ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಪತ್ನಿ ಇದೀಗ ಹಲವರಿಗೆ ಮಾದರಿಯಾಗಿದ್ದಾರೆ. ಡಿಜಿಟಲ್ ಅರೆಸ್ಟ್ ಸುಳಿಗೆ ಸಿಕ್ಕ ಅವರು ಕೊನೆಯ ಕ್ಷಣದಲ್ಲಿ ತೋರಿದ ಚಾಣಾಕ್ಷತನದ ಪರಿಣಾಮವಾಗಿ ಕಳೆದುಕೊಂಡ ಹಣವನ್ನು ವಾಪಸ್ ಪಡೆದುದಲ್ಲದೆ ಖದೀಮ ಪೊಲೀಸರ ಬಲೆಗೆ ಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸುಧಾಕರ್ ಅವರ ಪತ್ನಿ ಡಿಜಿಟಲ್ ಅರೆಸ್ಟ್ ಆಗಿದ್ದು, 14 ಲಕ್ಷ ರೂ. ವಂಚನೆ ಮಾಡಲಾಗಿತ್ತು. ಸಕಾಲಕ್ಕೆ ದೂರು ನೀಡಿದ ಪರಿಣಾಮ ಹಣವನ್ನು ವಶಕ್ಕೆ ಪಡೆದು ಹಿಂದಿರುಗಿಸಲಾಗಿದೆ.
ಡಾ.ಕೆ.ಸುಧಾಕರ್ ಪತ್ನಿ ಪ್ರೀತಿ ಅವರಿಗೆ ಆಗಸ್ಟ್ 26ರಂದು ಸೈಬರ್ ವಂಚಕ ಕರೆ ಮಾಡಿ ನಾವು ಮಹಾರಾಷ್ಟ್ರದ ಮುಂಬಯಿ ಸೈಬರ್ ವಿಭಾಗದ ಸಿಬ್ಬಂದಿ ಎಂದು ಹೇಳಿಕೊಂಡು ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡು ಪ್ರೀತಿ ಅವರು ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಕೂಡಲೇ ಸಿಬ್ಬಂದಿ ಖಾತೆಯನ್ನು ಫ್ರೀಜ್ ಮಾಡಿದ್ದಾರೆ. ಬಳಿಕ ಕೋರ್ಟ್‌ನ ಮೊರೆ ಹೋಗಿ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ.
ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಅವರು ಮಾತನಾಡಿ ಕಳೆದ ಆಗಸ್ಟ್ 26ರಂದು ಬೆಳಗ್ಗೆ 9:30ಕ್ಕೆ ಮುಂಬೈ ಸೈಬರ್ ಕ್ರೈಮ್ ವಿಭಾಗದ ಪೊಲೀಸರ ಸೋಗಿನಲ್ಲಿ ಪ್ರೀತಿ ಅವರಿಗೆ ಕರೆ ಮಾಡಿದ್ದ ವಂಚಕರು 14 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು ಎಂದರು.
ಮುಂಬೈ ಸೈಬರ್ ಕ್ರೈಮ್ ವಿಭಾಗದ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದ ವಂಚಕರು, ‘ನಿಮ್ಮ ಕೆಲ ದಾಖಲೆಗಳನ್ನು ಸದ್ಭತ್ ಖಾನ್ ಎಂಬಾತ ಬಳಸಿಕೊಂಡು ವಿಯೆಟ್ನಾಂ, ಲಾವೋಸ್, ಕಾಂಬೋಡಿಯಾಗಳಲ್ಲಿ ಕಾನೂನುಬಾಹಿರ ಕೃತ್ಯಗಳನ್ನು ಎಸಗಿದ್ದಾನೆ ಎಂದು ಬೆದರಿಸಿದ್ದರು. ನಂತರ ಸದ್ಬತ್ ಖಾನ್‌ನನ್ನ ಸದ್ಯ ಬಂಧಿಸಲಾಗಿದ್ದು, ನಿಮ್ಮ ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಎಂದು ವಾಟ್ಸ್ಆ್ಯಪ್ ಮೂಲಕ ವಿಡಿಯೋ ಕರೆ ಮಾಡಿ ವೈಯಕ್ತಿಕ ದಾಖಲೆಗಳನ್ನ ಪಡೆದುಕೊಂಡು ‘ನಿಮ್ಮ ಖಾತೆ ಅಕ್ರಮವಾಗಿದ್ದು, ಆರ್‌ಬಿಐ ವೆರಿಫಿಕೇಷನ್ ಪ್ರಕ್ರಿಯೆ ನಡೆಸಬೇಕಿರುವುದರಿಂದ 14 ಲಕ್ಷ ರೂಪಾಯಿ ಹಣವನ್ನು ತಾವು ಹೇಳಿದ ಖಾತೆಗೆ ವರ್ಗಾಯಿಸುವಂತೆ’ ಸೂಚಿಸಿದ್ದರು.
ವೆರಿಫಿಕೇಷನ್ ಮುಗಿಸಿ 45 ನಿಮಿಷದಲ್ಲಿ ಹಣವನ್ನು ವಾಪಸ್ ಹಿಂದಿರುಗಿಸುವುದಾಗಿ ತಿಳಿಸಿದ್ದರು. ವಂಚನೆಯ ಬಗ್ಗೆ ಅರಿಯದ ಪ್ರೀತಿ ಸುಧಾಕರ್ ಅವರು 14 ಲಕ್ಷ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ವಂಚಕರ ಖಾತೆಗೆ ವರ್ಗಾಯಿಸಿದ್ದರು. ಹಣ ಪಾವತಿಸಿದ ಬಳಿಕ ವಂಚನೆಯಾಗಿರುವುದನ್ನು ಅರಿತ ಪ್ರೀತಿ ಸುಧಾಕರ್ ಕೂಡಲೇ ಪಶ್ಚಿಮ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಮಾಹಿತಿ ನೀಡಿದರು.
ಈ ಕುರಿತು ತನಿಖೆ ಕೈಗೊಂಡ ಸೈಬರ್ ಕ್ರೈಮ್ ಪೊಲೀಸರು ಕೂಡಲೇ ಪ್ರೀತಿ ಸುಧಾಕರ್ ಅವರಿಂದ ರಾಷ್ಟ್ರೀಯ ಸೈಬರ್ ಸಹಾಯವಾಣಿ (1930)ಗೆ ಕರೆಮಾಡಿಸಿ ದೂರು ದಾಖಲಿಸಿ, ವರ್ಗಾವಣೆಯಾದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಫ್ರೀಜ್ ಮಾಡಿಸಿದ್ದರು. ನಂತರ ಸೆಪ್ಟಂಬರ್ 3ರಂದು ನ್ಯಾಯಾಲಯದಿಂದ ಆದೇಶ ಪಡೆದು ವಂಚಕರ ಖಾತೆ ಸೇರಿದ್ದ 14 ಲಕ್ಷ ರೂಪಾಯಿ ಹಣವನ್ನು ತ್ವರಿತಗತಿಯಲ್ಲಿ ಪ್ರೀತಿ ಸುಧಾಕರ್ ಅವರ ಖಾತೆಗೆ ಮರು ವರ್ಗಾವಣೆ ಮಾಡಿಸಲಾಗಿದೆ ಎಂದರು.




