ಬೆಂಗಳೂರು: ಧರ್ಮಸ್ಥಳ ಹತ್ಯೆಗಳ ಕುರಿತು ತನಿಖೆ ಚುರುಕುಗೊಳಿಸಬೇಕು ಮತ್ತು ಎಸ್ ಐ ಟಿ ರಚಿಸಬೇಕು ಎಂದು ಸೆಲೆಬ್ರಿಟಿಗಳಿಂದ ಒತ್ತಡ ಕೇಳಿಬಂದಿದೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಕೆಲವು ದಿನಗಳ ಹಿಂದೆ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಜೀವಬೆದರಿಕೆಯೊಡ್ಡಿ ನನ್ನಿಂದ ಅಂತ್ಯಸಂಸ್ಕಾರ ಮಾಡಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರುನೀಡಿದ್ದರು. ಆದರೆ ಇದುವರೆಗೆ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಸಕಾರಾತ್ಮಕ ನಿಟ್ಟಿನಲ್ಲಿ ತನಿಖೆ ನಡೆದಿಲ್ಲ. ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಮಾಜಿಕ ಹೋರಾಟಗಾರರು, ಜೀವಪರರು ಮತ್ತು ಆಯ್ದ ಕೆಲವು ಯೂಟ್ಯೂಬ್ ವಾಹಿನಿಗಳು ದೊಡ್ಡಮಟ್ಟದ ಕೂಗೆಬ್ಬಿಸಿವೆ. ಆದರೆ, ಈ ಸುದ್ದಿಯಿಂದ ಮುಖ್ಯವಾಹಿನಿ ಮಾಧ್ಯಮಗಳು ಅಂತರ ಕಾಯ್ದುಕೊಂಡಿದ್ದು, ದಿವ್ಯಮೌನ ವಹಿಸಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಹೇರಿರುವ ಮಾಜಿ ಸಂಸದೆ ಮತ್ತು ನಟಿ ರಮ್ಯಾ, ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮತ್ತು ಮಹಿಳೆಯರು ನಾಪತ್ತೆಯಾದ ಘಟನೆಗಳ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ. ಧರ್ಮಸ್ಥಳ ಅನೇಕರಿಗೆ ಆರಾಧನೆಯ ಸ್ಥಳವಾಗಿದೆ. ರಾಜ್ಯದ ಜನ ಈ ಪೂಜ್ಯ ಸ್ಥಳವನ್ನು ಹೆಚ್ಚು ಗೌರವಿಸುತ್ತಾರೆ. ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಎಂದು ನಾನು ಆಶಿಸುತ್ತೇನೆ. ನಾವು ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜೊತೆಗೆ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಒತ್ತಡ ಹೇರಿದ್ದು, ಮಾನ್ಯ ಮುಖ್ಯ ಮಂತ್ರಿಗಳೆ..
@siddaramaiah ರವರೆ. ನಿಮ್ಮ ಮಾತಿನ ಮೇಲೆ ಭರವಸೆಯಿದೆ… ಆದರೆ ಈ ದಾರುಣ ಹಂತಕರನ್ನು.. ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು ನಂಬುವ ಹಾಗಿಲ್ಲ… ದಯವಿಟ್ಟು ತನಿಖೆ ವಿಳಂಬವಾಗಿ… ಸಾಕ್ಷಾಧಾರಗಳು ನಾಶವಾಗದಂತೆ… ತುರ್ತು ಕ್ರಮ ತೆಗುದುಕೊಳ್ಳಿ. SIT ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ .. #justasking ಎಂದಿದ್ದಾರೆ.
ಇನ್ನು ನಟ ರಾಕೇಶ್ ಅಡಿಗ ಕೂಡ ದನಿಗೂಡಿಸಿದ್ದು, ನಮಸ್ಕಾರ, ನಾನು ನಿಮ್ಮ ರಾಕೇಶ್ ಅಡಿಗ.
ಇಂದು ನಾನು ನಿಮ್ಮ ಮುಂದೆ ಕೇವಲ ಒಬ್ಬ ನಟನಾಗಿ ನಿಂತಿಲ್ಲ, ಬದಲಿಗೆ ಕನ್ನಡದ ಸಹೋದರನಾಗಿ ನಿಂತಿದ್ದೇನೆ. ನಮ್ಮ ಪ್ರೀತಿಯ ನಾಡಿನಲ್ಲಿ ಪ್ರತಿಧ್ವನಿಸುತ್ತಿರುವ ಒಂದು ಪ್ರಶ್ನೆಯಿಂದ ನನ್ನ ಹೃದಯ ಭಾರವಾಗಿದೆ: ಅದು ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಹತ್ಯೆಗಳ ಕುರಿತಾಗಿದ್ದು ಎಂದಿದ್ದಾರೆ.
