ಸಂವಿಧಾನಿಕ ಸಮಾಜದಲ್ಲಿನ ಯಾವುದೇ ಆಯ್ಕೆಯಲ್ಲಿ ‘ತನ್ನ’ ಆಯ್ಕೆಯ ಗೈರುಹಾಜರಿಯ ಕಾರಣಕ್ಕೆ ಡೆಮಾಕ್ರಟಿಕ್ ಪ್ರಶ್ನೆ ಎತ್ತುವವರನ್ನು ಆಳುವ ಏಜನ್ಸಿಗಳು ಮತ್ತಾವುದೋ ‘ಆಯ್ಕೆ’ ಯಲ್ಲಿ ಅವರನ್ನು ಒಳಗುಮಾಡಿಕೊಂಡು ಬಹುಬೇಗ ಭಿನ್ನಮತವನ್ನು ಬಗ್ಗು ಬಡಿಯುತ್ತವೆ. ಹೀಗೆ ತನ್ನ ನೆಲೆಯಿಂದ ಧ್ವನಿ ಎತ್ತುವವರ ಬಗ್ಗೆ ಆಳುವ ಏಜನ್ಸಿಗಳು ಎಂದಿಗೂ ಭಯ ಪಡುವುದಿಲ್ಲ. ಬದಲಾಗಿ ಅವರನ್ನು ತನಗೆ ಬೇಕಾದ ಹಾಗೆ ದಾಳಗಳಾಗಿ ಬಳಸಿಕೊಳ್ಳಲು ಯೋಚಿಸುತ್ತಿರುತ್ತದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಯಾವುದೋ ನೆಲೆಯಲ್ಲಿ ‘ತನ್ನ’ ಆಯ್ಕೆ ಆಗಿದೆ, ಆದರೆ ಒಟ್ಟಾರೆ ಆಯ್ಕೆ ಪ್ರಕ್ರಿಯೆ ಸಮಾನ ಪ್ರಾತಿನಿಧ್ಯ ಇಲ್ಲ ಎಂದು, ತನ್ನ ಆಯ್ಕೆಯ ಹಂಗು ಮೀರಿ ಪ್ರಜಾಪ್ರಭುತ್ವವಾದಿ ಪ್ರಶ್ನೆಗಳನ್ನು ಎತ್ತಿ ಪ್ರತಿರೋಧ ಒಡ್ಡಿದರೆ, ಅಂತಹ ಪ್ರತಿರೋಧವನ್ನು ಆಳುವ ಏಜನ್ಸಿಗಳು ದಮನ ಮಾಡಲಿಕ್ಕಾಗುವುದಿಲ್ಲ. ಬದಲಾಗಿ ಅಂತವರ ಭಿನ್ನಮತಕ್ಕೆ ಆಳುವವರು ಭಯ ಪಡುತ್ತಾರೆ. ಅಂತಹವರು ಹೆಚ್ಚಾದರೆ ಮುಂದೆ ಪ್ರಾತಿನಿಧ್ಯರಹಿತ ಅನ್ ಡೆಮಾಕ್ರಟಿಕ್ ಆದಂತಹ ಆಯ್ಕೆಗಳನ್ನು ಮಾಡಲು ಆಳುವ ಏಜನ್ಸಿಗಳು ಹಿಂದೇಟು ಹಾಕುತ್ತಾರೆ. ಅಥವಾ ಎಚ್ಚರ ವಹಿಸುತ್ತಾರೆ.
ಇದನ್ನೆ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಬಗ್ಗೆ ವಿಶ್ಲೇಷಿಸುತ್ತಾ, ‘ಸಮಾಜದ ಅಸಮಾನತೆಯ ವಿರುದ್ಧ ಕಾಲ ಕಾಲಕ್ಕೆ ಪ್ರಜ್ಞಾವಂತ ಜನರು ಧ್ವನಿ ಎತ್ತಬೇಕು. ಅಂದಾಗ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ’ ಎನ್ನುತ್ತಾರೆ.
– ಡಾ. ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು




