ಪರಿಸರಸ್ನೇಹಿಯಾದ ಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ: ಪ್ರಿಯಾಂಕ್ ಖರ್ಗೆ

2 years ago

#Encouraging #ecofriendly #measures #PriyankKharge

ಬೆಂಗಳೂರು: ‘ಬ್ರೇಕಿಂಗ್ ಬೌಂಡರೀಸ್’ ಎಂಬ  ಥೀಮ್ ನೊಂದಿಗೆ ಈ ವರ್ಷದ ಐಟಿ ಮೇಳ ನಡೆಯುತ್ತಿದ್ದು, ಇದರಲ್ಲಿ ಐಟಿಇ-ಡಿಪ್‍ಟೇಕ್ ಟ್ರಾಕ್ ಜಿಸಿಸಿಗಳಿಗೆ ಅವಕಾಶಗಳು, ಕೃತಕ ಬುದ್ದಮತ್ತೆ, ಸುರಕ್ಷತೆಗಾಗಿ ತಂತ್ರಜ್ಞಾನ ಸೇರಿದಂತೆ ಹಲವು ಮಹತ್ವದ ವಿಚಾರಗಳ ಚರ್ಚೆಗಳಾಗಲಿವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಸಕ್ತ ಸಾಲಿನ ಟೆಕ್ ಸಮಿಟ್ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ‌ ಅವರು, ವಿಶ್ವದ 30 ದೇಶಗಳ ಟೆಕ್ ನಾಯಕರು, ಸ್ಟಾರ್ಟ್‌ಪ್‌ಗಳು, ಹೂಡಿಕೆದಾರರು ಮತ್ತು ಸಂಶೋಧನಾ ಪ್ರಯೋಗಾಲಯಗಳ ಕ್ರಿಯಾತ್ಮಕ ಒಮ್ಮುಖಕ್ಕೆ ವೇದಿಕೆಯನ್ನು ಸಜ್ಜುಗೊಂಡಿದೆ ಎಂದರು.

ವೈವಿಧ್ಯಮಯ, ಉತ್ಕೃಷ್ಟ ಕಾರ್ಯಕ್ರಮಗಳೊಂದಿಗೆ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಂವಾದಗಳು, ಡಿಪ್‍ಟೇಕ್, ಜಾಗತಿಕ ಆವಿಷ್ಕಾರಗಳು, ಆರ್ ಅಂಡ್ ಆರ್ ಲ್ಯಾಬ್-2, ಬಿ2ಬಿ ಸಭೆಗಳು, ರಫ್ತು ಪ್ರಶಸ್ತಿಗಳು ಸೇರಿದಂತೆ ಹಲವು ಆಯಾಮಗಳನ್ನು ಒಳಗೊಂಡಿದೆ ಎಂದರು.

ಭವಿಷ್ಯದ ಸೈಬರ್ ಸುರಕ್ಷತೆ, ಸೈಬರ್ ವಾರ್ ಫೇರ್, 5ಜಿ ಅಳವಡಿಕೆ, ವೈರ್‍ಲೆಸ್ ತಂತ್ರಜ್ಞಾನ, ಸೆಮಿಕಂಡಕ್ಟರ್ ವಿಚಾರಗಳ ವಿನಿಮಯವಾಗಲಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಇಸ್ರೋದ ಚಂದ್ರಯಾನ-3ರ ಲ್ಯಾಂಡರ್ ಮಾದರಿಯನ್ನು ಪ್ರದರ್ಶಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪರಿಸರಸ್ನೇಹಿಯಾದ ಕ್ರಮಗಳಿಗೆ ಉತ್ತೇಜನ ನೀಡಲಾಗುತ್ತಿದೆ. 75 ಸೆಷನ್‍ಗಳು, 400ಕ್ಕೂ ಹೆಚ್ಚು ಭಾಷಣಕಾರರು, 350ಕ್ಕೂ ಹೆಚ್ಚು ನವೋದ್ಯಮಗಳು, 600ಕ್ಕೂ ಹೆಚ್ಚು ಪ್ರದರ್ಶಕರು, 20 ಸಾವಿರಕ್ಕೂ ಹೆಚ್ಚಿದ ವ್ಯಾಪಾರಿಗಳು ಸಮ್ಮೇಳನದ ಭಾಗವಾಗಲಿದ್ದಾರೆ ಎಂದರು.

Leave a Reply