ಕಳೆದ 30 ವರ್ಷದ ಅವಧಿಯಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ಕುಟುಂಬದವರಿಂದ ದೂರು ನೀಡಲು ಕೂಡಲೇ ಕೇಂದ್ರ ಒಂದನ್ನು ಸ್ಥಾಪಿಸಿ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಧರ್ಮಸ್ಥಳದಲ್ಲಿ ಕಳೆದ 30 ವರ್ಷಗಳ ಅವಧಿಯಲ್ಲಿ ಅದರಲ್ಲೂ ವಿಶೇಷವಾಗಿ 1995 ರಿಂದ 2014ರ ಅವಧಿಯಲ್ಲಿ ಈ ಭಾಗದಲ್ಲಿ ನೂರಾರು ಅನಾಮಧೇಯ ಶವಗಳನ್ನು ಹೂತು ಹಾಕಿರುವುದಾಗಿ ಅನಾಮಧೇಯ ವ್ಯಕ್ತಿ ಒಬ್ಬ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ, ಕೆಲವು ವಕೀಲರ ತೀವ್ರವಾದ ಆಸಕ್ತಿಯ ಮತ್ತು ನೆರವಿನ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ಶವಗಳನ್ನ ಹೂತು ಹಾಕಿದ ವ್ಯಕ್ತಿ ತಾನೇ ಮುಂದೆ ಬಂದು ಸ್ಥಳಗಳನ್ನು ಗುರುತಿಸಿ ಕೊಡುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ರಾಜ್ಯದಾದ್ಯಂತ ಎಲ್ಲ ವರ್ಗದ ಜನರಿಂದ ಈ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಲು ಒತ್ತಡ ಬಂದಿತು.
ಸಾರ್ವಜನಿಕ ಹಿತಾಸಕ್ತಿ ಮತ್ತು ರಾಜ್ಯ ಮಹಿಳಾ ಆಯೋಗದಿಂದ ಬಂದಿರುವಂತಹ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ಐಟಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ನೇಮಕ ಮಾಡಿರುವುದು ಉತ್ತಮವಾದಂತಹ ಕೆಲಸವಾಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ, ನ್ಯಾಯದ ಮುಂದೆ, ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಎಲ್ಲರೂ ಸಮಾನರು ಎನ್ನುವುದನ್ನು ಈ ಒಂದು ತೀರ್ಮಾನ ಎತ್ತಿ ತೋರಿಸಿದೆ.
ಯಾವುದೇ ರೀತಿಯ ಒತ್ತಡಗಳು ಪ್ರಭಾವಗಳಿಗೆ ಬಲಿಯಾಗದೆ ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಎಸ್ಐಟಿ ರಚನೆಗೆ ತೀರ್ಮಾನ ಮಾಡುವುದರ ಮೂಲಕ ಇಂತಹ ಗಂಭೀರ ಪ್ರಕರಣದಲ್ಲಿ ಸ್ಪಷ್ಟತೆ ದೊರೆಯುತ್ತದೆಂಬುದು ಎಲ್ಲರ ಭಾವನೆಯಾಗಿದೆ.
ಈ ಕೂಡಲೇ ರಾಜ್ಯ ಸರ್ಕಾರ ಸಂಬಂಧಪಟ್ಟ ಜಿಲ್ಲೆ ಮತ್ತು ತಾಲೂಕಿನಲ್ಲಿ ಒಂದು ಕೇಂದ್ರವನ್ನ ಸ್ಥಾಪಿಸಲಿ. ಕಳೆದ 30 ವರ್ಷದ ಅವಧಿಯಲ್ಲಿ ಯಾರ, ಯಾರ ಮನೆಯಿಂದ ಕಾಣೆಯಾಗಿರುವ ವ್ಯಕ್ತಿಗಳ ವಿವರವನ್ನು ಈ ದೂರು ಕೇಂದ್ರದಲ್ಲಿ ಅವರ ಕುಟುಂಬಸ್ಥರು ನೀಡಲಿ. ಇದರಿಂದ ಒಟ್ಟು ದೊರೆಯುವ ಅನುಮಾನ ಶವಗಳು ಮತ್ತು ಈ ಅವಧಿಯಲ್ಲಿ ಇಲ್ಲಿಯವರೆಗೂ ಪತ್ತೆಯಾಗದೆ ಕಾಣೆಯಾಗಿರುವ ವ್ಯಕ್ತಿಗಳ ವಿವರವನ್ನು ಎಚ್ಚರಿಕೆಯಿಂದ ಗಮನಿಸಿದರೆ ಮತ್ತಷ್ಟು ಮಾಹಿತಿ ತನಿಖೆಗೆ ಪೂರಕವಾಗುತ್ತದೆ.
ಹೆಣಗಳನ್ನು ಹೂತು ಹಾಕಿರುವ ವ್ಯಕ್ತಿ ದೂರು ನೀಡಲು ಮುಂದೆ ಬಂದದ್ದು ಮತ್ತು ಅವನಿಗೆ ನೆರವಾಗಿ ನಿಂತ ವಕೀಲರು ಸಮಾಜದ ಹಿತವನ್ನು ಬಯಸುವ ಸಂಘಟನೆಗಳು ಎಲ್ಲರ ಪ್ರಯತ್ನ ಯಶಸ್ವಿಯಾಗಬೇಕಾದರೆ ತನಿಖೆ ನಡೆಸುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನ ಇಡಬೇಕಾಗಿದೆ. ಕಾರಣ ಅಪರಾಧ ನಡೆದಿರುವ ಸ್ಥಳ ಮತ್ತು ಇವರ ಹಿನ್ನೆಲೆ ಅತ್ಯಂತ ಸೂಕ್ಷ್ಮವಾದದ್ದು.
– ಕೆ ಎಸ್ ನಾಗರಾಜ್, ಬೆಂಗಳೂರು




