದ ನಿಜವಾದ ಆದ್ಯತೆಗಳೇನು ಅನ್ನುವುದನ್ನು ರಾಜ್ಯದ ಜನರ ಮುಂದೆ ಸಂಪೂರ್ಣವಾಗಿ ಬೆತ್ತಲು ಮಾಡಿದೆ! ಒಂದು ಕಡೆ ರಾಜ್ಯದ ಬೆನ್ನೆಲುಬಾದ ರೈತರು ಮುಂಗಾರು ಬಿತ್ತನೆಗೆ… Read more: ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿಮೈಸೂರು: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ‘ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ’ ಸಂಘಟನೆಯು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರದ ಮೂಲಕ ಮನವಿ… Read more: ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರ ಮತ್ತು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಜೂನ್ 9ರಂದು ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರ ಸಂಸ್ಮರಣೆ ಹಾಗೂ ‘ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ’ ಕೃತಿ ಲೋಕಾರ್ಪಣೆ… Read more: ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ ನೂರಕ್ಕೂ ಅಧಿಕ ಬಗೆಯ ಗೋಬಿ ಮಂಚೂರಿಗಳಲ್ಲಿ ಅಸುರಕ್ಷಿತ ಹಾಗೂ ಅಪಾಯಕಾರಿ ರಾಸಾಯನಿಕ ಸನ್ಸೆಟ್ ಎಲ್ಲೋ ಮತ್ತು ಥರ್ಟಜೈನ್ ಪತ್ತೆಯಾಗಿದೆ. ಇದು ಮನುಷ್ಯರ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಸುರಕ್ಷಿತ ಗೋಬಿ ಮಂಚೂರಿಗಳನ್ನು ನಿಷೇಧಿಸಲು ನಿರ್ಧರಿಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ)ಯನ್ನೂ ನಿಷೇಧಿಸಲಾಗಿತ್ತು.ಇದರ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತೆ ಇಲಾಖೆಯು ಸಲ್ಲಿಸಿರುವ ವರದಿ ಆಧರಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಸರಕಾರ ಮುಂದಾಗಿದೆ.
ಆರೋಗ್ಯ ಇಲಾಖೆ ಎಲ್ಲ ಜಿಲ್ಲೆಗಳಿಂದ ಮಾದರಿ ಸಂಗ್ರಹಿಸಿ ಟೆಸ್ಟ್ಗೆ ಕಳುಹಿಸಲು ಸೂಚನೆ ನೀಡಿತ್ತು. ಅದರಂತೆ ರಾಜ್ಯದ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 100ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿಗಳು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾಗಿ ತಿಳಿದುಬಂದಿದೆ.
ನೂರಕ್ಕೂ ಹೆಚ್ಚಿನ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ, ರಾಸಾಯನಿಕ ಅಂಶಗಳನ್ನು ಗೋಬಿ ಮಂಚೂರಿಗಳಲ್ಲಿ ಬಳಸದಂತೆ ಸೂಚಿಸುವ ಸಾಧ್ಯತೆ ಇದೆ. ಕೃತಕ ಬಣ್ಣ ಬೆರೆಸುವುದಕ್ಕೂ ಅವಕಾಶವಿರುವುದಿಲ್ಲ.
ಗೋಬಿ ಮಂಚೂರಿ ಮಾದರಿಯಲ್ಲಿಯೇ ಚಿಕನ್ ಕಬಾಬ್ ಸಿದ್ಧಪಡಿಸಲಾಗುತ್ತಿದ್ದು, ಕಬಾಬ್ನ ರುಚಿ ಹೆಚ್ಚಿಸಲು, ಆಕರ್ಷಕವಾಗಿ ಕಾಣುವಂತೆ ಮಾಡಲು ಪೌಡರ್ ಬಳಸಲಾಗುತ್ತದೆ. ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೂಡಲೇ ಈ ಮಾದರಿಯ ಕಬಾಬ್ ಅನ್ನು ನಿಷೇಧಿಸಬೇಕೆಂದು ಆಹಾರ ತಜ್ಞರು ಮತ್ತು ವೈದ್ಯರು ಒತ್ತಾಯಿಸಿದ್ದಾರೆ.
ಕಬಾಬ್ ಹಸಿರು ಹಾಗೂ ಕೆಂಪು ಬಣ್ಣದಲ್ಲಿ ದೊರಕುತ್ತದೆ. ಕಬಾಬ್ಗೆ ಕೆಮಿಕಲ್ ಬಳಸಿ ಬಣ್ಣ ಬದಲಾಯಿಸಲಾಗುತ್ತದೆ. ಹೀಗಾಗಿ ಕಬಾಬ್ ನಿಷೇಧಿಸ ಬೇಕು ಎನ್ನಲಾಗುತ್ತಿದೆ.




