ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯದ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ಹೆಚ್ಚಳ ಮಾಡಿರುವ ಸಂಗತಿ ವರದಿಯಾಗಿದೆ. ಶೇ 30ರಿಂದ ಶೇ 40ರವೆಗೆ ಶುಲ್ಕ ಏರಿಸಲು ಮುಂದಾಗಿವೆ. ಹಣದುಬ್ಬರದಿಂದ ತತ್ತರಿಸಿರುವ ಜನತೆಯ ಮೇಲೆ ಮತ್ತೆ ಹೊರೆ ಬೀಳಲಿದೆ.
ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ ಶೇ. 15ಕ್ಕಿಂತ ಜಾಸ್ತಿ ಶುಲ್ಕ ಹೆಚ್ಚಳ ಮಾಡದಂತೆ ಸೂಚನೆ ನೀಡಿತ್ತು. ಈಗ ಸೂಚನೆ ಧಿಕ್ಕರಿಸಿ ಶುಲ್ಕ ಏರಿಸಲು ಹೊರಟಿರುವುದು ಖಂಡನೀಯ. ಇದು ಜನವಿರೋಧಿ ನಡೆ. ಹೀಗೆ ಆದರೆ ಶಿಕ್ಷಣ ಪಡೆಯುವುದು ಗಗನಕುಸುಮವಾಗಲಿದೆ.
ನ್ಯಾಯಾಲಯದ ಆದೇಶವನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇಂತಹ ಕುಸಿದ ವ್ಯವಸ್ಥೆಯ ಕಾರಣದಿಂದ, ನಮ್ಮ ಪಂಚರತ್ನ ಯೋಜನೆಯಲ್ಲಿ ಅತ್ಯುತ್ತಮ ಗುಣಮಟ್ಟದ ಶಾಲೆಗಳನ್ನು ನಿರ್ಮಿಸಿ, ಕನ್ನಡ-ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಇದು ನಮ್ಮ ಬದ್ಧತೆ.
– ಜೆಡಿಎಸ್




