2023ಕ್ಕೆಸಮರ್ಥಮುಖ್ಯಮಂತ್ರಿ_ಸಿದ್ದರಾಮಯ್ಯ

3 years ago

Siddaramaiah Byrappa Harishkumar #CM #ablecm #karnataka #election

ರಾಜಕಾರಣ ಮಲಿನ ವಾಗಿ ಹೋಗಿದೆ ,ಈ ರಾಜಕಾರಣಿ ಪರಿಪಕ್ಕ ಇದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ಅಂತ ಪರಿಸ್ಥಿತಿಗೆ ನಾವು ತಲುಪಿದ್ದೇವೆ. ಸದ್ಯ ಕನ್ನಡಿಗರ ಪರಿಸ್ಥಿತಿ ಹೇಗಿದೆ ಎಂದರೆ ಇರುವರಲ್ಲಿ ಉತ್ತಮರನ್ನು ಹುಡುಕುವ ಪರಿಸ್ಥಿತಿ.
ಎಂದರೆ ಎಲ್ಲರೂ ಕಳ್ಳರೇ ಆದರೆ ಕಮ್ಮಿ ಕಳ್ಳತನ ಮಾಡುವರನ್ನು ಹುಡುಕುವ ಪರಿಸ್ಥಿತಿ.

ಸದ್ಯ ರಾಜ್ಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ ಮುಂದೆಂದೂ ಬರುವುದಿಲ್ಲ ಎಂಬುದು ನನ್ನ ನಂಬಿಕೆ. ಮುಂದೆ ಒಂದು ವೇಳೆ ಏನಾದರೂ ಬಂದರೆ ಇದೇ ರೀತಿ ಅಸಹ್ಯದ ರಾಜಕಾರಣ ಎಂದರೆ ಆಪರೇಷನ್ ಕಮಲ ಮಾಡಿ ಬರಬೇಕು ಅಷ್ಟೇ. ಅದು ಪ್ರಜಾಪ್ರಭುತ್ವದ ಕಗ್ಗೊಲೆ. ಅದು ಬಿಜೆಪಿಯ ಸೋಲೆ ಹೊರತು ಬಿಜೆಪಿಯ ಜಯ ಎಂದು ಹೇಳಲು ಸಾಧ್ಯವೇ ಇಲ್ಲ.

ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಹಿತಾಸಕ್ತಿಗೆಂದೇ ಹುಟ್ಟಿಕೊಂಡ ಪರಿಪೂರ್ಣ ಪ್ರಾದೇಶಿಕ ಪಕ್ಷ ಇಲ್ಲ ಹಾಗಾಗಿ ಈಗ ನಮ್ಮ ರಾಜ್ಯಕ್ಕೆ ಬೇಕಾಗಿರುವುದು ಕನಿಷ್ಠ ಪ್ರಾದೇಶಿಕ ಚಿಂತನೆಯುಳ್ಳ ದಿಟ್ಟ ರಾಜಕಾರಣಿಯ ಆಡಳಿತ.

ಪ್ರಾದೇಶಿಕ ಹಿತಾಸಕ್ತಿ ಎಂದರೆ ಕನ್ನಡ ಕನ್ನಡಿಗ ಕರ್ನಾಟಕ ನನಗೆ ಮೊದಲು ನಂತರ ಮಿಕ್ಕಿದ್ದೆಲ್ಲ ಎನ್ನುವ ರಾಜಕಾರಣಿ ನಿಲುವನು ಹೊಂದಲು ಬಿಜೆಪಿಯವರು ಅನರ್ಹರು ಏಕೆಂದರೆ ಸದ್ಯ ಎರಡು ಬಾರಿ ಆಡಳಿತದಲ್ಲಿ ಇವರ ನಡೆಯನ್ನು ಸ್ಪಷ್ಟವಾಗಿ ಕನ್ನಡಿಗರು ನೋಡಿದ್ದೇವೆ ಇವರ ಆಡಳಿತ ವೈಕರಿ ಕೇವಲ ಧರ್ಮದ ವೈಶಮ್ಯ ಬಿತ್ತುವುದು ದೇಶ ಮೊದಲು ಎಂದು ಡೋಂಗಿ ದೇಶಪ್ರೇಮ ಬಿತ್ತುವುದು ಸ್ಥಳೀಯ ಸಮಸ್ಯೆಗಳನ್ನ ಕಡೆಗಣಿಸುವುದು ದೇಶ ಮೊದಲು ಎಂದು ಜನರನ್ನು ದಿಕ್ಕು ತಪ್ಪಿಸಿ ರಾಜಕಾರಣ ಮಾಡುವುದು. ಒಂದೇ ಮಾತಲ್ಲಿ ಹೇಳಬೇಕಾದರೆ ಕನ್ನಡವನ್ನು ಟಿಶ್ಯೂ ಪೇಪರ್ ರೀತಿ ಬಳಸುವ ಬಿಜೆಪಿಯನ್ನು ನೈಜ ಕನ್ನಡಿಗರು ಒಪ್ಪಲು ಸಾಧ್ಯವೇ ಇಲ್ಲ ಇವರ ಕೈಗೆ ಅಧಿಕಾರ ಹೋದಷ್ಟು ಕನ್ನಡ ಕನ್ನಡಿಗ ಕರ್ನಾಟಕ ಅವನತಿ ಆದಿ ಹಿಡಿಯುವುದಂತೂ ಸತ್ಯ.

ಇನ್ನು ನಾವು ಪ್ರಾದೇಶಿಕ ಪಕ್ಷ ಎಂದು ಹೇಳಿಕೊಂಡು ರಾಷ್ಟ್ರೀಯ ಅಧ್ಯಕ್ಷರು ಹೊಂದಿರುವ ಜೆಡಿಎಸ್ ವಿಷಯಕ್ಕೆ ಬರುವುದಾದರೆ ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ನಮ್ಮ ನಾಡಿನಲ್ಲಿ ಉದಯಸಿದ ಪಕ್ಷವೊಂದು ಎಂಬ ಧೃತರಾಷ್ಟ್ರನ ಪ್ರೇಮ ಕನ್ನಡಿಗರು ಮೂಡಿಸಿಕೊಂಡರು ಸ್ಪಷ್ಟ ಬಹುಮತ ಪಡೆಯುವ ಪ್ರದರ್ಶನವನ್ನು ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಕೊಡಲು ಸಾಧ್ಯವಿಲ್ಲ ಎಂಬುದು ತೆರೆದಿಟ್ಟ ಸತ್ಯ. ಆದರೆ ಆಡಳಿತದ ದೃಷ್ಟಿಯಿಂದ ಪ್ರಾದೇಶಿಕ ಹಿತಾಸಕ್ತಿ ಕನ್ನಡ ಕನ್ನಡಿಗ ಕರ್ನಾಟಕ ದೃಷ್ಟಿಯಿಂದ ನೋಡಿದಾಗ ಅವರ ಮೊದಲ ಆದ್ಯತೆಯ ಕರ್ನಾಟಕ ಇರುವುದರಿಂದ ಜೊತೆಗೆ ಈ ಹಿಂದೆ 20 ತಿಂಗಳ ಕುಮಾರಸ್ವಾಮಿ ರವರ ಆಕರ್ಷಕ ಆಡಳಿತದಿಂದ ಕುಮಾರಸ್ವಾಮಿ ಕೈಗೆ ಅಧಿಕಾರ ಹೋದರೆ ಓಕೆ ಚಿಂತೆ ಇಲ್ಲ. ಕನ್ನಡಿಗರ ಸಮಸ್ಯೆಗಳಿಗೆ ತಕ್ಕಮಟ್ಟಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಮತ್ತೆ ಕೊನೆಯಲ್ಲಿ ಹೇಳಬೇಕಾದರೆ ಇವರಿಗೆ ಸ್ವಂತ ಬಲದಿಂದ ಅಧಿಕಾರ ನಡೆಸಲು ಜನ ಇವರನ್ನು ಬೆಂಬಲಿಸಲ್ಲ ಎಂಬುದು ಸತ್ಯ.

ಕೊನೆಗೆಯಲ್ಲಿ ನಮಗಿರುವ ಆಯ್ಕೆ ಕಾಂಗ್ರೆಸ್..!
ಒಂದಂತೂ ಸತ್ಯ ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಅಷ್ಟು ಅಭಿಮಾನ ಇಲ್ಲ ನಂಬಿಕೆಯು ಇಲ್ಲ ಕರ್ನಾಟಕಕ್ಕೆ ಕನ್ನಡಕ್ಕೆ ಅವರ ಕೊಡುಗೆ ಹೇಳಿಕೊಳ್ಳುವಷ್ಟು ಇಲ್ಲ .
ಆದರೆ ಈ ಮೇಲೆ ಹೇಳಿದ ಹಾಗೆ ಇರುವರಲ್ಲಿ ಕಮ್ಮಿ ಕಳ್ಳರನ್ನು ಹುಡುಕುವ ಪರಿಸ್ಥಿತಿ ಕನ್ನಡಿಗರದು.

