ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಂದುಗೂಡಿಸಬೇಕೆಂಬ ಉದ್ದೇಶಕ್ಕಾಗಿ ಮಳೆ ಮೈಸೂರಿನ ಅನೇಕ ನಾಯಕರು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆಂಬ ಅಭಿಪ್ರಾಯವಿದ್ದರೂ ಸಹ ಏಕೀಕರಣಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ಇದರ ಫಲವಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ತಮ್ಮ ಸ್ಥಾನವನ್ನು ಕಳೆದುಕೊಂಡರು. ಕರ್ನಾಟಕದ ಏಕೀಕರಣದಲ್ಲಿ ಅವರ ಪಾತ್ರವನ್ನು ಯಾರೂ ಮರೆಯುವಂತಿಲ್ಲ.
ಕರ್ನಾಟಕವೆಂದರೆ ಕೇವಲ ಒಂದು ಜಾತಿಯ ಅಥವಾ ಒಂದು ವರ್ಗದ ನಾಡಲ್ಲ, ಕುವೆಂಜುರವರು ಹೇಳಿದ – ರೀತಿಯಲ್ಲಿ ಇದು ಸರ್ವಜನಾಂಗದ ಶಾಂತಿಯ ತೋಟ, ಬಸವಣ್ಣನವರನ್ನು ಕಂಡ ನಾಡು. ಇಲ್ಲಿ ಲಿಂಗಾಯತರೂ ಇದ್ದಾರೆ, ಒಕ್ಕಲಿಗರೂ ಇದ್ದಾರೆ, ಹಿಂದುಳಿದ ವರ್ಗದವರು, ದಲಿತರು, ಅಲ್ಪಸಂಖ್ಯಾತರು, ಬ್ರಾಹ್ಮಣರೂ ಹೀಗೆ ಅನೇಕ ವರ್ಗದ ಜನರಿದ್ದಾರೆ. ಇವರೆಲ್ಲರೂ ಸೇರಿದರೆ, ಅದುವೇ ಕರ್ನಾಟಕವೆಂಬುದು ನೆನಪಿರಲಿ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆಯ ಸಂದರ್ಭದಲ್ಲಿ ಜನ ಬಯಸುವುದು ನೀತಿವಂತ ಮುಖ್ಯಮಂತ್ರಿಯನ್ನು ಎಲ್ಲಾ ಜನರನ್ನು ಸಮಾನವಾಗಿ ಕಾಣುತ್ತಾ ಎಲ್ಲರ ಹಿತವನ್ನು ಕಾಯುವ ಸಮಚಿತ್ತದ ಮನಸ್ಸಿನ ವ್ಯಕ್ತಿತ್ವವನ್ನೇ ಹೊರತು ಜಾತಿಯ ಮುಖ್ಯಮಂತ್ರಿಯನ್ನಲ್ಲ.
1947 ರಲ್ಲಿ ಕೆ.ಸಿ ರೆಡ್ಡಿರವರು ಮುಖ್ಯಮಂತ್ರಿಗಳಾದರು, 1952 ರಲ್ಲಿ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾದರು, ಇದೇ ಸಮಾಜಕ್ಕೆ ಸೇರಿದ ಅತ್ಯಂತ ಪ್ರಾಮಾಣಿಕ, ನಾಯಕರಾದ ಕಡಿದಾಳ ಮಂಜಪ್ಪನವರು ಮುಖ್ಯಮಂತ್ರಿಗಳಾದರು, ಎಸ್.ಎಂ, ಕೃಷ್ಣರವರು, ಹೆಚ್.ಡಿ. ದೇವೇಗೌಡರು, ಸದಾನಂದ ಗೌಡರು, ಕುಮಾರಸ್ವಾಮಿರವರು ಸಹ ಮುಖ್ಯಮಂತ್ರಿಗಳಾದರು. ಅದೇ ರೀತಿಯಲ್ಲಿ ಲಿಂಗಾಯತ ಸಮುದಾಯದ ನಿಜಲಿಂಗಪ್ಪನವರು, ಎಸ್ ಆರ್ ಕಂಠಿ, ಜಿ.ಡಿ. ಜತ್ತಿರವರು, ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರಾಮಕೃಷ್ಣ ಹೆಗ್ಡೆ ಯವರು. ಆರ್. ಗುಂಡೂರಾಯರು ಮುಖ್ಯಮಂತಿಗಳಾಗಿದ್ದಾರೆ. ಈಡಿಗ ಸಮುದಾಯಕ್ಕೆ ಸೇರಿದ ಬಂಗಾರಪ್ಪನವರು, ಸವಿತಾ ಸಮಾಜದ ಒಂದು ಸಣ್ಣ ಪಂಗಡಕ್ಕೆ ಸೇರಿದ ವೀರಪ್ಪ ಮೋಯ್ಲಿಯರು ರಜಪೂತ ಸಮಾಜಕ್ಕೆ ಸೇರಿದ ಧರ್ಮಸಿಂಗ್‌ರವರು ನಾಡಿನ ಮುಖ್ಯಮಂತ್ರಿಗಳಾದರು.
ಅದೇ ರೀತಿಯಲ್ಲಿ ಲಿಂಗಾಯತ ಸಮುದಾಯದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ರವರೂ ಸಹ ಮುಖ್ಯಮಂತ್ರಿಗಳಾಗಿದ್ದಾರೆ. ಹಿಂದುಳಿದ ವರ್ಗದ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಸ್ಥಾನಮಾನವನ್ನು ಒದಗಿಸಿಕೊಟ್ಟ ಕ್ಷತ್ರಿಯ ಸಮಾಜದ ದೇವರಾಜ ಅರಸುರವರು ಮುಖ್ಯಮಂತ್ರಿಗಳಾಗಿ, ಎಲ್ಲಾ ವರ್ಗದ ಜನರ ಪ್ರತಿಭಾವಂತರನ್ನು ಗುರುತಿಸಿ ರಾಜಕೀಯ ಸ್ಥಾನಮಾನವನ್ನು ನೀಡಿ ಎರಡನೇ ಹಂತದ ನಾಯಕತ್ವವನ್ನು ಬೆಳೆಸಿದರು. ಇದೇ ಕೆಲಸವನ್ನು ಹೆಗ್ಗಡೆರವರು ಮತ್ತು ದೇವೆಗೌಡರೂ ಸಹ ಮಾಡಿರುತ್ತಾರೆ.
ಇತ್ತೀಚಿನ ದಶಕದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯನವರೂ ಸಹ ನಾಡಿನ ಮುಖ್ಯಮಂತಿಗಳಾಗಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿ ಮಾತ್ರವೇ ಎಲ್ಲಾ ವರ್ಗದ ಜನರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿರುತ್ತಾರೆ. ಹೀಗಾಗಿ ಪದೇ ಪದೇ ಕರ್ನಾಟಕದಲ್ಲಿ ಒಂದು ವರ್ಗದ ಮುಖ್ಯಮಂತ್ರಿಯನ್ನು ಮಾಡಬೇಕೆನ್ನುವ ಮಾತುಗಳನ್ನು ಕೇವಲ ಓಟಿನ ರಾಜಕಾರಣಕ್ಕಾಗಿ ಮಾತನಾಡುವುದು ನಾಡಿನ ಒಟ್ಟಾರೆ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.
ಮತ್ತೆ ಮತ್ತೆ ಹೇಳುತ್ತೇವೆ ನಮ್ಮ ರಾಜಕಾರಣಿಗಳ ಮಾತುಗಳು ನಡವಳಿಕೆಗಳು ಕುವೆಂಪುರವರ ತೋಟದ ಆಶಯಕ್ಕೆ ಮತ್ತು ಏಕೀಕರಣದ ಮಹತ್ತರ ಉದ್ದೇಶಗಳನ್ನು ಸರ್ವಜನಾಂಗದ ಶಾಂತಿಯ ತೋಟದ ಪ್ರಶ್ನಿಸುವಂತಹ ವಾತಾವರಣ ನಿರ್ಮಾಣವಾಗುವ ಕಾಲ ಬಂದಿತು. ಅದಕ್ಕಾಗಿ ಕರ್ನಾಟಕದ ಏಕೀಕರಣದ ಘನ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಹೋರಾಟಗಾರರ ತ್ಯಾಗ ಬಲಿದಾನ ಇವುಗಳಿಗೆ ಸದಾ ಧನ್ಯರಾಗಿರುತ್ತಾ ನಮ್ಮ ನಡವಳಿಕೆಯನ್ನು ಪ್ರದರ್ಶಿಸಬೇಕಾದರು ನಮ್ಮ ನಾಯಕರುಗಳಿಗಿರುವ ತುರ್ತಾದ ಸಂಸ್ಕಾರವಂತಿಕೆಯಾಗಿದೆ.
ಕೆ.ಎಸ್. ನಾಗರಾಜ್, ಬೆಂಗಳೂರು



