ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರ ಗುಂಪು ಜೂಜಾಡುತ್ತಿದ್ದ ಸ್ಥಳಕ್ಕೆ ಏಕಾಏಕಿ ನುಗ್ಗಿದ 6 ಮುಸುಕುಧಾರಿ ಗ್ಯಾಂಗ್, ಆಟವಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಅವರನ್ನು ವಿವಸ್ತ್ರಗೊಳಿಸಿ 10 ಲಕ್ಷ ನಗದು, 700 ಗ್ರಾಂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ ಬನಶಂಕರಿಯ 2ನೇ ಹಂತದ 9ನೇ ಮುಖ್ಯ ರಸ್ತೆಯ ಬಿವಿಕೆ ಕ್ಲಬ್ನಲ್ಲಿ ಯುಗಾದಿಯ ದಿನವಾದ ಮಾ.31ರ ರಾತ್ರಿ ನಡೆದಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ದರೋಡೆಕೋರರಿಂದ ಹಲ್ಲೆಗೊಳಗಾದ ರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಬನಶಂಕರಿ ಪೊಲೀಸರು, ದರೋಡೆಕೋರರ ಗ್ಯಾಂಗ್ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದರು.
ಯುಗಾದಿ ಪ್ರಯುಕ್ತ ರಮೇಶ್ ಮಾ.31ರಂದು ಸ್ನೇಹಿತರಾದ ಮುರುಳಿ, ಉಮಾಶಂಕರ್, ತಿಮ್ಮಣ್ಣ, ಕಿರಣ್, ಪುಟ್ಟಸ್ವಾಮಿ, ಬಾಬು ರೆಡ್ಡಿ, ನಾಗರಾಜ್, ಆನಂದ್, ಬೆಟ್ಟೇಗೌಡ, ರವಿಕುಮಾರ್, ಶೇಖರ್ ಹಾಗೂ ಗುಂಡ ಅವರೊಂದಿಗೆ ಸೇರಿಕೊಂಡು ಬಿವಿಕೆ ಕ್ಲಬ್ಗೆ ತೆರಳಿ ಮದ್ಯ ಸೇವಿಸಿ, ಕ್ಲಬ್ನ 2ನೇ ಮಹಡಿಯ ರೂಮ್ನಲ್ಲಿ ಇಸ್ಟಿಟ್ ಆಡುತ್ತಿದ್ದರು.
ಸಂಜೆ ಸುಮಾರು 6 ಗಂಟೆಗೆ 6 ಮಂದಿ ಮುಸುಕುಧಾರಿಗಳು ಮಾರಕಾಸ್ತ್ರಗಳೊಂದಿಗೆ ರೂಮ್ಗೆ ನುಗ್ಗಿದ್ದು, ಯಾರಾದರೂ ಉಸಿರು ಬಿಟ್ಟರೆ ಇಲ್ಲ ಎನಿಸುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಬಳಿಕ ರಮೇಶ್ ಹಾಗೂ ಅವರ ಸ್ನೇಹಿತರಿಂದ 10 ಲಕ್ಷ ನಗದು ಹಾಗೂ 700 ಗ್ರಾಂ ಚಿನ್ನಾಭರಣ, ಮೊಬೈಲ್ ಪೋನ್ಗಳನ್ನು ದರೋಡೆ ಮಾಡಿದ್ದಾರೆ. ನಂತರ ಎಲ್ಲರ ಬಟ್ಟೆ ಬಿಚ್ಚಿಸಿಕೊಂಡು ವಿವಸ್ತ್ರಗೊಳಿಸಿ ರೂಮ್ನಲ್ಲಿ ಕೂಡಿ ಹಾಕಿ ನಗದು, ಚಿನ್ನಾಭರಣ, ಮೊಬೈಲ್ ಹಾಗೂ ಬಟ್ಟೆಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ರಮೇಶ್ ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ. ಜೂಜಾಡಲು ಅನುವು ಮಾಡಿಕೊಟ್ಟ ಕ್ಲಬ್ ಮೇಲೆ ಕೂಡ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಕ್ಲಬ್ ಹಾಗೂ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮರಾದ ದೃಶಾವಳಿಯನ್ನು ಪರಿಶೀಲನೆ ದರೋಡೆಕೋರರ ಗ್ಯಾಂಗ್ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಲೋಕೇಶ್ ಹೇಳಿದರು.