ಸದ್ಯ ಕಾಂಗ್ರೆಸ್ ಸಂಪ್ರದಾಯದಂತೆ ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಪಡುತ್ತದೆ ಆದರೆ ಈ ಬಾರಿ ಡಿಕೆ ಶಿವಕುಮಾರ್ ಆಸ್ಥಾನ ತುಂಬಲು ಹೆಣಗಾಡುತ್ತಿರುವುದಂತೂ ಸತ್ಯ . ಅವರಿಗೇನು ಮುಖ್ಯಮಂತ್ರಿಯಾಗುವ ಮಹಾದಾಸ ಇದೆ ಆದರೆ ರಾಜ್ಯವನ್ನು ಸಮರ್ಥವಾಗಿ ನಿಭಾಯಿಸುವ ರಾಷ್ಟ್ರ ಕಾಂಗ್ರೆಸಿನ ಗೌರವ ಹೆಚ್ಚಿಸುವ ಆಡಳಿತ ನೀಡುವುದು ಬಹುತೇಕ ಅನುಮಾನ.
ಅದರಲ್ಲೂ ಇವರ ಮೇಲಿರುವ ಸಾಕಷ್ಟು ಐಟಿ ಇಡಿ ಕೇಸುಗಳು ಇವೆ ಇವರೇನಾದರೂ ಮುಖ್ಯಮಂತ್ರಿಯಾದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಯಾವ ಸಂದರ್ಭದಲ್ಲಿ ಬೇಕಾದರೂ ದ್ವೇಷದ ರಾಜಕಾರಣ ಮಾಡಲು ಮುಂದಾಗಬಹುದು ಅದಕ್ಕೆ ಡಿಕೆ ಶಿವಕುಮಾರ್ ಬಲಿಯಾಗಿ ಮತ್ತೆ ಜೈಲು ಸೇರಬಹುದು ಆಗ ರಾಷ್ಟ್ರೀಯ ಕಾಂಗ್ರೆಸ್ ಖಂಡಿತ ಮುಜುಗರ ಆಗುತ್ತದೆ ಬಹುಮತ ಪಡೆದು ಅಧಿಕಾರಕ್ಕೆ ಬಂದರು, ಜನರ ವಿಶ್ವಾಸ ,ಜೈಲಿಗೆ ಹೋದ ಕಾಂಗ್ರೆಸ್ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಬಂದುಬಿಡುತ್ತದೆಯೋ ಎಂಬ ಭಯ ಹೈಕಮಾಂಡ್ಗೆ ಈಗಲೂ ಕಾಡುತ್ತಿದೆ ಹಾಗಾಗಿ ಈ ಕ್ಯಾಂಡಿಯೇಟ್ ಮುಖ್ಯಮಂತ್ರಿ ಅಭ್ಯರ್ಥಿಗೆ ಅನುಮಾನ.

ಕಾಂಗ್ರೆಸ್ ನಾಯಕತ್ವ ವಿಚಾರಕ್ಕೆ ಬರೋದಾದ್ರೆ ಮುಂಚೆ ಇದ್ದ ಪರಿಸ್ಥಿತಿ ಈಗಿಲ್ಲ ಇಡೀ ದೇಶದಲ್ಲಿ ನೆಲಕಚ್ಚಿದ ಮೇಲೆ ಕರ್ನಾಟಕದಲ್ಲಿ ಹೈಕಮಾಂಡ್ ಹಿಡಿತಕ್ಕಿಂತ ಸ್ಥಳೀಯ ನಾಯಕರ ಹಿಡಿದವೆ ಹೆಚ್ಚಾಗಿದೆ ಹಾಗೆಯೇ ಅವರ ವಿರುದ್ಧ ಸೆಡ್ಡು ಹೊಡೆದು ನೀವು ಇದೇ ರೀತಿ ಮಾಡಿ ಎಂದು ನಿರ್ದೇಶಸುವ ಹಂತಕ್ಕೆ ಸದ್ಯ ಹೈಕಮಾಂಡ್ ಇಲ್ಲ ಅಡ್ಜಸ್ಟ್ ಮಾಡಿಕೊಂಡು ಹೋಗುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ.

ಈ ಪರಿಸ್ಥಿತಿ ಕನ್ನಡಿಗರಿಗೆ ಪೂರಕವೆ ,ಹಾಗೆ ಪ್ರಶ್ನಾರ್ತತ ನಾಯಕ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರು ಈ ಹಿಂದೆ ಯಶಸ್ವಿಯಾಗಿ ಐದು ವರ್ಷ ಆಡಳಿತದಲ್ಲಿ ತಾವೇನು ಎಂದು ಸಾಬೀತುಪಡಿಸಿದ್ದಾರೆ ಜೊತೆಗೆ ಸಿದ್ದರಾಮಯ್ಯನವರ ಕ್ರೇಜ್ ಹೇಗಿದೆ ಎಂದರೆ ಒಬ್ಬ ನಾಯಕ ನಟನೆಗಿಂತ ಕಮ್ಮಿ ಏನಿಲ್ಲ ಅವರು ಹೋಗುವ ಕಡೆ ಸ್ವಯಂ ಪ್ರೇರಿತರಾಗಿ ಲಕ್ಷಾಂತರ ಜನ ಸೇರುವ ಏಕೈಕ ನಾಯಕ.

ನಮಗೆ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕಿಂತ ಸಿದ್ದರಾಮಯ್ಯ ರವರಿಂದ ಕನ್ನಡಿಗರಿಗೆ ಏನು ಲಾಭ ಎಂದು ಒಬ್ಬ ಹೋರಾಟಗಾರನಾಗಿ ಪ್ರಾಮಾಣಿಕವಾಗಿ ನೋಡಬೇಕಾದ ಕೆಲಸ ನನ್ನದು.

ಈ ಎಲ್ಲಾ ಪಕ್ಷಗಳಿಗೆ ಆ ಪಕ್ಷದ ನಾಯಕರುಗಳಿಗೆ ಹೋಲಿಕೆ ಮಾಡಿಕೊಂಡರೆ ಕನ್ನಡ ಕನ್ನಡಿಗ ಕರ್ನಾಟಕದ ಪರ ಗಟ್ಟಿಯಾದ ನಿಲುವು ಹೊಂದಿರುವವರು ಸಿದ್ದರಾಮಯ್ಯನವರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇವರ ತಾಕತ್ತು ಎಷ್ಟಿದೆ ಎಂದರೆ ಕನ್ನಡಕ್ಕಾಗಿ ಕನ್ನಡಿಗರಿಗಾಗಿ ಇವರ ಹೈಕಮಾಂಡ್ ಅನ್ನು ಬೇಕಾದರೂ ವಿರೋಧ ಕಟ್ಟಿಕೊಳ್ಳುವ ತಾಕತ್ತು ಸಿದ್ದರಾಮಯ್ಯನವರಿಗೆ ಇದೆ ಹಾಗೆ ಆಡಳಿತ ವಿಚಾರಕ್ಕೆ ಬಂದರೆ ವಿರೋಧ ಪಕ್ಷಗಳು ಕೂಡ ತುಟಿ ಬಿಚ್ಚದ ರೀತಿಯಲ್ಲಿ ಆಡಳಿತ ಮಾಡಿ ತೋರಿಸಿದ್ದಾರೆ , ಕಾನೂನು ಸುವ್ಯವಸ್ಥೆ ಅಡ್ಡ ದಿಡ್ಡಿ ಸಾಗದಂತೆ ಕೋಮುಗಲಭೆ ನಡೆದಂತೆ ಭ್ರಷ್ಟಾಚಾರ ಇಲ್ಲದಂತೆ ಆಡಳಿತ ನಡೆಸಬಲ್ಲ ಏಕೈಕ ರಾಜಕಾರಣಿ.

ಹಾಗಾಗಿ ಹಳ್ಳ ಹಿಡಿದಿರುವ ಕರ್ನಾಟಕ ರಾಜ್ಯದ ಆಡಳಿತ ಯಂತ್ರವನ್ನು ಸರಿದಾರಿಗೆ ತರುವ ಚಾಣಾಕ್ಷ ಈ ಕನ್ನಡ ರಾಮಯ್ಯ .
ಈ ಬಾರಿಯ ಮುಖ್ಯಮಂತ್ರಿಯ ಸಮರ್ಥ ನಾಯಕ ಸಿದ್ದರಾಮಯ್ಯ .

  • ಭೈರಪ್ಪ ಹರೀಶ್ ಕುಮಾರ್

Leave a Reply