78ಕ್ಕೆ ಆಲ್ ಔಟ್ ಭಾರತ ಕ್ರಿಕೆಟ್ ತಂಡ

5 years ago

ಹೆಡಿಂಗ್ಲೆ: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 78 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಕಳಪೆ ಸಾಧನೆ ತೋರಿದೆ.  ಲೀಡ್ಸ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ಎಸೆತಗಳನ್ನು ಎದುರಿಸಲು ಪರದಾಡಿತು.

ಭಾರತದ ಪರ ರೋಹಿತ್ ಶರ್ಮಾ 19, ಕೆ.ಎಲ್.ರಾಹುಲ್ 0, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಬ್ ಪಂತ್ 2, ರವೀಂದ್ರ ಜಡೇಜಾ 4, ಮೊಹಮ್ಮದ್ ಶಮಿ 0, ಇಶಾಂತ್ ಶರ್ಮಾ ಅಜೇಯ 8, ಜಸ್ ಪ್ರೀತ್ ಬುಮ್ರಾ 0, ಸಿರಾಜ್ 3 ರನ್ ಬಾರಿಸಿದರು.

ಜೇಮ್ಸ್ ಆಂಡರ್ಸನ್, ಕ್ರೇಗ್ ಓವರ್ಟನ್ ತಲಾ 3, ರಾಬಿನ್ಸನ್ ಮತ್ತು ಸ್ಯಾಮ್ ಕುರ್ರೆನ್ ತಲಾ 2 ವಿಕೆಟ್ ಪಡೆದು ಭಾರತವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

Leave a Reply