ಮಡಿಕೇರಿ: ಸಾಂವಿಧಾನಿಕ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿ, ಆರ್ ಎಸ್ ಎಸ್ ನೇತೃತ್ವದ ಕೋಮುವಾದಿ ಫ್ಯಾಸಿಸ್ಟ್ ಮೋದಿ ಸರ್ಕಾರವನ್ನು ಸೋಲಿಸಿ ಎಂದು CPI(ML) ಮಾಸ್ ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ ಕರೆನೀಡಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸೋಮವಾರ ಪೇಟೆಯಲ್ಲಿ ಕಾರ್ಯಕರ್ತರ ತರಬೇತಿ ಶಿಬಿರ ಉದ್ಘಾಟಿಸಿ ಮಾತಾಡಿದ ಅವರು, ತಾರತಮ್ಯದಿಂದ ಕೂಡಿರುವ ಹಾಗೂ ಯಾವುದೆ ಆಸ್ತಿ ಹಕ್ಕುಗಳ ದಾಖಲಾತಿಗಳಿಲ್ಲದ ಆದಿವಾಸಿಗಳನ್ನು, ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೆ ನಾಗರಿಕರನ್ನಾಗಿಸುವ ಪೌರತ್ವ ತಿದ್ದುಪಡಿ ಕಾಯ್ದೆ (CAA) ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಭಾರತ ದೇಶದಲ್ಲಿ ಮೋದಿ ಶಾ ಸರ್ಕಾರ ಜಾರಿಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಿಂದ ಕಾನೂನು ಎದುರು ಎಲ್ಲರೂ ಸಮಾನರು ಎಂಬ ಕಲಂ 14ರ ಉಲ್ಲಂಘನೆಯಾಗಿದೆ. ಈ ಕಾಯ್ದೆ ಜಾರಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಆಯುಕ್ತರ ಕಚೇರಿಯ ವಕ್ತಾರರು ತಿಳಿಸಿದ್ದಾರೆ ಎಂದರು.
ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಹಾಗೂ ಎಲ್ಲಾ ಸಮುದಾಯಗಳಿಗೆ ಸಮಾನ ಹಕ್ಕುಗಳು ನೆಲದ ಕಾನೂನು ಅಡಿಯಲ್ಲಿ ದೊರಕಬೇಕು. ಇದು ಪ್ರಜಾಪ್ರಭುತ್ವದ ಭೌಗೋಳಿಕವಾದ ಮೂಲಭೂತ ಸಿದ್ಧಾಂತಗಳಲ್ಲಿ ಪ್ರತಿಪಾದನೆಯಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂಚೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಯಾವುದೇ ಸಂಪತ್ತಿನ ಒಡೆತನದ ದಾಖಲಾತಿಗಳಿಲ್ಲದ ಕೋಟ್ಯಂತರ ಆದಿವಾಸಿಗಳನ್ನು ಮತ್ತು ಮುಸ್ಲಿಂ ಅಲ್ಪಸಂಖ್ಯಾತರನ್ನು ದೇಶದ ಎರಡನೆ ನಾಗರಿಕರನ್ನಾಗಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಒತ್ತಾಯಿಸಿ ಹೋರಾಡಬೇಕು ಎಂದು ಕರೆನೀಡಿದರು.
CPIML ಮಾಸ್ ಲೈನ್ ರಾಜ್ಯ ಸಮಿತಿ ಮುಖಂಡ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, UPA ಸರ್ಕಾರದ ಅವಧಿಯಲ್ಲಿ 2ಜಿ ಸ್ಪೆಕ್ಟರಂ ಹಗರಣ ಜಾರಿಯಾದರೆ ಸರ್ಕಾರಕ್ಕೆ 1.70 ಲಕ್ಷ ಕೋಟಿ ತೆರಿಗೆ ವಂಚನೆಯಾಗುತ್ತದೆ ಎಂದು ಆಯೋಗದ ವರದಿಯಲ್ಲಿ ಅಂದಾಜು ಮಾಡಲಾಗಿತ್ತು. ಈ ಹಗರಣದ ವಿರುದ್ಧ ಜನ ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಿದರು. ಅಣ್ಣ ಹಜಾರೆ ಬೀದಿಗೆ ಬಂದಿದ್ದರು. ಮೀಡಿಯಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು. ಈ ಕಾರಣದಿಂದ UPA ನೇತೃತ್ವದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು ಎಂದರು.
ಎಲೆಕ್ಟೊರೋಲ್ ಬಾಂಡ್ ಹಗರಣ 2ಜಿ ಹಗರಣಕ್ಕಿಂತ 10 ಪಟ್ಟು ದೊಡ್ಡದು. ಕಾರಣವೇನಂದರೇ ಸಾವಿರಾರು ಕೋಟಿ ಬಾಂಡ್ ಖರೀದಿಸಿ ಬಿಜೆಪಿಗೆ ಕೊಟ್ಟಿರುವ ಪ್ರಮುಖ 20 ಕಂಪನಿಗಳು ರಾಷ್ಟ್ರೀಯ ಕಾರಿಡಾರ್, ರಸ್ತೆ, ರೈಲ್ವೆ, ವಿಮಾನಯಾನ, ಬಂದರು ನಿರ್ಮಾಣ ಮತ್ತು ಕಲ್ಲಿದ್ದಲು ಇತರೆ ಗಣಿಗಾರಿಕೆ ಗುತ್ತಿಗೆ ಪಡೆದು ಹತ್ತಾರು ಲಕ್ಷ ಕೋಟಿ ರೂ.ಸಾರ್ವಜನಿಕ ಹಣವನ್ನು ನುಂಗಿ ಹಾಕಿವೆ ಎಂದರು.
ಪರಿಸರ, ಅರಣ್ಯ ಕಾಡು ಸಂರಕ್ಷಣೆ ಮಾಡುವ ಕಾಯ್ದೆಗೆ ತಿದ್ದುಪಡಿ ತಂದು, ಕಾಡು ನಾಶ ಮಾಡಲು ಕಂಪನಿಗಳಿಗೆ ಹಸಿರು ನಿಶಾನೆ ತೋರಲಾಗಿದೆ. ಕೈಗಾರಿಕೆ ನೆಪದಲ್ಲಿ ರೈತರ ಭೂಮಿ ಕೊಳ್ಳುವುದು ಸೇರಿದಂತೆ ದೇಶದ ಸಂಪತ್ತನ್ನು ಲೂಟಿ ಮಾಡಲು ಕಂಪನಿಗೆ ಅಧಿಕಾರ ನೀಡಲಾಗಿದೆ. ಹಾಗಾಗಿ ಬಾಂಡ್ ಖರೀದಿ ಚುನಾವಣೆ ದೇಣಿಗೆ ಅಲ್ಲ. ಸರ್ಕಾರ ದ ಅಧಿಕೃತ ಲಂಚದ ವ್ಯವಹಾರವಾಗಿದೆ ಎಂದರು.
ಸುಪ್ರೀಂ ಕೋರ್ಟ್ ಪುನಃಪುಣ SBIಗೆ ಛೀಮಾರಿ ಹಾಕಿದ ನಂತರ ಹಗರಣ ಬಯಲುಗೊಂಡಿದೆ. ಆದರೂ ಸಿಕ್ರೇಟ್ ಕೋಡ್ ಗಳನ್ನು ಕೊಡದೆ ಮುಚ್ಚಿಟ್ಟು ಮೋದಿ ಸರ್ಕಾರವನ್ನು ರಕ್ಷಿಸಿಸುವ ಕಾರ್ಯ ಈಗಲೂ ಮುಂದುವರೆದಿದೆ. ಪ್ರಜಾತಂತ್ರವಾದಿಗಳು, ವಿದ್ಯಾರ್ಥಿ ಯುವಜನರು, ರೈತ ಕಾರ್ಮಿಕರು, ಮಹಿಳೆಯರು ಈ ಹಗರಣದ ವಿರುದ್ಧ ಹೋರಾಡಬೇಕು ಮತ್ತು ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಬುದ್ಧಿ ಕಲಿಸಿ ಸೋಲಿಸಬೇಕು ಎಂದು ಮನವಿ ಮಾಡಿದರು.
ಕೊಡಗು ಜಿಲ್ಲಾ ಸಮಿತಿಯ ಕಾರ್ಯದರ್ಶಿ ವೈ.ಎಂ.ಸುರೇಶ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿಯ ಸದಸ್ಯರಾದ ಕೆ.ಬಿ.ಗೋನಾಳ, ಬಿ.ಎನ್.ಯರದಿಹಾಳ, ರಮೇಶ ಪಾಟೀಲ, ಬಸವರಾಜ ನರೆಗಲ್, ಚಿಟ್ಟಿಬಾಬು, ಕೊಡಗು ಜಿಲ್ಲಾ ಸಮಿತಿಯ ಮಂಜುನಾಥ, ಸಿದ್ದಯ್ಯ ಇತರರು ಭಾಗವಹಿಸಿದ್ದರು.



