ಬೆಂಗಳೂರು: ತಾಂತ್ರಿಕವಾಗಿ ಮುಂದುವರೆದಿರುವ ಅಮೆರಿಕಾ ಸೇರಿದಂತೆ ಹಲವಾರು ಇತರೆ ಮುಂದುವರೆದ ದೇಶಗಳ ಜನರನ್ನು ಬೆಳಗಾವಿ, ಬೆಂಗಳೂರಿನಲ್ಲಿ ಕುಳಿತವರು ಡಿಜಿಟಲ್ ಅರೆಸ್ಟ್ ಮಾಡುವಷ್ಟು ಮುಂದುವರೆದಿದ್ದಾರೆ. ಇಂತಹ ಆರೋಪಿಗಳನ್ನು ಬಂಧಿಸದೇ ಬಿಡುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜಿಟಲ್ ಫಾರೆಸ್ಟ್ ಹೆಸರಿನಲ್ಲಿ ಬೆಂಗಳೂರಿನ ಮಹಿಳಾ ಟೆಕ್ಕಿ ಒಬ್ಬರಿಗೆ 32 ಕೋಟಿ ರೂ. ವಂಚಿಸಿರುವ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿದರು.
ಮಹಿಳಾ ಟೆಕ್ಕಿ ಅವರನ್ನು ಕಳೆದ ಒಂದು ವರ್ಷದಕ್ಕಿಂತಲೂ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ದಿಗ್ಭಂಧನ ವಿಧಿಸಲಾಗಿದೆ. ಇವರ ಜೊತೆಗೆ ಸುಮಾರು 187ಕ್ಕಿಂತಲೂ ಹೆಚ್ಚು ಬಾರಿ ಹಣದ ವಹಿವಾಟು ನಡೆದಿದೆ. ಆರಂಭದಲ್ಲೇ ಅವರು ಮಾಹಿತಿ ನೀಡಿದ್ದರೆ ಒಂದಿಷ್ಟು ಹಣ ಉಳಿಯುತ್ತಿತ್ತು. ಆದರೆ ಮಾಹಿತಿ ನೀಡಲಾಗದಷ್ಟು ಅವರನ್ನು ಅಸಾಹಯಕತೆ ಸಿಲುಕಿಸಿರುವಂತಿದೆ. 30 ಕೋಟಿಗೂ ಹೆಚ್ಚಿನ ಹಣ ವರ್ಗಾವಣೆಯಾದ ಮೇಲೆ ನಮಗೆ ಮಾಹಿತಿ ಸಿಕ್ಕಿದೆ ಎಂದರು.
ಈ ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡಿದ್ದೇವೆ. ಅಮೆರಿಕಾದವರು ತಂತ್ರಜ್ಞಾನದಲ್ಲಿ ಮುಂದುವರೆದಿದ್ದಾರೆ. ಬೆಂಗಳೂರಿನಲ್ಲಿ ಕುಳಿತವರು ಅಮೆರಿಕದವರನ್ನೇ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದಾರೆ ಎಂದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಆರೋಪಿಗಳನ್ನು ಹಿಡಿದೆ ಹಿಡಿಯುತ್ತೇವೆ. ಸುಮ್ಮನೆ ಬಿಡುವುದಿಲ್ಲ ಎಂದರು.