ನ್ಯಾಯಾಲಯದಲ್ಲಿ ದಾಖಲಾದ ನಂತರವೂ ಈ ಸಾಮೂಹಿಕ ಶವಸಂಸ್ಕಾರದ ಸುತ್ತಲಿನ ಮೌನವು ನಮ್ಮ ಸಾಮೂಹಿಕ ಆತ್ಮಸಾಕ್ಷಿಯನ್ನು ಕಲಕಿದೆ. ಇದು ಕೇವಲ ಒಂದು ಸುದ್ದಿ, ಕಥೆಯಲ್ಲ; ಇದು ಕರ್ನಾಟಕದ ಇತಿಹಾಸದ ಒಂದು ದೊಡ್ಡ ಗಾಯ, ನಮ್ಮ ಮಾನವೀಯತೆಯ ಮೇಲೆ ಮೂಡಿರುವ ಒಂದು ಕಲೆ. ಒಬ್ಬ ಕನ್ನಡಿಗನಾಗಿ, ಉತ್ತರಗಳನ್ನು ಕೇಳುವುದು ನನ್ನ ಕರ್ತವ್ಯ, ನಮ್ಮೆಲ್ಲರ ಕರ್ತವ್ಯ ಎಂದಿದ್ದಾರೆ.
ನಾವು ವರದಿಗಳನ್ನು ನೋಡುತ್ತಿದ್ದೇವೆ, ಪಿಸುಮಾತುಗಳನ್ನು ಕೇಳುತ್ತಿದ್ದೇವೆ, ಅನುಮಾನವನ್ನೂ ಹೊಂದಿದ್ದೇವೆ. ಆದರೆ ಮೃತರ ಘನತೆ, ಅವರ ಕುಟುಂಬಗಳ ದುಃಖ – ಬಯಸುವುದು ನ್ಯಾಯವನ್ನು ಮಾತ್ರ. ಇದಕ್ಕಾಗಿ ಪಾರದರ್ಶಕ ತನಿಖೆ ತುರ್ತು ಅಗತ್ಯ ಎಂದಿದ್ದಾರೆ.
ಈ ಪ್ರಕರಣವನ್ನೂ ಮರೆತುಹೋಗುವ ಕಡತಗಳಲ್ಲಿ ಮರೆಯಾಗಲು ಬಿಡುತ್ತೇವೆಯೇ? ನಮ್ಮದೇ ನೆಲದಲ್ಲಿ ಏನಾಯಿತು ಎಂಬುದರ ಬಗ್ಗೆ ನಾವು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತೇವೆಯೇ? ಸಾಧ್ಯವಿಲ್ಲ ಎಂದಿದ್ದಾರೆ.
ಇದು ರಾಜಕೀಯ ವಿಷಯವಲ್ಲ; ಇದು ಮಾನವೀಯತೆಯ ವಿಷಯ. ಹುಟ್ಟು ಮಾತ್ರವಲ್ಲ, ಸಾವಿನ ಘನತೆಯನ್ನೂ ಎತ್ತಿ ಹಿಡಿಯುವ ವಿಷಯ. ಇದಕ್ಕಾಗಿ ಧ್ವನಿಗಳು ಒಟ್ಟಾಗಬೇಕಾದ ವಿಷಯ. ಸತ್ಯಕ್ಕಾಗಿ ನಮ್ಮ ಸಾಮೂಹಿಕ ಬೇಡಿಕೆಯು ಅಸಡ್ಡೆಯ ಅಡಿಪಾಯವನ್ನು ಅಲುಗಾಡಿಸಲಿ. ಸಿಕ್ಕ ಎಲ್ಲಾ ವೇದಿಕೆಗಳಲ್ಲೂ ನ್ಯಾಯದ ಬೇಡಿಕೆ ಮುಂದಿಡೋಣ ಸಾಮಾಜಿಕ ಮಾಧ್ಯಮ, ಸಾರ್ವಜನಿಕ ವೇದಿಕೆಗಳು, ನಮ್ಮ ಮನೆಗಳಲ್ಲಿನ ಸಂಭಾಷಣೆಗಳು- ಈ ಘೋರ ಅನ್ಯಾಯದ ತನಿಖೆಗೆ ಒತ್ತಾಯಿಸಲು ಬಳಸೋಣ ಎಂದು ಕರೆನೀಡಿದ್ದಾರೆ.
ನಮ್ಮ ಸರ್ಕಾರಕ್ಕೆ, ನಾನು ಬೇಡಿಕೊಳ್ಳುತ್ತೇನೆ, ನಿಮ್ಮ ಜನರ ನಿಟ್ಟುಸಿರಿಗೆ ಎದುರಾಗಿ, ಅವರ ಅಳಲನ್ನು ಆಲಿಸಿ. ತನಿಖೆ ನಡೆಸುವುದು, ಸತ್ಯವನ್ನು ಹೊರಹಾಕುವುದು ಮತ್ತು ನ್ಯಾಯವನ್ನು ಖಚಿತಪಡಿಸುವುದು ನಿಮ್ಮ ಪವಿತ್ರ ಕರ್ತವ್ಯ. ಇನ್ನು ವಿಳಂಬ ಬೇಡ, ಇನ್ನು ನೆಪಗಳು ಬೇಡ. ಜೈ ಕರ್ನಾಟಕ ಮಾತೆ! ಎಂದಿದ್ದಾರೆ.




