ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿ ಭಾಷಿಗರೂ ಸೇರಿದಂತೆ ಎಲ್ಲರೂ ಕನ್ನಡ ಕಲಿಯಬೇಕು: ಟಿ ಎ ನಾರಾಯಣ ಗೌಡ
ಬೆಂಗಳೂರು: ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿ ಭಾಷಿಗರೂ ಸೇರಿದಂತೆ ಎಲ್ಲರೂ ಕನ್ನಡ ಕಲಿತು, ಕನ್ನಡ ಮಾತನಾಡುತ್ತಾ ಇರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ ಹೇಳಿದ್ದಾರೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಮರಾಠಿ ಮಾತನಾಡಿಲ್ಲ ಎಂದು ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದರು.
ನಾನು ಬೆಳಗಾವಿಗೆ ಬರುವಷ್ಟರಲ್ಲಿ ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್ ಪಡೆಯಬೇಕು. ನನ್ನ ನಾಡಿನಲ್ಲಿ ನನ್ನ ಕನ್ನಡಿಗನ ಮೇಲೆ ನಡೆದ ದಬ್ಬಾಳಿಕೆಯನ್ನು ತಡೆಯುವ ಕೆಲಸ ನಾವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಂಇಎಸ್ ಬೇರುಗಳನ್ನು ಬೆಳಗಾವಿಯಲ್ಲಿ ಈಗಾಗಲೇ ಕತ್ತರಿಸಿದ್ದೇವೆ. ಅದಕ್ಕಾಗಿ ಅಮಾಯಕ ಕನ್ನಡಿಗನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿಯನ್ನು ನಿಮ್ಮ ಕೈಯಿಂದ ಏನೂ ಮಾಡಲು ಆಗೋದಿಲ್ಲ. ಒಂದಿಂಚು ಜಾಗ ಕಬಳಿಸಲು ನಿಮಗೆ ಸಾಧ್ಯವಿಲ್ಲ ಎಂದರು.
ಕನ್ನಡ ಮಾತಾಡಿದ್ದಕ್ಕೆ ಮರಾಠಿ ಮಾತಾಡು ಅಂತಾ ಕಂಡಕ್ಟರ್ ಮೇಲೆ ಎಂಇಎಸ್ ಮತ್ತು ಕೆಲ ಮರಾಠಿಗರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇಂಥವರನ್ನು ಅನೇಕ ವರ್ಷಗಳಿಂದ ನಾನು ನೋಡಿದ್ದೇನೆ. ಹಿಂದೆ 7 ಜನ ಎಂಇಎಸ್ ಕಿಡಿಗೇಡಿಗಳು ಶಾಸಕರಾಗಿ ಆಯ್ಕೆಯಾಗಿ ಬರುತ್ತಿದ್ದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೆಲ್ಲುತ್ತಿದ್ದರು. ಜಿ.ಪಂ., ತಾ.ಪಂ ಅವರ ಹಿಡಿತದಲ್ಲಿದ್ದವು. ಕನ್ನಡ ಬಾವುಟ ಹಾರಿಸದ ಸ್ಥಿತಿಯಿತ್ತು. ಆದರೆ, ಅವರನ್ನು ನಮ್ಮ ಕನ್ನಡಿಗರು ಬಗ್ಗು ಬಡಿದಿದ್ದಾರೆ. ಹಾಗಾಗಿ, ಇಂಥ ಉದ್ಧಟತನಕ್ಕೆ ನಾವು ಹೆದರುವುದಿಲ್ಲ. ಯಾಕೆಂದರೆ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹುಟ್ಟಿದ ಪುಣ್ಯಭೂಮಿ” ಎಂದರು.
ಎಂಇಎಸ್ ಬೆನ್ನಿಗೆ ಬೆಳಗಾವಿ ರಾಜಕಾರಣಿಗಳು ನಿಂತಿದ್ದಾರೆ. ಕನ್ನಡಿಗರನ್ನು ಮರೆತು ಭ್ರಷ್ಟ ರಾಜಕಾಣಿಗಳು ರಣಹೇಡಿಗಳಂತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಇವರ ರಾಜಕೀಯ ಪ್ರಭಾವದಿಂದ ರಾತ್ರೋರಾತ್ರಿ ಕಂಡಕ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿ ನೀವು ಕೆಲಸ ಮಾಡುತ್ತಿದ್ದಿರೋ ಅಥವಾ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಿರೋ ಎಂದರು.




