ವಕ್ಫ್ ತಿದ್ದುಪಡಿ ಮಸೂದೆ 2024 ಕೇವಲ ವಕ್ಫ್ ಆಸ್ತಿಗಳ ಬಗ್ಗೆ ಅಲ್ಲ
ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಅಳಿಸಲು ನಡೆಸುವ ದಾಳಿ: ಅಪ್ಸರ್ ಕೊಡ್ಲಿಪೇಟೆ
ಹಾಸನ: ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋಧಿಸಿ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೇಲೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಎಸ್‌ಡಿಪಿಐ ಬೇಲೂರು ತಾಲೂಕು ಅಧ್ಯಕ್ಷರಾದ ಅರ್ಷದ್ ಅರೇಹಳ್ಳಿ ನೇತೃತ್ವದಲ್ಲಿ ಬೇಲೂರು ತಾಲೂಕು ಕಚೇರಿಯ ಮುಂಭಾಗ ಬಿಲ್ ನ ಪ್ರತಿಯನ್ನು ಹರಿಯುವ ಮುಖಾಂತರ ಪ್ರತಿಭಟನೆ ನಡೆಸಲಾಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಈ ಮಸೂದೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ಈ ಮಸೂದೆ ಅಸಾಂವಿಧಾನಿಕ ಮಾತ್ರವಲ್ಲದೇ ವಕ್ಫ್ ಸಂಪತ್ತನ್ನು ಕಳಿಸುವ ಕೋಮುವಾದಿ ಸರ್ಕಾರದ ಹುನ್ನಾರ ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು. ಇದು ಸಂಪೂರ್ಣವಾಗಿ ಅನ್ಯಾಯಕರ ಮತ್ತು ಸಂವಿಧಾನ ವಿರೋಧಿ ಎಂದರು.
ಜಂಟಿ ಸದನ ಸಮಿತಿಯ ಮುಂದೆ ವಿರೋಧ ಪಕ್ಷದ ಸದಸ್ಯರು ಮಂದಿಟ್ಟ 44 ತಿದ್ದುಪಡಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಆಡಳಿತ( NDA) ಸದಸ್ಯರು ಮುಂದಿಟ್ಟ 14 ತಿದ್ದುಪಡಿಗಳನ್ನು ಮಾತ್ರ ಅಂಗೀಕರಿಸಿ 13ನೇ ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಟುವಾಗಿ ವಿರೋಧಿಸುತ್ತದೆ ಎಂದರು.
ಈ ಮಸೂದೆ ಪಕ್ಷಪಾತದಿಂದ ಕೂಡಿದ್ದು, ಅಸಾಂವಿಧಾನಿಕ ಮತ್ತು ಮುಸ್ಲಿಂ ವಿರೋಧಿಯಾಗಿದೆ. ಮುಸ್ಲಿಂ ಸಮುದಾಯದ ಸಂಘಟನೆಗಳ, ಜನ ಪ್ರತಿನಿಧಿಗಳ ಅಭಿಪ್ರಾಯವನ್ನು ಪರಿಗಣಿಸದೇ ಮಂಡಿಸಲು ಉದ್ದೇಶಿಸಿರುವ ಈ ಮಸೂದೆ ಕೇವಲ ವಕ್ಫ್ ಆಸ್ತಿಗಳ ಬಗ್ಗೆ ಅಲ್ಲ; ಇದು ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಅಳಿಸಲು ನಡೆಸುವ ದಾಳಿಯಾಗಿದೆ. ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗೆ ಎಸ್‌ಡಿಪಿಐ ಕರೆ ನೀಡುತ್ತದೆ. ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ದೇಶದಾದ್ಯಂತ CAA, NRC ಮಾದರಿಯ ಭಾರಿ ಪ್ರತಿಭಟನೆಗಳು ನಡೆಯಲಿವೆ ಎಂದು ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಾವು ಇಂದು ಇಲ್ಲಿ ಸೇರಿರುವುದು ಭಾರತದ ಮುಸ್ಲಿಂ ಸಮುದಾಯದ ಸಂವಿಧಾನಿಕ ಹಕ್ಕುಗಳು ಮತ್ತು ವಕ್ಫ್ ಆಸ್ತಿಗಳ ರಕ್ಷಿಸುವ ಬಗ್ಗೆ ಅಲ್ಲ ಮೋದಿ ಸರ್ಕಾರ ಈ ಮಸೂದೆಯ ಮೂಲಕ ವಕ್ಫ್ ಬೋರ್ಡ್ ಮೇಲೆ ಹಿಂದೂತ್ವ ಆದರ್ಶಗಳನ್ನು ಬಲಾತ್ಕಾರವಾಗಿ ಹೇರಲು ಯತ್ನಿಸುತ್ತಿದೆ, ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾದದ್ದು ಎಂದರು.
. ತಿದ್ದುಪಡಿಯ ಹಿಂದಿನ ಅಸಲಿ ಉದ್ದೇಶ
• ವಕ್ಫ್ ಕಾಯ್ದೆಯ ಅನುಷ್ಠಾನವನ್ನು BJP ತನ್ನ ಬಹುಮತದ ಬಲದಿಂದ ದುರುಪಯೋಗಪಡಿಸಿಕೊಂಡು ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ಪ್ರಯತ್ನಿಸುತ್ತಿದೆ.
• ಈ ಮಸೂದೆ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ, ಹಾಗೆಯೇ ವಕ್ಫ್ ಸಂಸ್ಥೆಗಳ ಶಕ್ತಿಯನ್ನು ಕುಂದಿಸುತ್ತಿವೆ.
• ಈಗಿನ ಕಾನೂನುಗಳು ಹಿಂದೂ ಧಾರ್ಮಿಕ ಆಸ್ತಿಗಳನ್ನು ಹಿಂದೂ ಅಲ್ಲದವರಿಂದ ನಿರ್ವಹಿಸುವಂತಾಗಲು ನಿರ್ಬಂಧಿಸುತ್ತವೆ. ಆದರೆ ಹೊಸ ವಕ್ಫ್ ಮಸೂದೆಯಡಿಯಲ್ಲಿ, ವಕ್ಫ್ ಬೋರ್ಡ್ ಸದಸ್ಯರ ಬಹುಪಾಲು—ಸಿಇಒ ಸಹ ಮುಸ್ಲಿಮ್ ಆಗಿರುವ ಅವಶ್ಯಕತೆ ಇಲ್ಲ. ಇದು ವಕ್ಫ್ ಆಡಳಿತವನ್ನು ಕಬಳಿಸಲು ಮಾಡಿದ ಸಂಚು.
ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ಹಾಸನ ಜಿಲ್ಲಾಧ್ಯಕ್ಷರಾದ ಇಮ್ರಾನ್ ಅರೇಹಳ್ಳಿ ಜಿಲ್ಲಾ ಕಾರ್ಯದರ್ಶಿಗಳಾದ ಮುಜೀಬ್ ಬೇಲೂರು, ಜಿಲ್ಲಾ ಮುಖಂಡರಾದ ಸರ್ಜಿಲ್, ಕಾಜಿಮ್ ಹಾಗೂ ತಾಲೂಕು ಸಹ ಕಾರ್ಯದರ್ಶಿಗಳಾದ ಸೂಫಿಯನ್ ಅರೇಹಳ್ಳಿ ಮೊದಲಾದವರು ಹಾಜರಿದ್ದರು.




