ಮಹಿಳೆಯ ಪ್ರಾಣ ತೆಗೆದ ಪಾನಿಪುರಿ

5 years ago

ಮುಂಬೈ: ತನಗೆ ಮಾಹಿತಿ ನೀಡದೆ ಗಂಡ ಪಾನಿಪುರಿ ತಂದಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪ್ರತಿಕ್ಷಾ ಸರ್ವಾಡೆ (23) ಎಂದು ಗುರುತಿಸಲಾಗಿದ್ದು, ಇವರು 2019 ರಲ್ಲಿ ಗಹಿನಿನಾಥ್ ಎಂಬುವವರನ್ನು ಮದುವೆಯಾಗಿದ್ದರು. ಆರಂಭದಿಂದಲೂ ದಂಪತಿ ನಡುವೆ ಮನಸ್ತಾಪವಿದ್ದು, ಜಗಳಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.

ಗಹಿನಿನಾಥ್​ ಕಚೇರಿಯಿಂದ ಬರುವ ವೇಳೆ ಪಾನಿಪುರಿಯನ್ನು ಪಾರ್ಸೆಲ್​ ತಂದಿದ್ದಾರೆ. ಇದಕ್ಕು ಮುನ್ನ ಗಂಡನಿಗೆ ಪ್ರತಿಕ್ಷಾ ತಿಂಡಿ ಮಾಡಿಟ್ಟಿದ್ದಾರೆ. ಪಾನಿಪುರಿ ನೋಡಿದ ಅವರು ತನಗೆ ಮಾಹಿತಿ ನೀಡದೆ ಪಾನಿಪುರಿ ತಂದದ್ದೇಕೆ ಎಂದು ತಕರಾರು ತೆಗೆದಿದ್ದಾರೆ. ಮೊದಲೇ ಹೇಳಿದ್ದಲ್ಲಿ ತಿಂಡಿ ಮಾಡುತ್ತಿರುಲಿಲ್ಲ ಎಂದು ಬೇಸರವಾಗಿ, ಜಗಳ ವಿಕೋಪಕ್ಕೆ ತಿರುಗಿ ಪ್ರತಿಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

Leave a Reply