ವಿಧಾನಪರಿಷತ್ ಸದಸ್ಯ ಟಿ.ಎ.ಶರವಣಗೆ ಪಂಗನಾಮ ಹಾಕಿದ ಐನಾತಿ ಕಳ್ಳರು
ಬೆಂಗಳೂರು: ಉದ್ಯಮಿ ಹಾಗೂ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರಿಗೆ ಐನಾತಿ ಕಳ್ಳರು ಪಂಗನಾಮ ಹಾಕಿದ್ದಾರೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಟಿ.ಎ.ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಚಿನ್ನಾಭರಣಗಳನ್ನು ಹಾಲ್ ಮಾರ್ಕ್ ಹಾಕಿರುವುದಾಗಿ ಪಡೆದು ವಂಚಿಸಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಲ್ ಮಾರ್ಕ್ಸ್ ಸೀಲ್ ಹಾಕಲು ನೀಡಿದ್ದ 1.249 ಕೆ.ಜಿ ತೂಕದ ಚಿನ್ನಾಭರಣ ವಂಚಿಸಲಾಗಿದೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮ್ಯಾನೇಜರ್ ನೀಡಿದ ದೂರಿನನ್ವಯ ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಕಳೆದ ಜನವರಿ 14ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ 1 ಕೆಜಿ 249 ಗ್ರಾಂ ಚಿನ್ನದ ಆಭರಣಗಳನ್ನು ಹಾಲ್ ಮಾರ್ಕ್ ಹಾಕಲು ನಗರ್ತ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ಗೆ ನೀಡಲಾಗಿತ್ತು.
ಜನವರಿ 15ರಂದು ಚಿನ್ನಾಭರಣ ಕೊಡುವಂತೆ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ನ ಮಾಲೀಕ ಭರತ್ ಚಟಡ್ ಅವರನ್ನ ಕೇಳಿದಾಗ, “ತಮ್ಮ ಸಂಸ್ಥೆಯ ಉದ್ಯೋಗಿ ಕಳ್ಳತನ ಮಾಡಿದ್ದಾನೆ” ಎಂದು ಉತ್ತರಿಸುತ್ತಿದ್ದಾರೆ ಎಂದು ದೂರಲಾಗಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ ಮ್ಯಾನೇಜರ್ ನೀಡಿರುವ ದೂರಿನನ್ವಯ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.



