58ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ಜಿಲ್ಲೆಯಲ್ಲಿ 74 ಗ್ರಾಮಗಳು ಸಂಪೂರ್ಣ ಸಾಕ್ಷರತೆ, 2,89,033 ಅನಕ್ಷರಸ್ಥರಿಗೆ ಸಾಕ್ಷರತಾ ಪ್ರಮಾಣ ಪತ್ರ ವಿತರಣೆ: ಸುರೇಶ್ ಇಟ್ನಾಳ್
ದಾವಣಗೆರೆ: ಜಿಲ್ಲೆಯ 74 ಗ್ರಾಮಗಳನ್ನು ಸಂಪೂರ್ಣ ಸಾಕ್ಷರತೆ ಹೊಂದಿರುವ ಗ್ರಾಮಗಳೆಂದು ಗುರುತಿಸಿದ್ದು ಜಿಲ್ಲೆ ಶೇ 85 ರಷ್ಟು ಸಾಕ್ಷರತಾ ಪ್ರಮಾಣ ಹೊಂದಿದೆ. ಶೇ 100 ರಷ್ಟು ಸಾಧಿಸಲು ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ಕರೆ ನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಮಹಾನಗರ ಪಾಲಿಕೆಯ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಲೋಕ ಶಿಕ್ಷಣ ವಿಭಾಗ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಡಯಟ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 58 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1947ರಲ್ಲಿ ನಮ್ಮ ದೇಶದ ಸಾಕ್ಷರತೆ ಪ್ರಮಾಣ ಶೇ 12 ರಷ್ಟಿತ್ತು, 1951 ರಲ್ಲಿ ನಡೆದ ಜನಗಣತಿಯಿಂದ ಈ ಪ್ರಮಾಣ ಶೇ 18 ರ ಸಾಕ್ಷರತಾ ಪ್ರಮಾಣವಿತ್ತು. 2011ರ ಜನಗಣತಿಯಲ್ಲಿ ರಾಜ್ಯದ ಸಾಕ್ಷರತಾ ಪ್ರಮಾಣ ಶೇ 75.36 ಇದ್ದು ಇದರಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ಶೇ 82, ಮಹಿಳೆಯರು ಶೇ 68 ರಷ್ಟು ಸಾಕ್ಷರತೆ ಕಂಡು ಬಂದಿದೆ ಎಂದರು.
ಅಂದಾಜಿನ ಪ್ರಕಾರ 2024 ರಲ್ಲಿ ನಮ್ಮ ಜಿಲ್ಲೆ ಶೇ 85.95 ಸಾಕ್ಷರತಾ ಪ್ರಮಾಣ ಹೊಂದಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾ ಪಂಚಾಯತ್ ಲಿಂಕ್ ಡಾಕ್ಯುಮೆಂಟ್ ಅನ್ವಯ ಸರ್ಕಾರ ಒಂದು ಸಾವಿರ ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯಿತಿ ಅಂಕಿ ಅಂಶದನ್ವಯ ಕಳೆದ ಆರ್ಥಿಕ ವರ್ಷದಲ್ಲಿ ಜಿಲ್ಲೆಯ 24 ಗ್ರಾಮ ಪಂಚಾಯಿತಿ ಒಳಗೊಂಡ 74 ಗ್ರಾಮಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಜೊತೆಗೆ 280033 ಜನರನ್ನು ಕಲಿಕಾ ಕಾರ್ಯಕ್ರಮದ ಮೂಲಕ ಸಾಕ್ಷರರನ್ನಾಗಿ ಮಾಡಿ ಪ್ರಮಾಣ ಪತ್ರ ನೀಡಲಾಗಿದೆ ಎಂದರು.
ದಾವಣಗೆರೆ ಮಹಾನಗರ ಪಾಲಿಕೆಯ ಎಲ್ಲಾ ಪೌರಕಾರ್ಮಿಕರನ್ನು ಸಾಕ್ಷರರನ್ನಾಗಿಸಲು ನಿರ್ದೇಶನ ನೀಡಿದ್ದು, ಅವರು ಸಮೀಕ್ಷೆ ಕೈಗೊಂಡು ಪಾಲಿಕೆಯಲ್ಲಿ ಒಟ್ಟು 440 ಅನಕ್ಷರಸ್ಥರಿದ್ದು ಇವರನ್ನು ಸಾಕ್ಷರರನ್ನಾಗಿಸಲು 120 ಗಂಟೆಗಳ ಕಾಲ ಕಲಿಕೆ ಮತ್ತು 80 ಗಂಟೆಗಳ ಕಾಲ ಪ್ರಾಯೋಗಿಕ ತರಬೇತಿ ನೀಡುತ್ತಿದ್ದು, ಮುಂದಿನ ಮೂರು ತಿಂಗಳ ಅವಧಿಯಲ್ಲಿ ತರಬೇತಿ ನೀಡಿ ಸಾಕ್ಷರತಾ ಪರೀಕ್ಷೆ ಮಾಡಲಾಗುತ್ತದೆ, ಈ ಪರೀಕ್ಷೆ ಪಾಸಾದವರಿಗೆ ಸಾಕ್ಷರಸ್ಥರು ಎಂದು ಘೋಷಣೆ ಮಾಡಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದರು.
ಮಹಾನಗರ ಪಾಲಿಕೆ ಪೌರಕಾರ್ಮಿಕರಾದ ನೀವು ಸಾಕ್ಷರಸ್ಥರಾಗಬೇಕು, ನಿಮ್ಮ ಸಾಕ್ಷರತಾ ಮಟ್ಟದ ಮೇಲೆ ನಿಮ್ಮ ಮಕ್ಕಳ ಸಾಕ್ಷರತೆ ಮಟ್ಟ ಹೆಚ್ಚುತ್ತದೆ. ಯಾರು ಅನಕ್ಷರಸ್ಥರು ಇದ್ದಾರೋ ಅವರ ಮಕ್ಕಳು ಶಾಲೆಯ ಶಿಕ್ಷಣದಲ್ಲಿ ಹಿಂದೆ ಉಳಿದಿದ್ದಾರೆ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸದಲ್ಲಿ ಶಿಕ್ಷಕರ ಪಾತ್ರ ಅಷ್ಟೇ ಅಲ್ಲದೆ ಪೋಷಕರ ಪಾತ್ರ ಕೂಡ ಬಹಳ ಮುಖ್ಯವಾಗಿದೆ. ನೀವು ಅಕ್ಷರಸ್ಥರಾಗಿ, ನಿಮ್ಮ ಮಕ್ಕಳನ್ನು ಅಕ್ಷರಸ್ಥರನ್ನಾಗಿಸಿ ತಮ್ಮ ಮಕ್ಕಳೂ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಬೇಕು ಎಂದರು.
ಈ ವರ್ಷ ಒಟ್ಟು 148 ಗ್ರಾಮ ಪಂಚಾಯಿತಿಗಳನ್ನು ಸಂಪೂರ್ಣ ಸಾಕ್ಷರತೆಗೆ ಒಳಪಡಿಸಬೇಕೆಂಬ ಗುರಿ ಹೊಂದಿದ್ದೇವೆ. ಗ್ರಾಮ ಪಂಚಾಯತಿಯಲ್ಲಿಯೂ 259 ಸದಸ್ಯರು ಅನಕ್ಷರಸ್ಥರಿದ್ದಾರೆ, ಅವರಿಗೂ ಕಲಿಸುವ ಮೂಲಕ ತರಬೇತಿಯನ್ನು ನೀಡುತ್ತಿದ್ದೇವೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಕೇರಳದಲ್ಲಿ ನೂರು ಪ್ರತಿಶತ ಸಾಕ್ಷರತಾ ಪ್ರಮಾಣ ಇದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಸಹ ಶೇ 100 ರಷ್ಟು ಸಾಕ್ಷರತೆ ಹೊಂದಲು ನೀವು ಸಾಕ್ಷರಸ್ಥರಾಗಿ, ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು.
ಸಾಕ್ಷರತಾ ಕಾರ್ಯಕ್ರಮದಲ್ಲಿ ಸೇವೆಗೈದ ಸಾಕ್ಷರ ಸೇನಾನಿಗಳಾದ ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು ಇವರಿಗೆ ಸನ್ಮಾನಿಸಲಾಯಿತು. ಸಾಕ್ಷರತಾ ಸಪ್ತಾಹದ ಅಂಗವಾಗಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣ ಶೆಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಧು ಶಾ, ದ್ವಿತೀಯ ಸ್ಥಾನ ಸೌಮ್ಯ.ಎಸ್, ತೃತೀಯ ಸ್ಥಾನ ಪಡೆದ ವಿಜಯಲಕ್ಷ್ಮಿ .ಎಸ್ ಇವರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ವಿ. ನಾಗರಾಜ್, ಪಾಲಿಕೆ ಆಯುಕ್ತೆ ರೇಣುಕಾ, ಡಯಟ್ ಪ್ರಾಂಶುಪಾಲರಾದ ಗೀತಾ ಎಸ್, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ವಾಗಿಸ್ ಮಲ್ಕಿ ಒಡೆಯರ್, ಕೆ ಸಿ ಬಸವರಾಜ, ಗುರುಸಿದ್ಧ ಸ್ವಾಮಿ, ಸಾಕ್ಷರತಾ ಕಲಾತಂಡದ ಸಿಬ್ಬಂದಿ, ಮಹಾನಗರ ಪಾಲಿಕೆಯ ಪೌರಕಾರ್ಮಿಕರು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶಪ್ಪ ಎಚ್ .ದೊಡ್ಮನಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಾಯಕರಾದ ಪೂರ್ಣಿಮಾ ಜಿ ಸಿಬ್ಬಂದಿ ಹಾಜರಿದ್ದರು.




