ನಾಯಕ ಎಂ.ಎಸ್.ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ಹೊರಟಿದೆ. ಸೆ. 19ರಂದು ಮುಂಬೈ ತಂಡವನ್ನು ಅಲ್ಲಿ ಈ ತಂಡ ಮುಖಾಮುಖಿಯಾಗಲಿದೆ. ಆದರೆ ಅದಕ್ಕಿಂತ ಮುಖ್ಯವಾಗಿ ದೋನಿಯವ ಹೊಸ ಅವತಾರ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.
ಸಾಮಾನ್ಯವಾಗಿ ದೋನಿ ತಮ್ಮ ಫಿಟ್ ನೆಸ್ ನಿಂದ, ಉದ್ದನೆಯ ಕೂದಲಿನಿಂದ, ಸ್ಟೈಲಿಷ್ ಲುಕ್ ನಿಂದ ಕ್ರೀಡಾಂಗಣದಲ್ಲಿ ಮತ್ತು ಹೊರಗೆ ಗಮನ ಸೆಳೆಯುತ್ತಾರೆ. ಕ್ರೀಡಾಂಗಣದಲ್ಲಿ ತಮ್ಮ ಹೆಲಿಕಾಪ್ಟರ್ ಶಾಟ್, ಕೂಲ್ ಕ್ಯಾಪ್ಟನ್ಸಿ ಮತ್ತು ಕೀಪಿಂಗ್ ಮೂಲಕ ಜನಪ್ರಿಯರಾಗಿದ್ದಾರೆ.
ಇದೀಗ ಐಪಿಎಲ್ ದೋನಿಯವರ ಹೊಸ ಚಿತ್ರವೊಂದನ್ನು ರಿಲೀಜ್ ಮಾಡಿದ್ದು, ರಾಕ್ ಸ್ಟಾರ್ ಅವತಾರದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ.