ರಾಜ್ಯದಲ್ಲಿ ಹೆಚ್ಚುತ್ತಿರುವ ವನ್ಯಜೀವಿಗಳ ಸಾವು
ಎಸ್ ಐ ಟಿ ರಚಿಸಲು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ವಿವಿಧ ಕಾರಣಗಳಿಂದ ವನ್ಯಜೀವಿಗಳ ಅಕಾಲಿಕ ಸಾವು, ದುರ್ಮರಣ, ಹತ್ಯೆ, ಅಪಘಾತಗಳ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು ನೂರಾರು ವನ್ಯಜೀವಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಎಸ್ ಐ ಟಿ ರಚಿಸಬೇಕು ಮತ್ತು ರಾಜ್ಯದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ತುರ್ತು ಸಭೆ ನಡೆಸಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಅರಣ್ಯ, ಜೈವಿಕ ಮತ್ತು ಪರಿಸರ ಖಾತೆ ಸಚಿವರಿಗೆ ಮನವಿ ಸಲ್ಲಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜೂನ್ 26 ರಂದು, ಮಲೆ ಮಹದೇಶ್ವರ ವನ್ಯಜೀವಿ ಧಾಮದ ಮೀಣ್ಯಂ ನಲ್ಲಿ ಐದು ಹುಲಿಗಳಿಗೆ ವಿಷಪ್ರಾಷನದಿಂದ ಧಾರುಣ ಸಾವು, ಜುಲೈ 01 ರಂದು ಬೆಂಗಳೂರು ಕಗ್ಗಲಿಪುರ ಅರಣ್ಯ ಧಾಮದಲ್ಲಿ ಒಂಭತ್ತು ಜಿಂಕೆ ಮತ್ತು ಕಾಡುಹಂದಿ ಹತ್ಯೆ ಮಾಡಿ, ಮಾಂಸಕ್ಕಾಗಿ ಮಾರಾಟ ಮಾಡಲು ಬೇಟೆ.
ಜುಲೈ 08 ರಂದು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹಿಮಾ ದಾಸ್ ಎಂಬ ಹುಲಿಯು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಮರಿ ಹಾಕಿದ ಮೇಲೆ ತಾಯಿ ಹುಲಿ ಅವುಗಳನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಮೂರು ಮರಿಗಳ ಸಾವು. ಆಗಸ್ಟ್ 04 ರಂದು ತುಮಕೂರು ಜಿಲ್ಲೆಯ ಮಿಡಿಗೇಶಿಯಲ್ಲಿ ಜಮೀನಿನಲ್ಲಿ ವಿಷಯುಕ್ತ ಬಿತ್ತನೆ ಬೀಜಗಳ ಸೇವಿಸಿ ಇಪ್ಪತ್ತು ನವಿಲುಗಳ ಸಾವು, ಚಾಮರಾಜನಗರ ಗುಂಡ್ಲುಪೇಟೆ ಕಂದೇಗಾಲದಲ್ಲಿ ಜುಲೈ 02 ರಂದು ಇಪ್ಪತ್ತು ಕೋತಿಗಳಿಗೆ ವಿಷ ಹಾಕಿ ಹತ್ಯೆ. ಮೊನ್ನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಗಸ್ತಿನ ಹೊಳೆ ವ್ಯಾಪ್ತಿಯ ಮುರದಟ್ಟಿಯ ಕಿರುಬನಕಲ್ಲು ಗುಡ್ಡದಲ್ಲಿ ಎರಡು ಹುಲಿ ಮರಿಗಳು ಮೃತಪಟ್ಟಿದ್ದವು.

ಇದೀಗ ಮತ್ತೆ ಆಗಸ್ಟ್ 12 ರಂದು ಕಾವೇರಿ ವನ್ಯಜೀವಿಧಾಮದ ಹನೂರು ತಾಲೂಕಿನ ಬಂಡಳ್ಳಿ ಶಾಖೆಯ ತಮ್ಮಡಿಹಳ್ಳ ಎಂಬಲ್ಲಿ ಹೆಣ್ಣು ಚಿರತೆ ಪಾರ್ಶ್ವವಾಯುಗೆ ತುತ್ತಾಗಿ ಸಾವನ್ನಪ್ಪಿದ್ದು, ಆಗಸ್ಟ್ 19 ರಂದು ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸುವಾಗ ಚಿರತೆ ಸಾವು ಮತ್ತು ಹುಲಿ ಸಾವು ಹೀಗೆ ಚಾಮರಾಜನಗರ ಗಡಿಜಿಲ್ಲೆಯಲ್ಲಿ ವನ್ಯಜೀವಿಗಳ ಧಾರುಣವಾದ ಸಾವು, ಮತ್ತು ಚಿತ್ರದುರ್ಗ ಸೇರಿದಂತೆ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿವ ಕರಡಿಗಳ ದುರ್ಮರಣ. ಅತ್ಯಂತ ನೋವಿನ ಸಂಗತಿ ಇದು ಪರಿಸರಕ್ಕೆ ಅಪಾಯಕಾರಿ ಎಂದು ನಿಯೋಗದಲ್ಲಿದ್ದ ರಾಜ್ಯಾಧ್ಯಕ್ಷ ಮಾಲತೇಶ್ ಅರಸ್, ಹಿರಿಯ ಉಪಾಧ್ಯಕ್ಷ, ಉತ್ತರ ಕರ್ನಾಟಕ ಉಸ್ತುವಾರಿ, ಹಿರಿಯ ಉಪಾಧ್ಯಕ್ಷ ಗುರುರಾಜ್ ಹೂಗಾರ್, ಜಲ ಜಾಗೃತಿ ಉಪಾಧ್ಯಕ್ಷ ಕೆ.ಓಂಕಾರಪ್ಪ ಮೌರ್ಯ, ಪ್ರಧಾನ ಕಾರ್ಯದರ್ಶಿ ಟಿ ರುದ್ರಮುನಿ, ರಾಜ್ಯ ನಿರ್ದೇಶಕ ಮಹೇಶ್ ಗೌಡಹಳ್ಳಿ, ಸದಸ್ಯ ಪ್ರಭುಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಾವೇರಿ ವನ್ಯಜೀವಿಧಾಮದ ಹನೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆ ನಡೆಸಬೇಕು. ನಿರಂತರ ಸಾವುಗಳು ಪರಿಸರದ ಮೇಲೆ ಅತ್ಯಂತ ಪರಿಣಾಮಕಾರಿ ಯಾಗಿರುತ್ತದೆ. ಕೇವಲ ಅಧಿಕಾರಿಗಳು ಸಭೆ ನಡೆಸಿ ಕೈ ತೊಳೆದುಕೊಂಡರೆ ಸಾಲದು. ಮನುಷ್ಯ ನಿಗೂಢ ಸಾವಿಗೂ, ಹತ್ಯೆಗೆ ಹೆಚ್ಚು ಒತ್ತು ಕೊಡುವ ಸರ್ಕಾರವು ಸಂವಿಧಾನದಲ್ಲಿ ಮಾನವನಿಗಿಂತ ಹೆಚ್ಚು ಪರಿಸರ, ವನ್ಯಜೀವಿ, ಜೀವವೈವಿಧ್ಯ ಸಂಕುಲ ಇದೆ ಅವುಗಳಿಗೂ ಕಾನೂನು ಇದೆ. ಅರಣ್ಯ ಪ್ರದೇಶದಲ್ಲಿ ನಡೆಯುವ ಘಟನೆಗಳು ಸರ್ಕಾರಕ್ಕೆ ತಿಳಿಯುತ್ತಿಲ್ಲ, ಕೆಲವು ಅಧಿಕಾರಿಗಳು ಪ್ರಾಣಿಗಳ ಸಾವು, ಹತ್ಯೆಯನ್ನು ಮುಚ್ಚಿ ಹಾಕುತ್ತಿರುವ ದೂರು ಬಂದಿವೆ ಈ ಹಿನ್ನೆಲೆಯಲ್ಲಿ ರಾಜ್ಯದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಾಲತೇಶ್ ಅರಸ್ ಹರ್ತಿಕೋಟೆ, ಉತ್ತರ ಕರ್ನಾಟಕದ ಉಸ್ತುವಾರಿ ಗುರುರಾಜ್ ಹೂಗಾರ್ ಮುಖ್ಯಮಂತ್ರಿಗಳ ಪರವಾಗಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಮತ್ತು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ವಿವಿಧ ಕಾರಣಗಳಿಂದ ವನ್ಯಜೀವಿಗಳ ಅಕಾಲಿಕ ಸಾವು, ದುರ್ಮರಣ, ಹತ್ಯೆ, ಅಪಘಾತಗಳ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು ನೂರಾರು ವನ್ಯಜೀವಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಎಸ್ ಐ ಟಿ ರಚಿಸಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್ ಮುಖ್ಯಮಂತ್ರಿಗಳ ಪರವಾಗಿ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಿದರು.




