ಬೆಂಗಳೂರು: ವಕ್ಫ್ ತಿದ್ದುಪಡಿ ಕಾಯ್ದೆ 2025ರ ದುಷ್ಪರಿಣಾಮಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಮೂಲಕ ಅವರನ್ನು ಶಕ್ತಿಗೊಳಿಸುವ ಕೆಲಸ ಇನ್ನೂ ಹೆಚ್ಚೆಚ್ಚಾಗಿ ಆಗಬೇಕಿದೆ. ಇದು ನಮ್ಮ ಸಮುದಾಯದ ಅಭಿವೃದ್ಧಿಗೆ ಹಾಗೂ ಭವಿಷ್ಯಕ್ಕಾಗಿ ಅತ್ಯಂತ ಅಗತ್ಯವಾದುದು ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ವಕ್ಫ್ ತಿದ್ದುಪಡಿ ಕಾಯ್ದೆ2025 ರ ಸಂವಿಧಾನ ವಿರೋಧಿ ತಿದ್ದುಪಡಿಗಳ ಕುರಿತು ಬೆಂಗಳೂರಿನ ಕಾಡುಗೋಡಿಯ ಈದ್ಗಾದಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜ್ಞಾನ ಮತ್ತು ಜಾಗೃತಿಯ ಮೂಲಕ ನಮ್ಮ ಮಹಿಳೆಯರನ್ನು ಶಕ್ತಗೊಳಿಸುವುದು ಬಲಿಷ್ಠ ಮತ್ತು ಸಬಲೀಕೃತ ಸಮಾಜಕ್ಕೆ ಅತೀ ಅಗತ್ಯವಾಗಿದೆ. ನಾಳೆಯ ಉತ್ತಮ ಭವಿಷ್ಯಕ್ಕಾಗಿ ಇಂದು ನಾವು ಕ್ರಮ ಕೈಗೊಳ್ಳೋಣ. ನೀವು ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ, ಒಂದು ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಎಂದು ಹೇಳಿದರು.
ವಕೀಲರಾದ ಎಂ.ಕೆ. ಮೆತ್ರೀ ಮತ್ತು ಹಿನಾ ಐಜಾಜ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೊಸ ತಿದ್ದುಪಡಿಗಳ ಕಾನೂನು ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಮಹತ್ವಪೂರ್ಣ ಮಾಹಿತಿ ಹಂಚಿಕೊಂಡರು.
ಸಮುದಾಯ ಏಕತೆ ಸಾಧಿಸಬೇಕು ಮತ್ತು ಮಹಿಳೆಯರು ನ್ಯಾಯ ಮತ್ತು ಸಮಾನತೆಯ ಈ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕು.ಇದು ಕೇವಲ ಕಾನೂನು ವಿಚಾರವಲ್ಲ — ಇದು ನಮ್ಮ ಸಮುದಾಯದ ಭವಿಷ್ಯದ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮವು ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ, ವಕ್ಫ್ ತಿದ್ದುಪಡಿ ಕಾಯ್ದೆ 2025ರ ವಿರುದ್ಧ ಏಕತೆಯಿಂದ ನಿಂತು, ದೇಶದ ಸಂವಿಧಾನಿಕ ಮೌಲ್ಯಗಳನ್ನು ಸಂರಕ್ಷಿಸಲು ಕರೆ ನೀಡಿತು.




