ವಿಶ್ವ ರ‍್ಯಾಂಕಿಂಗ್‌ ನಲ್ಲಿ 2ನೇ ಸ್ಥಾನಕ್ಕೇರಿದ ನೀರಜ್ ಚೋಪ್ರಾ

5 years ago

ದೆಹಲಿ: ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಪುರುಷರ ಜಾವೆಲಿನ್ ಥ್ರೋ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ರ‍್ಯಾಂಕಿಂಗ್ ನಲ್ಲಿ ಜರ್ಮನಿಯ ಜೊಹಾನ್ಸ್ ವೆಟರ್, 1,396 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. 1,315 ಅಂಕಗಳನ್ನು ಪಡೆದಿರುವ ನೀರಜ್ 2ನೇ ಸ್ಥಾನ ಅಲಂಕರಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ, ಚಿನ್ನ ಗೆಲ್ಲುವ ಮೂಲಕ ಸುವರ್ಣ ಪದಕ ದೊರಕಿಸಿಕೊಟ್ಟಿದ್ದರು. 23 ವರ್ಷದ ನೀರಜ್ ಚೋಪ್ರಾ, ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎಂಬ ದಾಖಲೆಯನ್ನು ಬರೆದಿದ್ದರು.

ಒಟ್ಟಿನಲ್ಲಿ ನೀರಜ್ ಚೋಪ್ರಾ ಸಾಧನೆ ಟೋಕಿಯೊ ಒಲಿಂಪಿಕ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ನ ಗಮನಾರ್ಹ ಘಟನೆಗಳಲ್ಲಿ ಒಂದು ಎಂದು ಹೆಸರಾಗಿದೆ. ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌ ಇವರ ಆಟವನ್ನು ಅಗ್ರ 10 ‘ಮಾಂತ್ರಿಕ ಕ್ಷಣ’ಗಳಲ್ಲಿ ಒಂದು ಎಂದು ಕೂಡ ಘೋಷಣೆ ಮಾಡಿದೆ. ಈ ಮೂಲಕ ಸಾಧನೆಯ ಮೇಲೆ ಮತ್ತೊಂದು ಸಾಧನೆಯನ್ನು ನೀರಜ್ ಮಾಡಿದಂತಾಗಿದೆ.

Leave a Reply