ಬೆಂಗಳೂರು: ಬಹುತೇಕ ನಿರ್ಮಾಪಕರು ತಮ್ಮ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುನ್ನ ಒಟಿಟಿಯಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರತೊಡಗಿದ್ದಾರೆ.
ಚಿತ್ರಮಂದಿರಗಳಲ್ಲಿ ಚಿತ್ರಗಳು ಯಶಸ್ಸು ಕಾಣುವುದಕ್ಕಿಂತ ಒಟಿಟಿಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ಸಿನಿಮಾ ನಟ-ನಟಿಯರು, ನಿರ್ಮಾಪಕರು ಒಟಿಟಿಯತ್ತ ಮುಖಮಾಡತೊಡಗಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ 4 ಸಿನಿಮಾಗಳು ಒಟಿಟಿ ವೇದಿಕೆಯ ಮೂಲಕ ಬಿಡುಗಡೆಯಾಗುತ್ತಿವೆ. ಒಟಿಟಿ ಮೂಲಕ ಬಿಡುಗಡೆಯಾಗುತ್ತಿರುವ ಚಿತ್ರಗಳ ಪಟ್ಟಿ ಮತ್ತು ದಿನಾಂಕ ಇಲ್ಲಿದೆ.
ಅ.16 ರಂದು ವಿಕ್ಕಿ ಕೌಶಲ್ ಅಭಿನಯದ ಸರ್ದಾರ್ ಉದ್ಧಮ್ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ
ಅ.14 ರಂದು ಜ್ಯೋತಿಕಾ ಅಭಿನಯದ ಉಡನ್ಪಿರಪ್ಪೆ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ
ನಟಿ ತಾಪ್ಸಿ ಪನ್ನು ಅಭಿನಯದ ರಶ್ಮಿ ರಾಕೆಟ್ ಅ.15 ರಂದು ಜೀ 5 ನಲ್ಲಿ ಬಿಡುಗಡೆ
ಅ.22 ರಂದು ಕನ್ನಡದ ರತ್ನನ್ ಪ್ರಪಂಚ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ




