ಗಂಭೀರ ಪುಸ್ತಕಗಳನ್ನು ಓದಿ ತಲೆಬಿಸಿ ಮಾಡಿಕೊಳ್ಳುವುದರ ಜೊತೆಗೆ ಈ ಪುಸ್ತಕ ಓದಿ ಎಂಜಾಯ್ ಮಾಡಿ

11 months ago

ನೀವು Instagram, Podcast, YouTube ನಂತಹ ಸಾಮಾಜಿಕ ಮಾಧ್ಯಮಗಳನ್ನು ಗಂಭೀರವಾಗಿ ಗಮನಿಸಿದರೆ ಅಲ್ಲಿ ಮುಖ್ಯವಾಹಿನಿಯ ಪತ್ರಿಕೆ, ಮಾಧ್ಯಮ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸಿಗದ ಅಪರೂಪದ ಚಿಂತಕರು  ಸಿಗುತ್ತಾರೆ. ಅದರಲ್ಲೂ ಈ ಅಪರೂಪದ ಚಿಂತಕರಲ್ಲಿ ಹೆಚ್ಚು ಜನ ದಲಿತ, ಆದಿವಾಸಿ, ಹಿಂದುಳಿದ ಸಮುದಾಯಗಳಿಂದ ಬಂದವರಾಗಿರುತ್ತಾರೆ. ಇವರ ಸಾಮಾಜಿಕ ಹಿನ್ನಲೆಯ ಕಾರಣಕ್ಕಾಗಿಯೇ ದೇಶ- ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಓದಿ ಪದವಿ ಗಳಿಸಿದ್ದರೂ ಅವರ ಅರ್ಹತೆಗೆ ತಕ್ಕ ಕೆಲಸವಾಗಲಿ, ಅವರ ಬೌದ್ಧಿಕತೆ ತಕ್ಕ ವೇದಿಕೆಗಳಾಗಲಿ ಇವರಿಗೆ ಸಿಗುವುದಿಲ್ಲ.

ಮುಖ್ಯವಾಗಿ ಇವತ್ತಿನ ಸಂದರ್ಭದಲ್ಲಿ ಜಾತಿ-ಲಿಂಗ- ಧರ್ಮಕ್ಕೆ ಸಂಬಂಧಿಸಿದ Social realityಯ ಪ್ರಶ್ನೆಗಳನ್ನು ಎತ್ತುವವವರಿಗೆ ಎಲ್ಲೂ ಜಾಗವಿರುವುದಿಲ್ಲ. ಇದರ ಮಧ್ಯೆ ಮುಖ್ಯವಾಹಿನಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ತಮಗೆ ಅನಿಸಿದ್ದನ್ನು express ಮಾಡಲೇಬೇಕೆನಿದವರು ಸಾಮಾಜಿಕ ಮಾಧ್ಯಮಗಳು, pod cast, Stand up Comedyಗಳ ಮೂಲಕ ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸಿಕೊಳ್ಳುತ್ತಾರೆ. ಈ ಮಾದರಿ ಒಣ ಅಕಡೆಮಿಕ್ ಸರ್ಕಸ್ಸುಗಳು, ಹುಸಿ ಬೌದ್ಧಿಕ ಭಿನ್ನಾಣಗಳಿಗಿಂತ ಎಷ್ಟೋ Effective ಆಗಿದ್ದು ಹೆಚ್ಚು ಜನರನ್ನು ಅದರಲ್ಲೂ ಹೊಸ ತಲೆಮಾರನ್ನು ತಲುಪುತ್ತಿದೆ.

ಇಷ್ಟೆಲ್ಲ ಹೇಳಲು ಕಾರಣ Dr. Ravikant Kisana ಎನ್ನುವ ಬುದ್ದಿಜೀವಿ ಮತ್ತು ಅವರ ಪುಸ್ತಕ “Meet the Savarnas”. ಅಕಡೆಮಿಕ್ ವಲಯದಲ್ಲಿ ಕೆಲಸ ಮಾಡುತ್ತಲೇ Instagram, Podcast, YouTube ಮೂಲಕ Anti-caste philosophy ಮತ್ತು ಸಮಕಾಲೀನ ಸಂದರ್ಭದ ಅನೇಕ ವಿದ್ಯಮಾನಗಳ ಬಗ್ಗೆ ತೀಕ್ಷ್ಣವಾಗಿ ಬರೆಯುವ, ಮಾತನಾಡುವ ಇವರು “Buffalo Intellectual” ಎಂದು ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಲೇಖನಗಳು ಮತ್ತು Podcast ಗಳನ್ನು ಗಮನಿಸಿದರೆ ಇವರಿಗೆ ಇರುವ ತೀಕ್ಷ್ಣ ಒಳನೋಟ ಗೊತ್ತಾಗುತ್ತವೆ. ಬೌದ್ಧಿಕ ಒಳನೋಟಗಳ ಜೊತೆಗೆ ವ್ಯಂಗ್ಯ, ವಿಡಂಬನೆಯನ್ನು ಬೆರೆಸುವುದರಿಂದ ಇವರ ಮಾತು-ಬರಹ ವಿಶಿಷ್ಟ ಎನಿಸುತ್ತದೆ.

ನಮ್ಮ ಅಕಡೆಮಿಕ್ ಮತ್ತು ಬೌದ್ಧಿಕ ವಲಯದಲ್ಲಿ ದಲಿತರು ಮತ್ತು ಜಾತಿಯ ಪ್ರಶ್ನೆಗಳನ್ನು ಕೇವಲ ತಮ್ಮ ಕ್ರೆಡಿಟ್ ಹೆಚ್ಚಿಸಿಕೊಳ್ಳುವ ಸಲುವಾಗಿ ಸೆಲೆಬ್ರೆಟ್ ಮಾಡುತ್ತಿರುವ ಟ್ರೆಂಡ್ ಇತ್ತೀಚಿಗೆ ಹೆಚ್ಚಾಗಿದೆ. ದಲಿತರು, ದಲಿತ ಸಾಹಿತ್ಯ, ದಲಿತ ಕಲೆ, ದಲಿತ ಹಾಡು, ದಲಿತ ಪ್ರೀತಿ, ದಲಿತ ಊಟ ಹೀಗೆ ‘ದಲಿತರಿಗೆ’ ಸಂಬಂಧಿಸಿದ ಎಲ್ಲದರ ಬಗ್ಗೆಯೂ ಇನ್ನಿಲ್ಲದ ಆಸಕ್ತಿ ಎದ್ದು ಕಾಣುತ್ತಿದೆ. ದಲಿತ ಬದುಕಿನ ಅನುಭವಗಳ ಬಗ್ಗೆ ಅನಗತ್ಯ ಕನಿಕರ, ದಲಿತರ trauma ಬಗ್ಗೆ fetisism ಕಂಡುಬರುತ್ತಿದೆ‌. ಈ ಮಧ್ಯೆ ದಲಿತರಿಗೆ ಸಂಬಂಧಿಸಿದ ಎಲ್ಲ ‘ವಿಷಯಗಳ’ ಬಗ್ಗೆ ಸಂಶೋಧನೆ, ಪುಸ್ತಕ, ಪ್ರಾಜೆಕ್ಟು, ಸಿನಿಮಾ ಮಾಡಿ ಲಾಭ ಮಾಡಿಕೊಳ್ಳುತ್ತಿರುವವರು ಮೇಲ್ಜಾತಿಗಳ ವಿದ್ವಾಂಸರು. ಮೇಲು ಜಾತಿಗಳಿಂದ ಬಂದ ಅನೇಕರು ದೇಶದ ಮತ್ತು ಜಗತ್ತಿನ ಪ್ರತಿಷ್ಠಿತ ವಿವಿಗಳಲ್ಲಿ ಸಂಶೋಧನೆಗೆ ದಲಿತರನ್ನು ‘ವಿಷಯ’ವಾಗಿ ತೆಗೆದುಕೊಂಡು ಸುಲಭವಾಗಿ ಪಿಎಚ್ಡಿ ಮಾಡಿ Expertise ಪಡೆದುಕೊಳ್ಳುತ್ತಾರೆ. ಆದರೆ ಇವರ ನಿಜ ಬದುಕಿನಲ್ಲಿ ದಲಿತರು-ಆದಿವಾಸಿಗಳ ಕುರಿತ ದೃಷ್ಟಿಕೋನ ಸಂಪ್ರದಾಯಸ್ಥ ಜಾತಿವಾದಿಗಳಷ್ಟೇ ಇರುತ್ತದೆ. ಇದಕ್ಕೆ ಕಾರಣ ಇವರ ಮತ್ತು ದಲಿತರ ಸಂಬಂಧ ಸಂಶೋಧಕ- ಸಂಶೋಧನಾ ವಸ್ತುವಿಷಯದ ಆಚೆಗೆ ಬೆಳೆದಿರುವುದೇ ಇಲ್ಲ. ಅಷ್ಟು ಅವಕಾಶವಾದಿತನ ಇವತ್ತಿನ ಅಕಡೆಮಿಕ್ ವಲಯದಲ್ಲಿದೆ. ಈ trend ಅನ್ನು counter ಮಾಡಲು ರವಿಕಾಂತ್ ಕಿಸಾನ ಸರಣಿ ಲೇಖನಗಳನ್ನು ಬರೆದಿದ್ದಾರೆ. ಆ ಲೇಖನಗಳನ್ನು ಗೂಗಲ್ ಮಾಡಿ ಓದಬಹುದು.

