ಹೈದರಾಬಾದ್: ಗ್ಯಾಸ್ ರಿಪೇರಿ ಸೋಗಿನಲ್ಲಿ ಮಹಿಳೆಯಿಂದ 6,000 ಮತ್ತೊಬ್ಬ ವ್ಯಕ್ತಿಯಿಂದ 3,000 ರೂಪಾಯಿ ಪಡೆದಿದ್ದು, ಇನ್ನಷ್ಟು ಜನರಿಂದ ಹಣ ದೋಚಿರುವುದಾಗಿ ವರದಿಯಾಗಿದೆ.
ತಾವು ಗ್ಯಾಸ್ ಏಜೆನ್ಸಿಯಿಂದ ಬಂದಿದ್ದೇವೆ. ಗ್ಯಾಸ್ ಸಿಲಿಂಡರ್, ಸ್ಟೌವ್ ಪರಿಶೀಲಿಸುತ್ತೇವೆ ಜನರನ್ನು ನಂಬಿಸಿ ಮನೆಯೊಳಗೆ ಪ್ರವೇಶಿಸಿ, ಸ್ಟೌವ್ ರಿಪೇರಿಗೆ ನಿರ್ದಿಷ್ಟ ಮೊತ್ತ ಕೊಡಬೇಕೆಂದು ತಾಕೀತು ಮಾಡಿದ್ದಾರೆ. ಕೊಡದೇ ಇದ್ದಲ್ಲಿ ಸಿಲಿಂಡರ್ ಸ್ಫೋಟಿಸುವ ಬೆದರಿಕೆಯೊಡ್ಡಿ ಹಣ ದೋಚಿದ್ದಾರೆ. ಜನ ರಿಪೇರಿ ಹೆಸರಿನಲ್ಲಿ ಮನೆಗೆ ಬರುವವರಿಂದ ಸುರಕ್ಷಿತವಾಗಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.




