ಬೆಂಗಳೂರು: ರಾಜ್ಯ ಸರ್ಕಾರದ ಗೊತ್ತು ಗುರಿ ಇಲ್ಲದ ಆಡಳಿತದ ಪರಿಣಾಮವಾಗಿ ಖಜಾನೆ ಸಂಪೂರ್ಣ ಬರಿದಾಗಿದೆ. ಇದನ್ನು ತುಂಬಿಸಿಕೊಳ್ಳುವ ಸಲುವಾಗಿ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿದ ನಿವೇಶನ ಹಾಗೂ ಮನೆಗಳಿಗೆ ‘ಬಿ- ಖಾತಾ’ ನೀಡುತ್ತಿದೆ ಎಂದು ಕೇಂದ್ರ ಕೈಗಾರಿಕೆ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ನಿವೇಶನಗಳಿಗೆ ಬಿ ಖಾತೆ ನೀಡುವ ಕಾರ್ಯವನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ನಡೆಸುತ್ತಿರುವುದೇಕೆ? ರಾಜ್ಯದ ಖಜಾನೆಯಲ್ಲಿ ಹಣವಿಲ್ಲದಿದ್ದರಿಂದ ಈಗ ಅಕ್ರಮ- ಸಕ್ರಮ ಎಂದು ಹೊರಟಿದ್ದಾರೆ ಎಂದರು.
ರಾಜ್ಯ ಸರ್ಕಾರ ಜನರ ಮೇಲಿನ ಪ್ರೀತಿಯಿಂದೇನೂ ‘ಬಿ-ಖಾತಾ’ ಮಾಡಿಕೊಡುತ್ತಿಲ್ಲ. ಈ ವಿಷಯದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ, ಸ್ಪಷ್ಟತೆ ಇಲ್ಲ. ಆದರೂ ನಡೆಸುತ್ತಿದೆ. ಖಜಾನೆ ಖಾಲಿ ಆಗಿರುವುದರಿಂದ, ತುಂಬಿಸಿಕೊಳ್ಳಲು ಆತುರದಲ್ಲಿದೆ. ದರ ಏರಿಕೆ, ತೆರಿಗೆ ಹೇರಿಕೆಯಿಂದಲೇ ಈ ಸರ್ಕಾರ ನಡೆಯುತ್ತಿದೆ ಎಂದರು.
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಮಾಡಿಲ್ಲ. ಇಲಾಖಾವಾರು ಪ್ರತಿ ರಾಜ್ಯಗಳಿಗೂ ಹಣ ಹಂಚಿಕೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರ ಇದ್ದಾಗಿನಿಂದಲೂ ನಡೆದುಕೊಂಡೇ ಬಂದಿದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೇನೂ ಆಗಿದ್ದಲ್ಲ. ತಾರತಮ್ಯವನ್ನೇನೂ ಮಾಡಿಲ್ಲ. ಆದರೆ, ರಾಜ್ಯ ಸರ್ಕಾರ ಜನರ ಮುಂದೆ ಅಪಪ್ರಚಾರ ಮಾಡಿ ಸುಳ್ಳಿನ ಕಂತೆಯನ್ನೇ ಬಿಚ್ಚಿಡುತ್ತಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಜನವರಿ 31ರವರೆಗೆ ಎಷ್ಟು ಆರ್ಥಿಕ ಪ್ರಗತಿಯಾಗಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ಈ ಸರ್ಕಾರದಲ್ಲಿ ಆರ್ಥಿಕ ಸದೃಢತೆ ಎಲ್ಲಿದೆ? ಜನರ ಮೇಲೆ ತೆರಿಗೆ ವಿಧಿಸಿ ಖಜಾನೆ ತುಂಬಲು ಯತ್ನಿಸಲಾಗುತ್ತಿದೆ. ಇತರ ರಾಜ್ಯಗಳಲ್ಲೂ ಮೆಟ್ರೊ ರೈಲಿದೆ ಇದೆ. ಅಲ್ಲೇಕೆ, ಪ್ರಯಾಣದರ ಹೆಚ್ಚಾಗಲಿಲ್ಲ? ಕರ್ನಾಟಕದಲ್ಲಷ್ಟೇ ಹೆಚ್ಚಾಯಿತೇಕೆ? ಇವರೇ ಶಿಫಾರಸು ಮಾಡಿದ್ದರಿಂದ ಆಗಿದೆ ಎಂದರು.
ಈಗಾಗಲೇ ಬಸ್ ಪ್ರಯಾಣದರ ಏರಿಸಿದ್ದಾರೆ. ಹಾಲಿನ ದರ, ನೀರಿನ ದರವನ್ನು ಏರಿಸುತ್ತಾರಂತೆ. ಜನರ ಕಿಸೆಗೆ ಕೈಹಾಕುತ್ತಿದ್ದಾರೆ. ಇದು ಇವರ ಆರ್ಥಿಕ ಶಕ್ತಿನಾ? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಎಲ್ಲಿ ನಡೆಯುತ್ತಿದೆ. ಯಾವ ಕಾರ್ಯಕ್ರಮಕ್ಕೆ ಹಣ ಕೊಟ್ಟಿದ್ದಾರೆ? ನೀವು ಆರ್ಥಿಕವಾಗಿ ಅಷ್ಟೊಂದು ಶಕ್ತವಾಗಿದ್ದರೆ, ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ಪ್ರತಿ ತಿಂಗಳೂ ಕೊಡಲಾಗುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು.
ಇಂಧನ ಕ್ಷೇತ್ರದ ಮೇಲೆ 40ಸಾವಿರ ಕೋಟಿ ಸಾಲ ಹೊರಿಸುವ ಕೆಲಸವನ್ನು ಈ ಸರ್ಕಾರ ಮಾಡಿದೆ. ಮಾಡುತ್ತಿರುವ ಸಾಲವನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎಂದರು. ಪ್ರಶ್ನಿಸಿದರು.
ಜಾತಿ ಗಣತಿ ವರದಿ ಇಟ್ಕೊಂಡು ಪೂಜೆ ಮಾಡುತ್ತಿದ್ದೀರಾ? ಬಿಡುಗಡೆ ಮಾಡದಂತೆ ನಿಮ್ಮನ್ನು ಹಿಡಿದುಕೊಂಡಿರುವವರು ಯಾರು ಎಂದು ಪ್ರಶ್ನಿಸಿದರು.
ಸಮೀಕ್ಷೆ ನಡೆದು ಹತ್ತು ವರ್ಷಗಳಾಗಿವೆ. ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ವೈಜ್ಞಾನಿಕವಾಗಿ ಮಾಡಬೇಕಾಗಿತ್ತು. ಗಣತಿದಾರರು ನಮ್ಮ ಮನೆಗೇ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಹೀಗಿರುವಾಗ, ಆ ವರದಿ ಇಟ್ಟುಕೊಂಡು ಈಗ ಅಲ್ಲಾಡಿಸುತ್ತೀರಾ? ಜಾತಿ- ಜಾತಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದೀರಾ. ಮಾಧ್ಯಮಕ್ಕೆ ಸೋರಿಕೆಯನ್ನೇಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ವರದಿಯನ್ನು ಬಿಡುಗಡೆ ಮಾಡಲಿ ಆಗ ಗೊತ್ತಾಗುತ್ತದೆ. ರಾಜ್ಯದಲ್ಲಿರುವ ಈ ಸರ್ಕಾರ ಹೋದರೆ ಜನರಿಗೆ ನೆಮ್ಮದಿ. ಬಹುಮತ ಪಡೆದು ಸರ್ಕಾರ ಮಾಡಿದ್ದಾರಲ್ಲಾ, ಆರು ತಿಂಗಳೋ ಅಥವಾ ಐದು ವರ್ಷವೋ ಎಷ್ಟು ದಿನ ಇರುತ್ತಾರೆಯೋ ಇರಲಿ. ಮುಂದೆಯೂ ಯಾರ್ಯಾರು ಇರುತ್ತಾರೆ ಎಂಬುದು ಚುನಾವಣೆ ನಡೆದಾಗ ಗೊತ್ತಾಗುತ್ತದೆ ಎಂದರು.
ಸಿ.ಎಂ ಸ್ಥಾನ ಇರುವುದೇ ರೆಕಾರ್ಡ್ ಮುರಿಯಲು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿರುವುದನ್ನು ಗಮನಿಸಿದ್ದೇನೆ. ರೆಕಾರ್ಡ್ ಮಾಡುವುದು ರಾಜ್ಯವನ್ನು ಎಷ್ಟು ದಿನ ಆಳಿದ್ದೇವೆ ಎಂಬುದರ ಮೇಲಲ್ಲ, ನಾಡಿನ ಜನರಿಗೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಎಷ್ಟು ವರ್ಷ ಅಧಿಕಾರದಲ್ಲಿದ್ದೆವು ಎಂಬುದು ಮುಖ್ಯವೇನಲ್ಲ. ನೀವು ಗ್ಯಾರಂಟಿಗಳಿಗೆ ಕೊಡುತ್ತಿರುವುದು ಯಾರಪ್ಪನ ಮನೆ ದುಡ್ಡು? ಎಂದರು.
ಗೃಹ ಸಚಿವ ಜಿ. ಪರಮೇಶ್ವರ ಅವರ ಇತ್ತೀಚಿನ ಹೇಳಿಕೆ ಗಮನಿಸಿದರೆ, ಅವರಿಗೆ ರಾಜಕೀಯ ವೈರಾಗ್ಯ ಬಂದಂತಿದೆ. ಈ ಸರ್ಕಾರದಲ್ಲಿ ಯಾರಿಗೆ ರಕ್ಷಣೆ ಕೊಡುತ್ತಾರೆ? ಸಚಿವರ ಹೇಳಿಕೆ ಗಮನಿಸಿದರೆ ಅವರಿಗೆ ನಿಯಂತ್ರಣ ಇದೆಯಾ? ಜನರು ಹಾಗೂ ಅಧಿಕಾರಿಗಳಿಗೆ ಏನು ಸಂದೇಶ ಕೊಡುತ್ತೀದ್ದೀರಿ? ಮರ್ಯಾದಸ್ಥರು ಈ ಸರ್ಕಾರದಲ್ಲಿ ಇರುವುದು ಒಳ್ಳೆಯದಲ್ಲ ಎಂಬ ತೀರ್ಮಾನಕ್ಕೆ ಪರಮೇಶ್ವರ್ ಬಂದಿರಬೇಕು ಎಂದರು.