ಮೇಲ್ಜಾತಿಯ ಸಂಶೋಧಕರು ದಲಿತರು ಹೇಗೆ ಬಟ್ಟೆಹಾಕುತ್ತಾರೆ, ಹೇಗೆ ಊಟ ಮಾಡುತ್ತಾರೆ, ಹೇಗೆ ಪ್ರೀತಿ ಮಾಡುತ್ತಾರೆ … Etc ಗಳನ್ನು ಸಂಶೋಧನೆ ಮಾಡಿ ಜಗತ್ತಿಗೆ ತೋರಿಸಿದ ಹಾಗೆ ದಲಿತರು ಸವರ್ಣಿಯರ ಮೇಲೆ ಸಂಶೋಧನೆ ಮಾಡಿದರೆ ಏನಾಗಬಹುದು?

ದಲಿತರ ಬಗ್ಗೆ ಸವರ್ಣಿಯರಿಗೆ ಇರುವ Gaze ಅನ್ನು  ಉಲ್ಟಾ ಮಾಡಿ ಸವರ್ಣಿಯರ ಬಗ್ಗೆ ಒಂದು Gaze ಕಟ್ಟಿದರೆ ಹೇಗೆ ಇರುತ್ತದೆ ಎನ್ನುವುದನ್ನು ತಮ್ಮ ವ್ಯಂಗ್ಯ, ವಿಡಂಬನೆಯ ಮೊನಚಾದ ಬರಹಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಇವರ ಮೊದಲ ಪುಸ್ತಕ “Meet the Savarnas” ಈಗ ಬಿಡುಗಡೆಯಾಗಿದೆ. ಕಳೆದ ಮೂವತ್ತು ವರ್ಷಗಳ ಹಿಂದೆ ಭಾರತ ಆರ್ಥಿಕ ಸುಧಾರಣೆಗಳಿಗೆ ತೆರೆದುಕೊಂಡಿದ್ದು, ಅಭಿವೃದ್ಧಿಯ ಕುರಿತು ಭ್ರಮೆಗಳನ್ನು ಕಟ್ಟಿಕೊಂಡಿದ್ದು, ಆ ಭ್ರಮೆಗಳನ್ನು ಸೃಷ್ಟಿಮಾಡಿದವರನ್ನು ಪ್ರಶ್ನೆ ಮಾಡದೆ ಇವತ್ತು ಮೂವತ್ತು ವರ್ಷಗಳ ಹಿಂದಿಗಿಂತ ಹೆಚ್ಚು ಭ್ರಮೆಗಳನ್ನು ಸೃಷ್ಟಿ ಮಾಡುತ್ತಿರುವುದು ಇವುಗಳ ಕುರಿತು ಬರೆದಿದ್ದಾರೆ.

ಆರ್ಥಿಕತೆ, ರಾಜಕಾರಣ, ಕಲೆ, ಸಾಹಿತ್ಯ, ಸಾಮಾಜಿಕ ಚಳುವಳಿಗಳು ಸೇರಿದಂತೆ ಎಲ್ಲ ಕಡೆಯೂ ಕುಳಿತಿರುವ ಒಂದು ವರ್ಗ ಇದೆ ಅದು Elite liberal savarna ವರ್ಗ. ದೇಶದ ಇವತ್ತಿನ ಪರಿಸ್ಥಿತಿಗೆ ದಲಿತ ಚಳುವಳಿ-ರಾಜಕಾರಣ, ಹಿಂದುಳಿದ ವರ್ಗಗಳ ನಡೆ, ಮುಸ್ಲಿಮರು ಹೇಗೆ ಕಾರಣ ಎನ್ನುವುದರ ಬಗ್ಗೆ ಪುಸ್ತಕಗಳು, ಅಕಡೆಮಿಕ್ ಲೇಖನಗಳು, ಅಂಕಣ ಬರಹಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಸಿ ಅಭಿಪ್ರಾಯ ರೂಪಿಸುತ್ತಿರುವುದು ಇದೇ ವರ್ಗ. 

ಈ ಪುಸ್ತಕ ಈ elite liberal Savarnas ಗಳ ಸಮಕಾಲೀನ ಇತಿಹಾಸ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನಡೆಗಳ ಅಧ್ಯಯನ. ಆರ್ಥಿಕ ಸುಧಾರಣೆಗಳ ಲಾಭ ಪಡೆದು ಕಳೆದ ಮೂವತ್ತೈದು ವರ್ಷಗಳಿಂದ ಈ ದೇಶದ ಎಲ್ಲಾ ರಂಗಗಳಲ್ಲಿ ಪ್ರಭಾವಿ ಅಧಿಕಾರ ಸ್ಥಾನಗಳಲ್ಲಿ ಕೂತಿರುವ ಈ ವರ್ಗಕ್ಕೂ ಸಂಪ್ರದಾಯಸ್ಥ ಮನಸ್ಥಿತಿಗೂ ಇರುವ ಸಂಬಂಧ ಏನು? ಹೇಗೆ ಈ ದೇಶದ elite liberal Savarnas ಗಳು self reflective ಗುಣವನ್ನು ಕಳೆದುಕೊಂಡು ತಾವು ಎಲ್ಲ privilege ಗಳನ್ನು ಅನುಭವಿಸುತ್ತಲೆ ದೇಶದ ಇವತ್ತಿನ ಪರಿಸ್ಥಿತಿಗೆ ಎಲ್ಲ ರೀತಿಯಲ್ಲೂ ಅವಕಾಶ ವಂಚಿತ ಜನರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ ಎನ್ನುವುದರ ಅಧ್ಯಯನ. ಹೀಗೆಂದ ಮಾತ್ರಕ್ಕೆ ಇದು ಕೇವಲ liberal ವರ್ಗದ ವಿಮರ್ಶೆ ಮಾತ್ರವಲ್ಲ. Liberal ಮತ್ತು Conservative savarnas ಹೇಗೆ ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದರ ಅನಾವರಣ. Privileged ಸಮುದಾಯಗಳ ನಡೆ ಮತ್ತು ನುಡಿಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ.

ರವಿಕಾಂತ್ ಕಿಸಾನ ಅವರ ಬರಹ-ಮಾತುಗಳ ಪರಿಚಯ ಇಲ್ಲದವರಿಗೆ ಈ ಪುಸ್ತಕದ ವಸ್ತು, ಭಾಷೆ, ಶೈಲಿ ಶಾಕ್ ಕೊಟ್ಟರೆ, ಪರಿಚಯ ಇರುವವರಿಗೆ ಮಜಾ ಕೊಡುತ್ತದೆ.

ಬರಿ ಗಂಭೀರವಾದ ಪುಸ್ತಕಗಳನ್ನು ಓದಿ ತಲೆಬಿಸಿ ಮಾಡಿಕೊಳ್ಳುವುದರ ಜೊತೆಗೆ ಈ ಪುಸ್ತಕವನ್ನು ಓದಿ ಎಂಜಾಯ್ ಮಾಡಿ ಫ್ರೆಂಡ್ಸ್.

ಇದು ಕೇವಲ ಪುಸ್ತಕದ ಪರಿಚಯ ಬರಹ. ಪುಸ್ತಕ ಓದಿ ವಿವರವಾಗಿ ಬರೆಯಲು ಪ್ರಯತ್ನಿಸುತ್ತೇನೆ.

(ಪುಸ್ತಕ ಓದಲು ಆಸಕ್ತಿ ಇರುವವರು ಗೆಳೆಯ ಆಕೃತಿ ಗುರು ಅವರನ್ನು ಸಂಪರ್ಕಿಸಬಹುದು.)

– ವಿ ಎಲ್ ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು

Leave a Reply