ಬೆಂಗಳೂರು: ಗೋವಿಂದರಾಜ ನಗರದಲ್ಲಿ ಮುಖ್ಯ ಆಯುಕ್ತರ ಆದೇಶ ಮೇರೆಗೆ ವಲಯ ಆಯಕ್ತ ದೀಪಕ್, ಜಂಟಿ ಆಯುಕ್ತ ಯೋಗೇಶ್ ನೇತೃತ್ವದಲ್ಲಿ ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್, ಅಲೋಕ್ ಶೆಟ್ಟಿ ಮತ್ತು ಸಹಾಯಕ ಇಂಜಿನಿಯರ್ ಗಳಾದ ವಿಜಯಕುಮಾರ್, ನವೀನ್ ಮತ್ತು ಪೂಲೀಸ್ ಸಹಕಾರದಿಂದ ಗೋವಿಂದರಾಜನಗರದಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.

ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಆನಾನುಕೂಲವಾಗಿರುವ ಕಾರಣದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ಬದಿಯ ಒತ್ತುವರಿದಾರ ಮಳಿಗೆ ಮತ್ತು ಬೋರ್ಡ್ ಮತ್ತು ಗಾಡಿಗಳನ್ನು ಇಂದು ಗೋವಿಂದರಾಜನಗರದಲ್ಲಿ ತೆರವು ಕಾರ್ಯ ಮಾಡಲಾಗಿದೆ.

ನಮ್ಮ ಉದ್ದೇಶ ಪಾದಚಾರಿಗಳಿಗೆ ನಡೆಯಲು ಅನುಕೂಲ ಮಾಡಿಕೊಡುವುದು. ತೆರವು ಕಾರ್ಯಾಚರಣೆ ಯಾರ ಮೇಲಿನ ಸೇಡಿನ ಕ್ರಮವಲ್ಲ. ಮಾನ್ಯ ಘನ ನ್ಯಾಯಲಯಗಳು ಈಗಾಗಲೇ ಫುಟ್ ಪಾತ್ ಒತ್ತುವರಿ ತೆರವು ಮಾಡಬೇಕು ಎಂಬ ಆದೇಶ ನೀಡಿದೆ. ಕಾನೂನು ಪರಿಪಾಲನೆ ನಮ್ಮ ಕರ್ತವ್ಯ ಅದ್ದರಿಂದ ತೆರವು ಕಾರ್ಯಚರಣೆ ಮಾಡಲಾಗಿದೆ. ಜನರ ಸುರಕ್ಷತೆ ಮತ್ತು ರಕ್ಷಣೆಗೆ ನಮ್ಮ ಆದ್ಯತೆ, ಸುಗಮ ಸಂಚಾರ, ಪಾದಚಾರಿಗಳಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.




